Asianet Suvarna News Asianet Suvarna News

ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು

ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು| ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ| ಪ್ರಾಥ​ಮಿಕ ವರದಿ ಸರ್ಕಾ​ರಕ್ಕೆ ಕಳಿ​ಸಿ​ದ್ದೇನೆ: ಡಿಸಿ

Tumakuru Village Accountant Dismissed After Tree Cutting Episode
Author
Bangalore, First Published Mar 11, 2020, 10:02 AM IST

ತುಮ​ಕೂರು[ಮಾ.11]: ದೇವಸ್ಥಾನದ ಜಾಗ ಒತ್ತುವರಿ ತೆರವು ನೆಪದಲ್ಲಿ ಸಿದ್ದಮ್ಮ, ಸಣ್ಣಕೆಂಪಯ್ಯ ಎಂಬವರಿಗೆ ಸೇರಿದ ನೂರಾರು ಅಡಕೆ, ತೆಂಗಿನ ಮರಗಳನ್ನು ನೆಲಸಮಗೊಳಿಸಿದ ಪ್ರಕ​ರ​ಣಕ್ಕೆ ಸಂಬಂಧಿಸಿ ಗ್ರಾಮ ಲೆಕ್ಕಿಗನನ್ನು ಮಂಗಳವಾರ ಅಮಾನತು ಮಾಡಲಾಗಿದೆ. ಜತೆಗೆ, ಈ ಪ್ರಕರಣದ ಕುರಿತ ಪ್ರಾಥ​ಮಿಕ ವರದಿ​ಯನ್ನು ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಗೆ ಕಳು​ಹಿ​ಸಿ​ರು​ವು​ದಾಗಿ ಜಿಲ್ಲಾ​ಧಿ​ಕಾರಿ ರಾಕೇಶ್‌ ಕುಮಾರ್‌ ತಿಳಿ​ಸಿ​ದ್ದಾರೆ.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಅಧಿಕಾರಿಗಳು ಕಡಿದು ಹಾಕಿದ ಮರಗಳ ಜತೆಗೆ ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಮುಂದೆ ಪ್ರತಿ​ಭ​ಟನೆ ನಡೆಸಿದ ರೈತರಿಗೆ ಜಿಲ್ಲಾಧಿಕಾರಿ ಈ ವಿಚಾರ ತಿಳಿಸಿದ್ದಾರೆ. ಬುಧ​ವಾ​ರವೇ ಸರ್ವೆ ಮಾಡಿ ಉಪ​ವಿ​ಭಾ​ಗಾ​ಧಿ​ಕಾ​ರಿ​ಗಳು ವರದಿ ನೀಡ​ಲಿ​ದ್ದಾರೆ. ಆ ಬಳಿಕ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಕಳುಹಿ​ಸಿ​ಕೊ​ಡಲಾಗುವುದು ಎಂದು ಭರವಸೆಯನ್ನೂ ನೀಡಿದ್ದಾರೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಗ್ರಾಮ​ಲೆ​ಕ್ಕಿ​ಗನ ಪಾತ್ರ ಇದೆ ಎಂದು ಗೊತ್ತಾಗಿದ್ದು, ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಕೆಲ ವಿಷಯಗಳಲ್ಲಿ ಗೊಂದಲ ಇದೆ. ಈ ಸಂಬಂಧ ಇನ್ನೂ ಹೆಚ್ಚಿನ ವರದಿ ಕೇಳಿರುವು​ದಾಗಿ ತಿಳಿ​ಸಿ​ದರು.

ತೆರವು ಮಾಡುವ ವಿಚಾರದಲ್ಲಿ ಒಂದಷ್ಟುಗೊಂದಲ ಇದೆ. ಇಷ್ಟೊಂದು ತುರ್ತಾಗಿ ಅದನ್ನು ತೆರವು ಮಾಡುವ ಅವ​ಶ್ಯ​ಕತೆ ಏನಿತ್ತು, ಸಂಬಂಧಪಟ್ಟವರಿಗೆ ಯಾಕೆ ಮುಂಚಿತವಾಗಿ ನೋಟಿಸ್‌ ಜಾರಿ ಮಾಡಿಲ್ಲ ಎಂಬ ಬಗ್ಗೆ ಬಹಳಷ್ಟುಪ್ರಶ್ನೆ​ಗಳು ಉದ್ಭ​ವ​ವಾ​ಗಿದೆ. ಆ ಜಮೀನಿನಲ್ಲಿ 6 ಅರ್ಚಕರು ಅನುಭವದಲ್ಲಿದ್ದಾರೆ. ಈ ಕುರಿತು ಸಂಪೂರ್ಣ ವರದಿ ನೀಡಲು ಹೇಳಿದ್ದೇನೆ. ಸದ್ಯಕ್ಕೆ ಗ್ರಾಮ​ ಲೆ​ಕ್ಕಿ​ಗ​ನ​ನ​ನ್ನು ಅಮಾನತು ಮಾಡಿದ್ದೇವೆ ಎಂದರು. ಉಳಿದವರ ಪಾತ್ರದ ವಿಚಾರವಾಗಿ ಹೆಚ್ಚಿನ ವರದಿ ಕೇಳಿದ್ದೇವೆ. ಬೇರೆ ಅಧಿಕಾರಿಗಳ ಪಾತ್ರ ಇದೆಯಾ ಅನ್ನೋ ವಿಚಾರವಾಗಿ ಹೆಚ್ಚಿನ ವರದಿ ಕೇಳಲಾಗಿದೆ. ನನ್ನ ಗಮನಕ್ಕೆ ತಹಸೀಲ್ದಾರ್‌ ಈ ಪ್ರಕರಣವನ್ನು ತಂದಿಲ್ಲ. ಆ ಕುರಿತೂ ವಿಚಾರಣೆ ನಡೆಸುತ್ತಿರುವು​ದಾಗಿ ತಿಳಿ​ಸಿ​ದರು.

Follow Us:
Download App:
  • android
  • ios