ಪಾವಗಡ(ಫೆ.20):  ಡಿಪ್ಲೊಮೊ, ತಾಂತ್ರಿಕ ವೈದ್ಯಕೀಯ ತರಬೇತಿ ಕೇಂದ್ರ ಹಾಗೂ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆಯಲಾಗಿದೆ ಎಂದು ಪ್ರಗತಿಪರ ಚಿಂತಕ ತಾಲೂಕಿನ ನೆರಳೇಕುಂಟೆ ವಾಸಿ ಎನ್‌. ನಾಗೇಂದ್ರಕುಮಾರ್‌ ಅವರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಕನ್ನಡಪ್ರಭದ ಜತೆ ಮಾತನಾಡಿದ ಅವರು ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಪಂನ ನೆರಳೇಕುಂಟೆ ಗ್ರಾಮದ ವಾಸಿಯಾಗಿದ್ದು ಬಡತನದ ಹಿನ್ನಲೆ ಹಾಗೂ ತಂದೆ ಮಾಜಿ ಮಂಡಲ್‌ ಅಧ್ಯಕ್ಷ ನಾಗರಾಜಪ್ಪ ಹಾಗೂ ತಾಯಿ ಜಯಮ್ಮ ಅವರ ಅಶೀರ್ವಾದದ ಮೇರೆಗೆ ಪದವಿ ಹಾಗೂ ಇತರೆ ಉನ್ನತಾ ದರ್ಜೆಯ ಶಿಕ್ಷಣ ಪಡೆಯಲಾಗಿದೆ. ತರಬೇತಿ ಹಾಗೂ ಆರ್ಹತೆ ಮೇರೆಗೆ ಸರ್ಕಾರ ಶಿಕ್ಷಕ ಹುದ್ದೆ ಕಲ್ಪಿಸಲಾಗಿತ್ತು. ಕಳೆದ 14 ವರ್ಷಗಳ ಕಾಲ ತಾಲೂಕಿನ ನಾನಾ ಶಾಲೆಗಳಲ್ಲಿ ಶಿಕ್ಷಕ ಸೇವೆ ಸಲ್ಲಿಸಿದ್ದು ತಾಲೂಕಿನ ಜನತೆಗೆ ಚಿರಪರಿಚಿತನಾಗಿದ್ದೇನೆ ಎಂದರು.

ಬಿಜೆಪಿಗೆ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ: ಕಮಲಕ್ಕೆ ವಿಜಯಪತಾಕೆ

ತಾಲೂಕಿನಲ್ಲಿ ಹಲವಾರು ಜ್ವಲಂತ ಸಮಸ್ಯೆ ಕಾಡುತ್ತಿದ್ದು ಇದರ ನಿವಾರಣೆಗೆ ಹಾಗೂ ತಾಲೂಕಿಗೆ ತನ್ನದೇ ಆದ ಕೊಡುಗೆ ನೀಡಬೇಕೆಂಬ ಹಂಬಲವೊಂದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸೇರಿದಂತೆ ಡಿಪ್ಲೊಮೊ ತಾಂತ್ರಿಕ ಮತ್ತು ವೈದ್ಯಕೀಯ ತರಬೇತಿ ಕೇಂದ್ರ ಹಾಗೂ ಇತರೆ ಅಗತ್ಯ ಕೈಗಾರಿಕೆ ಕೇಂದ್ರಗಳ ಸ್ಥಾಪನೆ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು. ಶಾಶ್ವತ ಕುಡಿವ ನೀರಿನ ಸಮಸ್ಯೆ ನೀರಾವರಿಗಳ ಅನುಷ್ಠಾನ ಇತರೆ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಅದ್ಯತೆ ನೀಡಲಾಗಿದೆ. ಎಂದರು.

ಸಮಾಜ ಬದಲಾವಣೆಗೆ ಮಹತ್ತರ ಹೆಜ್ಜೆ ಇಟ್ಟಿದ್ದು ಅತಿ ಶೀಘ್ರದಲ್ಲಿಯೇ ರಾಜಕೀಯ ರಂಗಪ್ರವೇಶಿಸುವ ಮೂಲಕ ಸೇವೆಗೆ ಬದ್ಧರಾಗಿರುವುದಾಗಿ ಹೇಳಿದ ಅವರು ಚುನಾವಣೆ ವೆಚ್ಚ ಭರಿಸುವ ಮೂಲಕ ಸೂಕ್ತವಾದ ಪಕ್ಷವೊಂದರಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಖಚಿತ ನಿಲುವು ಪ್ರಕಟಿಸಿದರು.

ತಾಲೂಕಿನ ಎಲ್ಲಾ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನೊಂದವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಕಲ್ಪಿಸಲು ಆಸಕ್ತಿ ವಹಿಸಲಾಗಿದೆ.