ತುಮಕೂರು: ಶ್ರೀ ರಾಮ ನವಮಿ ಆಚರಣೆ ವೇಳೆ ಪಾನಕ, ಮಜ್ಜಿಗೆ ಸೇವಿಸಿದ 25 ಜನರು ಅಸ್ವಸ್ಥ

ತುಮಕೂರಿನ ಗೊಲ್ಲರಹಟ್ಟಿಯಲ್ಲಿ ನಡೆದ ಶ್ರೀ ರಾಮನವಮಿ ಆಚರಣೆಯ ವೇಳೆ ಸಿಹಿ ಪಾನಕ ಹಾಗೂ ಮಜ್ಜಿಗೆ ಸೇವಿಸಿದ 25ಕ್ಕೂ ಅಧಿಕ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Tumkur 25 people fell ill after consuming Sri Rama navami sweet Panak and buttermilk sat

ತುಮಕೂರು (ಏ.18): ದೇಶಾದ್ಯಂತ ಏ.17ರ ಬುಧವಾರ ಶ್ರೀರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಈ ವೇಳೆ ಸಿಹಿ ಪಾನಕ, ಮಜ್ಜಿಗೆ ಹಾಗೂ ಕಾಳಿನ ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ಆದರೆ, ರಾಮನವಮಿಯ ಪಾನಕ ಹಾಗೂ ಮಜ್ಜಿಗೆ ಸೇವನೆ ಮಾಡಿದ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಶ್ರೀರಾಮನವಮಿ ಆಚರಣೆ ವೇಳೆ ಪಾನಕ, ಮಜ್ಜಿಗೆ ಸೇವಿಸಿ 25ಕ್ಕೂ ಅಧಿಕ ಜನರು ಅಸ್ಬಸ್ಥಗೊಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿಯಲ್ಲಿರುವ ಮಂಗಳ ಗೇಟ್ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ನಿನ್ನೆ ಗೊಲ್ಲರಹಟ್ಟಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮನವಮಿ ಹಬ್ಬವನ್ನು ಆಚರಣೆ ಮಾಡಲಾಗಿತ್ತು. ಈ ವೇಳೆ ಪಾನಕ, ಮಜ್ಜಿಗೆ ವಿತರಣೆ ಮಾಡಲಾಗಿತ್ತು. ಗ್ರಾಮಸ್ಥರು ನಿನ್ನೆ ಮಧ್ಯಾಹ್ನ ಪಾನಕ, ಮಜ್ಜಿಗೆ ಸೇವಿಸಿದ್ದರು. ಆದರೆ, ತಡರಾತ್ರಿ ಕೆಲ ಗ್ರಾಮಸ್ಥರಲ್ಲಿ  ವಾಂತಿ, ಭೇದಿ ಕಾಣಿಸಿಕೊಂಡಿದೆ.

Breaking: ಕಾಂಗ್ರೆಸ್ ಅಭ್ಯರ್ಥಿ ಸೋತುಬಿಟ್ಟರೆ ಸಿಎಂ ಸಿದ್ದರಾಮಯ್ಯ ಸೀಟಿಗೆ ಕಂಟಕವಾಗುತ್ತೆ; ಸಚಿವ ಬೈರತಿ ಸುರೇಶ್

ಈ ಘಟನೆಯಲ್ಲಿ 12 ಮಹಿಳೆಯರು, 13 ಪುರುಷರು ಸೇರಿ ಒಟ್ಟು 25 ಜನ ಅಸ್ವಸ್ಥಗೊಂಡಿದ್ದು, ಕೂಡಲೇ ಎಡೆಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗೊಂಡವರನ್ನ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ 9 ಮಹಿಳೆಯರು ಹಾಗೂ 11 ಪುರುಷರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಎಡೆಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಶಾಸಕ ಡಾ. ರಂಗನಾಥ್ ಅವರು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಕೊಟ್ಟ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದಾರೆ.

Latest Videos
Follow Us:
Download App:
  • android
  • ios