Tumkur Election : ಕಾಂಗ್ರೆಸ್ ಬೆಂಬಲಿತ 13ಮಂದಿ ಆಯ್ಕೆ
ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆದಿದ್ದು ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಸಂಘದ ಹಾಲಿ ಹ್ಯಾಟ್ರಿಕ್ ಅಧ್ಯಕ್ಷ ಚಂದ್ರಶೇಖರರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ 13ಮಂದಿ ಸದಸ್ಯರು ಹೆಚ್ಚಿನ ಮತ ಪಡೆದು ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಪಾವಗಡ : ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆದಿದ್ದು ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಸಂಘದ ಹಾಲಿ ಹ್ಯಾಟ್ರಿಕ್ ಅಧ್ಯಕ್ಷ ಚಂದ್ರಶೇಖರರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ 13ಮಂದಿ ಸದಸ್ಯರು ಹೆಚ್ಚಿನ ಮತ ಪಡೆದು ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಹಾಲು ಉತ್ಪಾದಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ನಿರ್ದೇಶಕರ ಅಭಿನಂದನ ಸಮಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಜಿ.ಒಬಳನಾಯಕ ಮಾತನಾಡಿ, ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ತಾಲೂಕು ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರರೆಡ್ಡಿ ಸಹಕಾರದ ಮೇರೆಗೆ 13ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದು ಕಳೆದ 10 ದಿನಗಳಿಂದ ಜೆಡಿಎಸ್‌ನತ್ತ ಸಳೆಯಲು ತೀವ್ರ ಕಸರತ್ತು ನಡೆಸಿದ್ದ ಇಲ್ಲಿನ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಚನ್ನಮಲ್ಲಯ್ಯ ಹಾಗೂ ಈತನ ಬೆಂಬಲಿಗರಿಗೆ, ತೀವ್ರ ಮುಖ ಭಂಗವಾಗಿದೆ ಎಂದು ಟೀಕಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಮಾತನಾಡಿ, ಇಲ್ಲಿನ ಹಾಲು ಉತ್ಪಾದಕರ ಸಂಘದ ಚುನಾವಣೆ ನಿಯಮನುಸಾರ ನಡೆಸಿದ್ದು ತೊಂದರೆ ಕೊಡಲು ವಿನಾ ಕಾರಣದ ನೆಪವೊಡ್ಡಿ ಸಹಕಾರ ಸಂಘದಲ್ಲಿದ್ದ 48ಮಂದಿ ಪೈಕಿ 8ಮಂದಿ ಸದಸ್ಯರ ಸದಸ್ಯತ್ವವನ್ನೆ ರದ್ದು ಪಡಿಸಿದ್ದರು. ಇದನ್ನು ಪ್ರಶ್ನಿಸಿ ದಾಖಲೆ ಸಮೇತ ನಿಯಮನುಸಾರ ನ್ಯಾಯಾಲಯದ ಮೊರೆ ಹೋದ ಪ್ರಯುಕ್ತ ದಾಖಲೆ ಪರಿಶೀಲಿಸಿದ ನ್ಯಾಯಾಲಯ ಸದಸ್ಯತ್ವ ಅಂಗೀಕರಕ್ಕೆ ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ರದ್ದಾದ 8 ಮಂದಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಸಿಕ್ಕಿದ್ದು, ಈ ಹಿನ್ನಲೆಯಲ್ಲಿ 13ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ದೊಡ್ಡೇನಹಳ್ಳಿ ಮಾರಣ್ಣ, ರಂಗಸಮುದ್ರ ಗ್ರಾಪಂ ಅಧ್ಯಕ್ಷ ಮಾರಕ್ಕ, ಸದಸ್ಯ ಕೃಷ್ಣಪ್ಪ, ಅಕ್ಕಮ್ಮ, ಹಾಗೂ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗೋಪಾಲಕೃಷ್ಣ (ಶಾನುಭೋಗ) ರಾಮಪ್ಪ ಜಯಣ್ಣ ಬಿ.ಕೆ.ಪಾಲಯ್ಯ, ಸಂಘದ ನೂತನ ನಿರ್ದೇಶಕರಿದ್ದರು.