Tumakur : ಪ್ರತಿ ಕ್ಷೇತ್ರದಲ್ಲಿ 2 - 5 ಟಿಕೆಟ್ ಆಕಾಂಕ್ಷಿಗಳು

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 2-5ರವರೆಗೆ ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಅವರಲ್ಲಿ ಪಕ್ಷ ನೀಡುವ ಕಾರ್ಯಕ್ರಮಗಳನ್ನು ಯಾರು ಹೆಚ್ಚು ಯಶಸ್ವಿಯಾಗಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಪಕ್ಷದ ಟಿಕೆಟ್‌ ದೊರೆಯಲಿದೆ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ್‌ ತಿಳಿಸಿದ್ದಾರೆ.

Tumkur    5 ticket aspirants in each constituency snr

  ತುಮಕೂರು (ಡಿ.16):  ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 2-5ರವರೆಗೆ ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಅವರಲ್ಲಿ ಪಕ್ಷ ನೀಡುವ ಕಾರ್ಯಕ್ರಮಗಳನ್ನು ಯಾರು ಹೆಚ್ಚು ಯಶಸ್ವಿಯಾಗಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಪಕ್ಷದ ಟಿಕೆಟ್‌ ದೊರೆಯಲಿದೆ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ್‌ ತಿಳಿಸಿದ್ದಾರೆ.

ತುಮಕೂರಿನಲ್ಲಿ (Tumakur )  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ (Election)  ಆಮ್‌ ಆದ್ಮಿ ಪಕ್ಷ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಈಗಾಗಲೇ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಲ್ಲಿಯೇ ಅಂತರಿಕ ಸ್ಪರ್ಧೆ ಏರ್ಪಟ್ಟಿದೆ ಎಂದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿ, ಹೊಸದಾಗಿ ಪಕ್ಷಕ್ಕೆ ಜಗದೀಶ್‌ ಬಾಬು ಎಂಬ ಉದ್ಯಮಿಯೊಬ್ಬರು ಇಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇವರ ಜೊತೆಗೆ, ಪಕ್ಷದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ನಾಗೇಶ್‌, ಜಿಲ್ಲಾಧ್ಯಕ್ಷನಾದ ನಾನು ಹಾಗೂ ಷಪಿ ಅಹಮದ್‌ ಅವರು ಅಕಾಂಕ್ಷಿಗಳಿದ್ದಾರೆ. ಟಿಕೆಟ್‌ ಕೇಳಲು ಪ್ರತಿಯೊಬ್ಬರಿಗೂ ಅಧಿಕಾರವಿದೆ. ಆದರೆ ಟಿಕೆಟ್‌ ನೀಡುವ ಅಧಿಕಾರವಿರುವುದು ಪಕ್ಷಕ್ಕೆ ಮಾತ್ರ. ಹಾಗಾಗಿ ನಾವೆಲ್ಲರೂ ಪಕ್ಷದ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ವಿಶ್ವನಾಥ್‌ ನುಡಿದರು.

ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡ ಉದ್ಯಮಿ ಜಗದೀಶ್‌ ಬಾಬು(ಜೀನಿ ಬಾಬು) ಮಾತನಾಡಿ, ನಾನು ವ್ಯಾಪಾರಸ್ಥನಾಗಿ ಸಾಕಷ್ಟುಸಮಾಜ ಸೇವೆಯಲ್ಲಿ ತೊಡಗಿದ್ದೇನೆ. 102 ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೇನೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಎಎಪಿ ಪಕ್ಷದ ತತ್ವ ಸಿದ್ದಾಂತಕ್ಕೆ ಮನಸೋತು ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ತುಮಕೂರು ನಗರದಿಂದ ಟಿಕೆಟ್‌ ಬಯಸಿದ್ದೇನೆ. ನಮ್ಮದು ಸಹ ರಾಜಕಾರಣಿ ಮನೆತನ. ನಮ್ಮ ದೊಡ್ಡಪ್ಪ ಸಿ.ಎನ್‌.ಭಾಸ್ಕರಪ್ಪ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಹಾಗಾಗಿ ರಾಜಕಾರಣ ಹೊಸದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಭುಸ್ವಾಮಿ, ಮಂಜುನಾಥ್‌, ಉಮರ್‌ ಪಾರೂಕ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೆವನಹಳ್ಳಿ ಅಖಾಡಕ್ಕೆ ಮುನಿಯಪ್ಪ -  ಟಿಕೆಟ್‌ ಫೈಟ್‌

ಕೆ.ಆರ್‌.ರವಿಕಿರಣ್‌

 ದೊಡ್ಡಬಳ್ಳಾಪುರ (ಡಿ.16) : ರಾಜಧಾನಿಗೆ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳನ್ನು ಒಳಗೊಂಡಿದೆ. ಆ ಪೈಕಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಗಳು ಸಾಮಾನ್ಯ ವಿಧಾನಸಭೆ ಕ್ಷೇತ್ರಗಳು. ದೇವನಹಳ್ಳಿ ಮತ್ತು ನೆಲಮಂಗಲ ಮೀಸಲು ವಿಧಾನಸಭಾ ಕ್ಷೇತ್ರಗಳು. ಪ್ರಸ್ತುತ ದೇವನಹಳ್ಳಿ ಮತ್ತು ನೆಲಮಂಗಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದರೆ, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹೊಸಕೋಟೆಯಲ್ಲಿ ಪಕ್ಷೇತರ (ಕಾಂಗ್ರೆಸ್‌) ಸದಸ್ಯರಿದ್ದಾರೆ.

ಎಲ್ಲಾ 4 ವಿಧಾನಸಭಾ ಕ್ಷೇತ್ರಗಳೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಭಾಗವಾಗಿವೆ. ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಮುಸ್ಲಿಮರು, ನೇಕಾರರು, ಲಿಂಗಾಯತ, ಬಣಜಿಗ, ಕುರುಬ ಸಮುದಾಯಗಳು ಕೂಡ ನಿರ್ಣಾಯಕ ಸಂಖ್ಯೆಯ ಮತದಾರರನ್ನು ಹೊಂದಿವೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಖಾತೆ ತೆರೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಹೊಸಕೋಟೆಯ ಪ್ರಭಾವಿ ನಾಯಕ, ಸಚಿವ ಎಂ.ಟಿ.ಬಿ. ನಾಗರಾಜ್‌ ಅವರು ಬಿಜೆಪಿ ಬಲವರ್ಧನೆಗೆ ಯತ್ನಿಸುತ್ತಿದ್ದಾರೆ.

Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು

1.ದೊಡ್ಡಬಳ್ಳಾಪುರ: ಮೂರೂ ಪಕ್ಷಗಳಲ್ಲೂ ಲಾಬಿ

ದೊಡ್ಡಬಳ್ಳಾಪುರ, ಕಾಂಗ್ರೆಸ್‌ನ ಭದ್ರಕೋಟೆ. ಕಳೆದ 4 ದಶಕಗಳಲ್ಲಿ ಒಂದೆರಡು ಬಾರಿ ಹೊರತುಪಡಿಸಿ ಉಳಿದೆಲ್ಲಾ ಸಂದರ್ಭದಲ್ಲೂ ಆರ್‌.ಎಲ್‌.ಜಾಲಪ್ಪ ಅವರ ಪ್ರಭಾವ ನಿರ್ಣಾಯಕವಾಗಿದೆ. ಕಾಂಗ್ರೆಸ್‌ನ ಟಿ.ವೆಂಕಟರಮಣಯ್ಯ ಸತತ 2 ಬಾರಿ ಶಾಸಕರಾಗಿದ್ದು, ಈ ಬಾರಿಯೂ ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದಾರೆ. ಜೊತೆಗೆ, ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ.

ಬಿಜೆಪಿಯಿಂದ ಗೊಲ್ಲ ಸಮುದಾಯಕ್ಕೆ ಸೇರಿದ ಧೀರಜ್‌ ಮುನಿರಾಜ್‌, ಹಿರಿಯ ಮುಖಂಡ ಬಿ.ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಿ.ಎಚ್‌. ಕರಿಗೌಡ ಟಿಕೆಟ್‌ ಬಯಸಿದ್ದಾರೆ. ಅನುಭವ-ಜಾತಿ ಲೆಕ್ಕಾಚಾರಗಳ ಮೇಲೆ ಇಲ್ಲಿ ಬಿಜೆಪಿ ಟಿಕೆಟ್‌ ನಿರ್ಧಾರವಾದರೆ ಅಚ್ಚರಿ ಪಡಬೇಕಿಲ್ಲ.

ಜೆಡಿಎಸ್‌ನಲ್ಲಿ ಸತತ 3 ಚುನಾವಣೆಗಳಲ್ಲಿ ಸೋಲು ಕಂಡಿರುವ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ.ಮುನೇಗೌಡ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ ಗೌಡ, ಉದ್ಯಮಿ ಹುಸ್ಕೂರು ಆನಂದ್‌ ಕೂಡ ಜೆಡಿಎಸ್‌ ಟಿಕೆಟ್‌ನ ರೇಸ್‌ನಲ್ಲಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಪುರುಷೋತ್ತಮ್‌ ಸ್ಪರ್ಧಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಒಕ್ಕಲಿಗ, ಪರಿಶಿಷ್ಟಸಮುದಾಯ, ಮುಸ್ಲಿಮರು, ನೇಕಾರರು, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ.

Latest Videos
Follow Us:
Download App:
  • android
  • ios