ತುಮಕೂರು : ಗುಣವಾದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಭಾಗ್ಯ ಸಿಗ್ತಿಲ್ಲ

  • ಕೋವಿಡ್‌ನಿಂದ ಗುಣವಾದರೂ ಆಸ್ಪತ್ರೆಯಿಂದ ಹೋಗುವ ಭಾಗ್ಯ ಸಿಗುತ್ತಿಲ್ಲ
  • ಲಕ್ಷ ಲಕ್ಷ ಬಿಲ್  ಹೊಂದಿಸಲಾಗದೇ ಬಡಜನರ ಪರದಾಟ
  • ಗುಣವಾದರೂ ಅಸ್ಪತ್ರೆಯಲ್ಲೇ ಉಳಿಯುತ್ತಿರುವ ರೋಗಿಗಳು 
tumakuru hospital Charges lakhs Off bill for covid patients  snr

ತುಮಕೂರು (ಮೆ.17): ಆಸ್ಪತ್ರೆ ಬಿಲ್ ಕಟ್ಟಲಾಗದೆ ಗುಣಮುಖರಾದರು ಸೋಂಕಿತರಿಗೆ  ಡಿಸ್‌ಚಾರ್ಜ್‌ ಆಗುವ ಭಾಗ್ಯ ಸಿಗದೇ ಇರುವ ದಾರುಣ ಕಥೆ. ಕೊರೋನಾ ಪಾಸಿಟಿವ್ ಬಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲವರು ವಾರದಿಂದ ಮತ್ತೆ ಕೆಲವರು 15 ದಿವಸದಿಂದ ಇನ್ನು ಕೆಲವರ 22 ದಿವಸದಿಂದ ಚಿಕಿತ್ಸೆ ಪಡೆದು ಗುಣಮುಖರಾದರೂ ಆಸ್ಪತ್ರೆ ಬಿಲ್ ಪಾವತಿಸಲಾಗದೇ  ರೋಗಿಯನ್ನು ಡಿಸ್‌ಚಾರ್ಜ್ ಮಾಡಿಕೊಳ್ಳಲು ಸೋಂಕಿತರ ಸಂಬಂಧಿಗಳು ಪರದಾಡುತ್ತಿದ್ದಾರೆ. 

ಒಂದು ದಿನದ ಮಟ್ಟಿಗೆ ಡಿಸ್‌ಚಾರ್ಜ್ ಮುಂದೂಡಿ, ಹಣ ಹೊಂದಿಸಿಕೊಂಡು ಕರೆದುಕೊಂಡು ಹೋಗುವುದಾಗಿ ಕೇಳಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ತುಮಕೂರು ಜಿಲ್ಲೆ ಸಾಕ್ಷಿಯಾಗುತ್ತಿದೆ. 

ಶಿವಮೊಗ್ಗ : ಗುಣಮುಖರಾದ್ರೂ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿಲ್ಲ ರೋಗಿಗಳು!

ರಾಜ್ಯದ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ತುಮಕೂರು ಒಂದಾಗಿದ್ದು ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾಗುತ್ತಿದ್ದಾರೆ. ರಾಜ್ಯದ ಕೊರೋನಾ ಹಾಟ್‌ಸ್ಪಾಟ್‌ ಆದ ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಬೆಡ್‌ಗಳು ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ಕೋವಿಡ್ ಕೇರ್ ಸೆಂಟರ್‌ಗಳು ತುಂಬಿ ಹೋಗಿವೆ. 

ಜಿಲ್ಲೆಯ ಅನೇಕ ಅಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿದ್ದು ಹಳ್ಲಿ ಹಳ್ಳಿಗಳಿಗೂ ಸೋಂಕು ಹಬ್ಬಿದೆ. ಲಕ್ಷಣ ಗೋಚರವಾದ ತಕ್ಷಣ ಆಸ್ಪತ್ರೆಗೆ ಆಗಮಿಸದೇ ತಡವಾಗಿ ಬರುತ್ತಿರುವುದು ವೆಚ್ಚ ಹೆಚ್ಚಾಗಲು ಕಾರಣವಾಗಿದೆ. 

ಬಡವರು, ಕೆಳವರ್ಗದಲ್ಲಿ ಇರುವವರಿಗೆ ಆಸ್ಪತ್ರೆಯ ಬಿಲ್ ಭರಿಸುವುದು ಕಡುಕಷ್ಟವಾಗುತ್ತಿದೆ  ಹೀಗಾಗಿ ಗುಣಮುಖರಾದರೂ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯುವುದು ಕಷ್ಟವಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Latest Videos
Follow Us:
Download App:
  • android
  • ios