ತುಮಕೂರು: ಸಾಂಸ್ಕೃತಿಕ ರಾಯಭಾರಿ ಉದ್ಯಾನವನ ಕುಡುಕರ ತಾಣ
ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಬಾಳೆ ಗೌಡ ಪಾರ್ಕ್‌ನಲ್ಲಿ ನೀರಿಲ್ಲದೆ ಗಿಡ ಒಣಗುತ್ತಿವೆ. ರಾತ್ರಿ, ಮಧ್ಯಾಹ್ನ ಕುಡುಕರ ತಾಣವಾಗಿದೆ. ಈ ಬಗ್ಗೆ ಪುರಸಭಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸದಸ್ಯ ಕೋಟೆ ನಾಗಣ್ಣ ಆರೋಪಿಸಿದ್ದಾರೆ,
ಕುಣಿಗಲ್ : ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಬಾಳೆ ಗೌಡ ಪಾರ್ಕ್‌ನಲ್ಲಿ ನೀರಿಲ್ಲದೆ ಗಿಡ ಒಣಗುತ್ತಿವೆ. ರಾತ್ರಿ, ಮಧ್ಯಾಹ್ನ ಕುಡುಕರ ತಾಣವಾಗಿದೆ. ಈ ಬಗ್ಗೆ ಪುರಸಭಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸದಸ್ಯ ಕೋಟೆ ನಾಗಣ್ಣ ಆರೋಪಿಸಿದ್ದಾರೆ,
ಹಲವಾರು ವರ್ಷಗಳ ಹಿಂದೆ ಕುಣಿಗಲ್ ಪಟ್ಟಣದ ಹೃದಯ ಭಾಗದಲ್ಲಿ ಉದ್ಯಾನವನ ನಿರ್ಮಿಸಲೆಂದು ಭೂಮಿಯನ್ನ ಬಾಳೇಗೌಡ ಎಂಬ ದಾನಿ ಪುರಸಭೆಗೆ ನೀಡಿದರು. ನಂತರ ದಿನಗಳಲ್ಲಿ ಆ ಸ್ಥಳದಲ್ಲಿ ಉತ್ತಮ ಉದ್ಯಾನವನವನ್ನು ನಿರ್ಮಾಣ ಮಾಡಿ ಅಲ್ಲಿಗೆ ಬರುವ ಸಾರ್ವಜನಿಕರು ಹಾಗೂ ನಾಗರಿಕರಿಗೆ ಪ್ರತಿ ದಿನ ರೇಡಿಯೋ ಮುಖಾಂತರ ಸುದ್ದಿ ಹಾಗೂ ಚಿತ್ರಗೀತೆಗಳನ್ನು ಕೇಳಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿತ್ತು.
ಒಂದು ಕಾಲದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿದ್ದಂತಹ ಉದ್ಯಾನವನ ಕಳೆದ ಕೆಲವು ದಿನಗಳಿಂದ ಕುಡುಕರ ತಾಣವಾಗಿದೆ. ಪ್ರತಿದಿನ ಇಲ್ಲಿ ವಾಯು ವಿಹಾರ ಮಾಡುವ ಮಹಿಳೆಯರು ಹಾಗೂ ಮಕ್ಕಳು ನಾಗರಿಕರು ಗಣನೀಯವಾಗಿ ಕಡಿಮೆ ಆಗುತ್ತಿದ್ದಾರೆ,
ಇತ್ತೀಚಿಗೆ ಸರಿಯಾದ ನಿರ್ವಹಣೆ ಇಲ್ಲದೆ ಇಲ್ಲಿನ ಗಿಡಗಳು ಒಣಗುತ್ತಿವೆ. ಕಲ್ಲು ಹಾಸು ಚಪ್ಪಡಿಗಳು ಮುರಿದು ಬಿದ್ದಿವೆ. ಮಕ್ಕಳ ಆಟಿಕೆಗಳು ತುಂಡಾಗಿವೆ. ಪುರಸಭೆಯಿಂದ ಲಕ್ಷಗಟ್ಟಲೆ ಸಾರ್ವಜನಿಕರ ಹಣವನ್ನ ಪಾರ್ಕ್ ನಿರ್ವಹಣೆಗಾಗಿ ನೀಡುತ್ತಿದೆ. ಆದರೆ ಅದರ ಹಣ ಪೋಲಾಗುತ್ತಿದೆ, ಹೊರತು ಯಾವುದೇ ನಿರ್ವಹಣೆ ಇಲ್ಲ ಇಲ್ಲಿರುವ ಕಾರಂಜಿ ಈಗ ಕಸದ ಗುಂಡಿ ಆಗಿ ನಿರ್ಮಾಣಗೊಂಡಿದೆ. ಅಧಿಕಾರಿಗಳು ಈ ಬಗ್ಗೆ ಜಾಗೃತಗೊಂಡು ಇಲ್ಲಿ ಕೆಟ್ಟ ನಿಂತಿರುವ ಮೋಟರ್ ಸಿದ್ದಪಡಿಸಿ ನೀರುಣಿಸಬೇಕಿದೆ ಎಂದರು.
ಪಾರ್ಕ್ ನಿರ್ವಹಣೆ ಬಗ್ಗೆ ಹಲವಾರು ಬಾರಿ ಪುರಸಭಾ ವತಿಯಿಂದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು ಕೆಟ್ಟು ನಿಂತಿರುವ ಮೋಟಾರ್ ಪೈಪ್ ಅನ್ನ ತಕ್ಷಣ ದುರಸ್ತಿಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುರಸಭಾ ಮುಖ್ಯ ಅಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.