ಗುಬ್ಬಿ (ಆ.13): ಪ್ರಸಕ್ತ ಸಾಲಿನ ತಾಲೂಕಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಉತ್ತಮವಾಗಿ ಬಂದಿದ್ದು ಬಿ ಶ್ರೇಣಿ ಪಡೆದುಕೊಂಡಿದೆ. ಉತ್ತಮ ಫಲಿತಾಂಶ ಬರಲು ತಾಲೂಕಿನಲ್ಲಿ ಹಲವು ಹಂತದ ಶೈಕ್ಷಣಿಕ ಕಾರ್ಯಕ್ರಮಗಳು ವಿಷಯಾವಾರು ಶಿಕ್ಷಕರಿಗೆ ನಡೆಸಿದ ವಿಶೇಷ ಕಾರ್ಯಾಗಾರಗಳು ಮತ್ತು ತರಬೇತಿಗಳು ಹಾಗೂ ಇಲಾಖೆಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಉತ್ತಮ ಫಲಿತಾಂಶ ಪಡೆಯಲು ಸಹಕರಿಸಿದ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್‌ ಅಭಿನಂದಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಡತನದ ನಡುವೆ ಅರಳಿದ ಪ್ರತಿಭೆ...

ತಾಲೂಕಿನ 25 ಸರ್ಕಾರಿ ಪ್ರೌಢಶಾಲೆಗಳ ಪೈಕಿ 12 ಎ.ಶ್ರೇಣಿ, 9 ಬಿ. ಶ್ರೇಣಿ ಮತ್ತು 4 ಸಿ. ಶ್ರೇಣಿ ಪಡೆದುಕೊಂಡಿದ್ದು, 3 ವಸತಿ ಶಾಲೆಗಳು ಎ. ಶ್ರೇಣಿಯನ್ನು ಪಡೆದುಕೊಂಡಿವೆ. ಅನುದಾನ ಸಹಿತ ಪ್ರೌಢಶಾಲೆಗಳ ಪೈಕಿ ಎ ಶ್ರೇಣಿ 12, ಬಿ ಶ್ರೇಣಿ 11, ಸಿ ಶ್ರೇಣಿ 6, ಅನುದಾನ ರಹಿತ ಪ್ರೌಢಶಾಲೆಗಳ ಪೈಕಿ ಎ ಶ್ರೇಣಿ 10, ಸಿ ಶ್ರೇಣಿ 1ರಷ್ಟುಫಲಿತಾಂಶ ಪಡೆದುಕೊಂಡಿವೆ. ಪಟ್ಟಣದ ಶುಭೋದಯ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಜಿ.ಸಾಗರ್‌ 628 ಅಂಕಗಳನ್ನು ಗಳಸಿದ್ದು, ಚೇಳೂರು ಜ್ಞಾನವರ್ಧಕ ಪ್ರೌಢಶಾಲೆಯ ವಿದ್ಯಾರ್ಥಿನಿ ಲತಾಶ್ರೀ 618 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅಂಕ ತೆಗೆಯಲು ಅಡ್ಡಿಯಾಗದ ಅಂಧತ್ವ...

ಪಟ್ಟಣದ ಶುಭೋದಯ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಲ್‌.ಆರ್‌.ಚೈತ್ರಾ 617 ಅಂಕಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೇದಶ್ರೀ 603, ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿ ಮಹೇಶ್‌ 601, ಹೂವಿನಕಟ್ಟೆಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಕೋಮಲಾಬಾಯಿ 601 ಅಂಕಗಳನ್ನು ಗಳಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಅನುದಾನಿತ ಪ್ರೌಢಶಾಲೆಗಳ ಪೈಕಿ ಚೇಳೂರು ಮಲ್ಲಿಕಾರ್ಜುನ ಪ್ರೌಢಶಾಲೆಯ ವಿದ್ಯಾರ್ಥಿ ಅರುಣ್‌ 610, ಮಾವಿನಹಳ್ಳಿ ಪ್ರಗತಿ ಪರ ವಿದ್ಯಾವರ್ಧಕ ಪ್ರೌಢಶಾಲೆಯ ವಿದ್ಯಾರ್ಥಿನಿ ಕವನ 580, ಚೇಳೂರು ವಿದ್ಯಾರಣ್ಯ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ 574 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.