Tumakuru: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರ್ ಕಾಮಗಾರಿ: ನಾಲ್ಕೈದು ಕಿ.ಮೀ.ವರೆಗೂ ಸಾಲುಗಟ್ಟಿ ನಿಂತ ವಾಹನಗಳು

ಬೆಂಗಳೂರು - ಪೂನಾ ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡಾಂಬರ್ ಕಾಮಗಾರಿ ಹಿನ್ನೆಲೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಾಲ್ಕೈದು ಕಿಮೀ ಸಾಲುಗಟ್ಟಿ ವಾಹನಗಳು ನಿಂತಿವೆ. 

Tumakuru News Full Traffic Jam on National Highway 48 Due to Asphalt Work gvd

ತುಮಕೂರು (ಮಾ.13): ಬೆಂಗಳೂರು - ಪೂನಾ ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡಾಂಬರ್ ಕಾಮಗಾರಿ ಹಿನ್ನೆಲೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಾಲ್ಕೈದು ಕಿಮೀ ಸಾಲುಗಟ್ಟಿ ವಾಹನಗಳು ನಿಂತಿವೆ. ರಾಷ್ಟ್ರೀಯ ಹೆದ್ದಾರಿ ಚಿಕ್ಕನಹಳ್ಳಿಯಿಂದ ಶಿರಾ ಕಡೆಗೆ ಪುಲ್ ಟ್ರಾಫಿಕ್ ಜಾಮ್ ಆಗಿದ್ದು, ತುಮಕೂರು- ಶಿರಾ ನಡುವಿನ ರಸ್ತೆಯ ಚಿಕ್ಕನಹಳ್ಳಿ ಸಮೀಪ ಡಾಂಬರ್ ಕಾಮಗಾರಿ ನಡೆಯುತ್ತಿದೆ. 

ಚಿಕ್ಕನಹಳ್ಳಿ ಬಳಿ ರಸ್ತೆ ಕಿತ್ತು ಕಾಮಗಾರಿ ನಡೆಸುತ್ತಿರುವ ಹೆದ್ದಾರಿ ಪ್ರಾಧಿಕಾರದವರು ವಾಹನ ದಟ್ಟಣೆ ತಡೆಯಲು ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆ ಪುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನು ಟ್ರಾಫಿಕ್ ತಡೆಯಲು ಪೊಲೀಸರು ರಸ್ತೆಗಿಳಿಯಲಿಲ್ಲ. ಸದ್ಯ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ಟ್ರಾಫಿಕ್ ಜಾಮ್ ಆಗಿದ್ದು, ಬದಲಿ ಮಾರ್ಗವನ್ನು ಸಹ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಚಿಸದೇ ಇರುವುದು ವಿಪರ್ಯಾಸ.

ಕೌಟುಂಬಿಕ ಕಲಹ: ಪತ್ನಿ ಮೇಲೆ ಕೋಪಕ್ಕೆ ಮಲಮಗನ ಕೊಂದವನ ಬಂಧನ!

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರು: ಬೆಳಗಾವಿ ಜಿಲ್ಲೆಯ ಮುರಗುಂಡಿಯಿಂದ ಚಿಕ್ಕೋಡಿಯವರೆಗೆ 62 ಕಿಮೀ ಎರಡು ಹಂತಗಳಲ್ಲಿ ಬೃಹತ್‌ ಸೇತುವೆಗಳಗೊಂಡು .785.79 ಕೋಟಿ ಮತ್ತು .1084.00 ಕೋಟಿ ಒಟ್ಟು .1869.79 ಕೋಟಿಗಳಿಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ 548ಬಿ ಬೆಳಗಾವಿ ಜಿಲ್ಲೆಯ ಸಾವಳಗಿ ಕ್ರಾಸ್‌ದಿಂದ ಪ್ರಾರಂಭಗೊಂಡು ಗೋಟುರ ಹತ್ತಿರ ಪುನಾ-ಬೆಂಗಳೂರು ರಸ್ತೆಗೆ ಕೂಡುವ ಒಟ್ಟು ರಸ್ತೆ 129 ಕಿಮೀ ಚತುಷ್ಪದ (4 ಲೆನ್‌) ರಸ್ತೆ ನಿರ್ಮಾಣದ ಪೈಕಿ ಸಾವಳಗಿ ಕ್ರಾಸ್‌ದಿಂದ ಮುರಗುಂಡಿ ವರೆಗೆ ರಸ್ತೆ 40 ಕಿಮೀ ಅಂದಾಜು ವೆಚ್ಚ 350 ಕೋಟಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮುರಗುಂಡಿಯಿಂದ ಚಿಕ್ಕೋಡಿಯವರಗೆ 62 ಕಿಮೀ ಎರಡು ಹಂತಗಳಲ್ಲಿ ಬೃಹತ್‌ ಸೇತುವೆಗಳಗೊಂಡು 785.79 ಕೋಟಿ ಮತ್ತು 1084.00 ಕೋಟಿ ಒಟ್ಟು 1869.79 ಕೋಟಿಗಳಿಗೆ ರಸ್ತೆ ಉದ್ದ 62 ಕಿಮೀ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರಾಗಿದ್ದು, ಶೀಘ್ರದಲ್ಲಿ ಟೆಂಡರ್‌ ಕರೆಯಲಾಗುವುದು. 

ಇನ್ನೂಳಿದ ಚಿಕ್ಕೋಡಿಯಿಂದ ಚಿಕ್ಕೋಡಿ ಬಾಯ್‌ಪಾಸ್‌ ಒಳಗೊಂಡು ಗೋಟೂರವರೆಗೆ 27 ಕಿಮೀ ಅಂದಾಜು 1,300 ಕೋಟಿ ಮೊತ್ತದ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಡಿಪಿಆರ್‌ ವರದಿ ತಯಾರಿಸಿ ರಸ್ತೆ ಮತ್ತು ಸಾರಿಗೆ ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರ, ದೆಹಲಿಯವರಿಗೆ ಸಲ್ಲಿಸಲಾಗಿದೆ. ಮುರಗುಂಡಿಯಿಂದ ಚಿಕ್ಕೋಡಿಯ ಅಂಕಲಿವರಗೆ 62 ಕಿಮೀ ಎರಡು ಹಂತಗಳಲ್ಲಿ ಬೃಹತ್‌ ಸೇತುವೆಗಳಗೊಂಡು 1,869.79 ಕೋಟಿಗಳಿಗೆ ರಸ್ತೆ ಉದ್ದ 62 ಕಿಮೀ ಮಂಜೂರು ಮಾಡಲು ಸಂಸದರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ ಗಡಕರಿರವರಿಗೆ ಕಳೆದ ತಿಂಗಳಿನಲ್ಲಿ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿ ಮನವಿ/ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. 

ಮಂಡ್ಯದಲ್ಲಿ ಮೋದಿ ಪರ ಅಲೆ ಎದ್ದಿದೆ: ನಳಿನ್‌ ಕುಮಾರ್‌ ಕಟೀಲ್‌

ಇದ್ದಕ್ಕೇ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ನಿರ್ದೇಶಿಸಿ ಮುರಗುಂಡಿಯಿಂದ ಚಿಕ್ಕೋಡಿವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಅತಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮಾಡಲು ಹಾಗೂ ಇದರಿಂದ ಉತ್ತರ ಕರ್ನಾಟಕ ಹಾಗೂ ಗಡಿ ಭಾಗದಲ್ಲಿ ಸುಮಾರು 16 ಸಕ್ಕರೆ ಕಾರ್ಖಾನೆಗಳಿದ್ದು ಇದರಿಂದ ರೈತರಿಗೆ, ಕಾರ್ಖಾನೆಯವರಿಗೆ ಹಾಗೂ ಸಾರ್ವಜನಿಕರಿಗೆ ಸಾರಿಗೆ ಅನುಕೂಲ ಮಾಡಿದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ ಗಡಕರಿ ಇವರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಅಭಿನಂದನೆ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios