ತುಮಕೂರು : ಕೃಷಿ ಸಖಿಯರಿಗೆ ಐದು ದಿನಗಳ ನೈಸರ್ಗಿಕ ಕೃಷಿ ತರಬೇತಿ
ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ವಿಭಿನ್ನವಾಗಿದ್ದು, ಕೆಲವು ಅಂಶಗಳಲ್ಲಿ ಮಾತ್ರ ಸಾಮ್ಯತೆಯಿದೆ. ನೈಸರ್ಗಿಕ ಕೃಷಿಯಲ್ಲಿ ಪಾರಂಪರಿಕ ಪದ್ಧತಿಗಳು ಮತ್ತು ಜೈವಿಕ ಪರಿಕರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಹೇಳಿದರು.
ತಿಪಟೂರು : ನೈಸರ್ಗಿಕ ಕೃಷಿ ಹಾಗೂ ಸಾವಯವ ಕೃಷಿ ವಿಭಿನ್ನವಾಗಿದ್ದು, ಕೆಲವು ಅಂಶಗಳಲ್ಲಿ ಮಾತ್ರ ಸಾಮ್ಯತೆಯಿದೆ. ನೈಸರ್ಗಿಕ ಕೃಷಿಯಲ್ಲಿ ಪಾರಂಪರಿಕ ಪದ್ಧತಿಗಳು ಮತ್ತು ಜೈವಿಕ ಪರಿಕರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ಹೇಳಿದರು.
ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ ಹಾಗೂ ಸಂಜೀವಿನಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಸಖಿಯರಿಗೆ ಐದು ದಿನಗಳ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ ಉದ್ಆಟಿಸಿ ಅವರು ಮಾತನಾಡಿದರು. ವಯವ ಕೃಷಿ ಪದ್ಧತಿಯಲ್ಲಿ ಮುಖ್ಯವಾಗಿ ನಿರ್ದಿಷ್ಟ ಪ್ರಮಾಣೀಕರಣ ಮಾನದಂಡಗಳಿಗೆ ಬದ್ಧವಾಗಿದೆ ಎಂದರು. ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ಮುಖ್ಯಸ್ಥರಾದ ಡಾ.ವಿ.ಗೋವಿಂದಗೌಡ, ರೈತರು ತಮ್ಮ ಜಮೀನನ್ನು ನೈಸರ್ಗಿಕ ಕೃಷಿಗೆ ಪರಿವರ್ತಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಆರೋಗ್ಯ ಅರಿತು, ಸ್ಥಳೀಯ ಪದ್ಧತಿಗಳನ್ನು ಅರ್ಥಮಾಡಿಕೊಂಡು ಕ್ರಮೇಣ ರಾಸಾಯನಿಕ ಪರಿಕರಗಳ ಬಳಕೆ ಕಡಿಮೆ ಮಾಡುವುದರ ಮೂಲಕ ಪ್ರಾರಂಭಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರಾದ ಜಗನ್ನಾಥ, ಪ್ರಗತಿ ಪರ ರೈತ ತಡಸೂರು ಯೋಗಾನಂದ ಮೂರ್ತಿ, ತರಬೇತಿ ಸಂಯೋಜಕರಾದ ದರ್ಶನ್, ಕೇಂದ್ರದ ವಿಜ್ಞಾನಿಗಳಾದ ಡಾ. ನಿತ್ಯಶ್ರೀ, ಮನೋಜ್, ಡಾ. ತಸ್ಮಿಯಾ ಕೌಸರ್, ಡಾ. ಕೀರ್ತಿಶಂಕರ್, ಡಾ. ಸತೀಶ್, ಚಿ.ನಾ. ಹಳ್ಳಿಯ ಸಂಜೀವಿನಿ ವಿಭಾಗದ ಭರತ್ ಸೇರಿದಂತೆ 36 ಕೃಷಿ ಸಖಿಯರು ಭಾಗವಹಿಸಿದ್ದರು.