ತುಮಕೂರು : ಚುನಾವಣೆಗೆ ಸಕಲ ರೀತಿಯಲ್ಲೂ ಕಾಂಗ್ರೆಸ್‌ ಸಜ್ಜು

ಚುನಾವಣೆಗೆ ಕಾಂಗ್ರೆಸ್‌ ಸಕಲ ರೀತಿಯಲ್ಲಿ ಸಜ್ಜಾಗಿದೆ. ವಾರ್ಡ್‌ವಾರು ಸಭೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ನೀಡಿರುವ ಮತ್ತು ನೀಡುತ್ತಿರುವ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಲ… ಅಹಮ್ಮದ್‌ ಹೇಳಿದರು.

Tumkur Congress is all set for the election snr

 ತುಮಕೂರು :  ಚುನಾವಣೆಗೆ ಕಾಂಗ್ರೆಸ್‌ ಸಕಲ ರೀತಿಯಲ್ಲಿ ಸಜ್ಜಾಗಿದೆ. ವಾರ್ಡ್‌ವಾರು ಸಭೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ನೀಡಿರುವ ಮತ್ತು ನೀಡುತ್ತಿರುವ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಲ… ಅಹಮ್ಮದ್‌ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಾತನಾಡಿ, ಕೆಲವೊಂದು ಗೊಂದಲಗಳು ಇದ್ದ ಕಾರಣ ನಾನು ತಡವಾಗಿ ಪ್ರಚಾರ ಸಭೆ ಮಾಡಲು ಕಾರಣವಾಯಿತು. ಚುನಾವಣೆ ಶಾಖೆಯಿಂದ ಕ್ರಮ ಸಂಖ್ಯೆಗಳು ಘೋಷಣೆ ಆಗದೆ ಇರುವ ಕಾರಣ ಈ ರೀತಿಯಾದ ತಡವಾಗಿದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ನನ್ನನ್ನು ಗುರುತಿಸಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ ನನ್ನನ್ನು ಸಾಮಾನ್ಯ ಕಾರ್ಯಕರ್ತರೊಳಗೊಂಡು ಎಲ್ಲ ನಾಯಕರ ವಿಶ್ವಾಸ ಪಡೆದು ಚುನಾವಣೆಯ ಕಾರ್ಯಗಳನ್ನು ಮಾಡುತ್ತೇನೆ. ಶೀಘ್ರದಲ್ಲಿಯೇ ಎಲ್ಲ ಬೂತ್‌ ಮಟ್ಟದ ಸಮಿತಿಗಳನ್ನು ಸಭೆ ಕರೆದು ಪ್ರಚಾರ ಕಾರ್ಯ ಆರಂಭಿಸುತ್ತೇನೆ. ನಮ್ಮ ಪಕ್ಷದ ಹಿರಿಯರು ಹಾಗೂ ನಾಯಕರ ಮಾರ್ಗದರ್ಶನ ಬೆಂಬಲ ಪಡೆದು ಈ ಭಾರಿ ಚುನಾವಣೆಯಲ್ಲಿ ನಾನು ಗೆಲ್ಲಲು ಸಹಕಾರ ಆಗುತ್ತದೆ ಎಂದರು.

ಅನಿಲ…, ಜ್ವಾಲಾಮಾಲಾ ರಾಜಣ್ಣ, ಕೆಂಪರಾಜು, ರೇವಣ್ಣ, ಸಿದ್ದಲಿಂಗೇಗೌಡ, ಗುರುಪ್ರಸಾದ್‌, ಸುಜಾತಾ, ಮಮತಾ, ರತ್ನಮ್ಮ, ಮತ್ತಿತರರಿದ್ದರು

ಕಾಂಗ್ರೆಸ್‌ಗೆ ಲಿಂಗಾಯತರ ಮೇಲೇಕೆ ಪ್ರೀತಿ

ಬೆಂಗಳೂರು(ಏ.24):  ‘ನಿಮ್ಮ ಹಿಂದಿನ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಉದ್ದೇಶದಿಂದ ನೀವು ಕೂಡಲಸಂಗಮಕ್ಕೆ ಹೋಗಿದ್ದರೆ ಸರಿ. ಇಲ್ಲದಿದ್ದರೆ ನಿಮ್ಮ ಬೂಟಾಟಿಕೆ ಬಸವಣ್ಣನ ಅನುಯಾಯಿಗಳಿಗೆ ತಿಳಿಯುತ್ತದೆ. ನಿಮ್ಮ ಕುತಂತ್ರಗಳಿಗೆ ರಾಜ್ಯದ ಜನತೆ ಎಂದಿಗೂ ಬಲಿಯಾಗುವುದಿಲ್ಲ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರು ಭಾನುವಾರ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದರು. ಅವರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ಕೂಡ ಭೇಟಿ ನೀಡಿದ್ದರು. ರಾಹುಲ್‌ ಭೇಟಿ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ವಿಜಯೇಂದ್ರ, ರಾಹುಲ್‌ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸರಮಾಲೆಯನ್ನೇ ಕೇಳಿದ್ದಾರೆ.

‘ಡ್ಯಾಂ ಕೀ’ ಶೆಟ್ಟರ್‌, ಸವದಿ ಕೈಯಲ್ಲಿತ್ತು: ಡಿ.ಕೆ.ಶಿವಕುಮಾರ್‌

ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ ಲಿಂಗಾಯತರನ್ನು ಏಕೆ ಪ್ರೀತಿಸುತ್ತದೆ?. ಚುನಾವಣೆ ವೇಳೆ ಮಾತ್ರ ಲಿಂಗಾಯತರ ಮೇಲೆ ಕಾಂಗ್ರೆಸ್‌ಗೆ ಎಂದೂ ಕಾಣದ ಪ್ರೀತಿ ಮತ್ತು ಗೌರವ ಹುಟ್ಟುವುದು ಏಕೆ?. ಹಿಂದೆ ವೀರೇಂದ್ರ ಪಾಟೀಲ್‌ ಅಥವಾ ನಿಜಲಿಂಗಪ್ಪ ಅವರನ್ನು ಅವಮಾನಿಸುವಾಗ ಈ ಪ್ರೀತಿ ಎಲ್ಲಿ ಹೋಗಿತ್ತು?. ಈ ಹಿಂದೆ ನೀವು ಸಮುದಾಯವನ್ನು ಇಬ್ಭಾಗ ಮಾಡಲು ಹೊರಟಾಗ ಅಣ್ಣ ಬಸವಣ್ಣನವರ ಬೋಧನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಮರೆತು ಬಿಟ್ಟಿರಾ ಎಂದು ಪ್ರಶ್ನಿಸಿದ್ದಾರೆ.

1989ರ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ ಕಾಂಗ್ರೆಸ್‌ 178 ಸೀಟುಗಳನ್ನು ಗೆದ್ದು, ದಿಗ್ವಿಜಯ ಸಾಧಿಸಿತ್ತು. ಆದರೆ, ಅಂದಿನ ಜನಪ್ರಿಯ ಲಿಂಗಾಯತ ಸಿಎಂ ಬಗ್ಗೆ ಕಾಂಗ್ರೆಸ್‌ ನಾಯಕತ್ವ ದುರಹಂಕಾರ ಪ್ರದರ್ಶಿಸಿತ್ತು. ಲಿಂಗಾಯತ ನಾಯಕರ ತಿರಸ್ಕಾರ ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ಧೂಳಿಪಟ ಮಾಡಿತ್ತು ಎಂದು ಹಳೆಯ ಸಂಗತಿಗಳನ್ನು ನೆನಪಿಸಿದ್ದಾರೆ.

ಬೀದರ್‌: ಭಾಲ್ಕಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನಿಗೆ ಚಾಕು ಇರಿತ..!

ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಮುಳುಗುವ ಜೀವಕ್ಕೆ ಹುಲ್ಲುಕಡ್ಡಿಯ ಆಸರೆ ಎಂಬಂತಿದೆ ಕಾಂಗ್ರೆಸ್‌ನ ಪರಿಸ್ಥಿತಿ. 2023ರ ಚುನಾವಣೆಯ ಈ ವೇಳೆ ಎಲ್ಲಾ ಭರವಸೆಗಳನ್ನು ಕಳೆದುಕೊಂಡು ಹತಾಶೆಯಿಂದ ಅಡ್ಡದಾರಿ ಹಿಡಿದಿದೆ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Latest Videos
Follow Us:
Download App:
  • android
  • ios