Asianet Suvarna News Asianet Suvarna News

ತುಮಕೂರು : ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಒಬ್ಬ ಕೃಷಿಕರಿಗೆ, ಶ್ರೇಷ್ಠ ತೋಟಗಾರಿಕೆ ರೈತ/ರೈತ ಮಹಿಳೆಯನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದರಿಂದ ತುಮಕೂರು ಜಿಲ್ಲೆಯ ಅರ್ಹ ರೈತ ಅಭ್ಯರ್ಥಿಗಳು 10ನೇ ಜನವರಿ, 2024ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಕೆವಿಕೆ ಪ್ರಕಟಣೆ ತಿಳಿಸಿದೆ.

Tumkur  Applications invited for Best Horticulture Award snr
Author
First Published Jan 3, 2024, 9:07 AM IST

ತಿಪಟೂರು: ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟದಲ್ಲಿ 2024ರ ಫೆಬ್ರವರಿ 10 ರಿಂದ 12ರವರೆಗೆ ಬರ ಸಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಒಬ್ಬ ಕೃಷಿಕರಿಗೆ, ಶ್ರೇಷ್ಠ ತೋಟಗಾರಿಕೆ ರೈತ/ರೈತ ಮಹಿಳೆಯನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದರಿಂದ ತುಮಕೂರು ಜಿಲ್ಲೆಯ ಅರ್ಹ ರೈತ ಅಭ್ಯರ್ಥಿಗಳು 10ನೇ ಜನವರಿ, 2024ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಕೆವಿಕೆ ಪ್ರಕಟಣೆ ತಿಳಿಸಿದೆ.

ಈ ಪ್ರಶಸ್ತಿಗೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕೃಷಿ, ತೋಟಗಾರಿಗೆ, ಪಶುಸಂಗೋಪನೆ ಮತ್ತು ಐಸಿಎಸ್‌ಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು. ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ತುಮಕೂರು ಜಿಲ್ಲೆಯ ರೈತ/ರೈತ ಮಹಿಳೆಯರು ಅರ್ಜಿ ನಮೂನೆಯನ್ನು, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರ ಕಚೇರಿ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೊಡ್ಡಬೆಟ್ಟಹಳ್ಳಿ ಎದರು, ವಿದ್ಯಾರಣ್ಯಪುರ-ಯಲಹಂಕ ರಸ್ತೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ಆಂಚೆ, ಬೆಂಗಳೂರು. ಅಥವಾ ತೋ.ವಿ.ವಿ.ಯ ವೆಬ್‌ಸೈಟ್ www.uhsbagalkot.karnataka.gov.inಮೂಲಕ (ಆರ್ಜಿ ನಮೂನೆ: ಅನುಬಂಧ-೧) ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವಾ ದಿನಾಂಕ 10ನೇ ಜನವರಿ, 2024ಸಂಜೆ 5 ರೊಳಗಾಗಿ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರ ಕಚೇರಿ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೊಡ್ಡ ಬೆಟ್ಟಹಳ್ಳಿ ಎದರು, ವಿದ್ಯಾರಣ್ಯಪುರ-ಯಲಹಂಕ ರಸ್ತೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ಆಂಚೆ, ಬೆಂಗಳೂರುಇಲ್ಲಿ ಸಲ್ಲಿಸಬೇಕು

ಹೆಚ್ಚಿನ ಮಾಹಿತಿಗಾಗಿ ಡಾ. ಎಸ್.ಎಲ್. ಜಗದೀಶ್, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು,,(9008492395/9448902528) ಅಥವಾ ಡಾ.ಬಿ.ಎಸ್.ಲಕ್ಷ್ಮಣರೆಡ್ಡಿ, ವಿಸ್ತರಣಾ ಮುಂದಾಳು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು (9900585242) ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ 18004257910ಗೆ ಸಂಪರ್ಕಿಸಬಹುದು ಎಂದು ಕೆವಿಕೆ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Follow Us:
Download App:
  • android
  • ios