Asianet Suvarna News Asianet Suvarna News

Tumakuru: ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ, ರೈತ ಸಂಘದಿಂದ ಪ್ರತಿಭಟನೆ

ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ ಹಾಗೂ, ಅಡಿಕೆ ಅಮದಿಗೆ ವಿರೋಧಿಸಿ ತುಮಕೂರಿನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿವೆ.

Tumakuru farmers union protest against  privatisation of the power sector gow
Author
First Published Oct 10, 2022, 5:36 PM IST

ತುಮಕೂರು (ಅ.10): ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ ಹಾಗೂ, ಅಡಿಕೆ ಅಮದಿಗೆ ವಿರೋಧಿಸಿ ತುಮಕೂರಿನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ತುಮಕೂರು ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ನಗರದ ಕರಿಬಸವೇಶ್ವರ ವೃತ್ತದಿಂದ ತುಮಕೂರು ತಾಲೂಕು ಎಇಇ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತ ಸಂಘದ ಕಾರ್ಯಕರ್ತರು, ಸರಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ, ಘೋಷಣೆ ಕೂಗಿದರು. ಎಇಇ ಕಚೇರಿ ಬಳಿ ಸಮಾವೇಶಗೊಂಡ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ವಿದ್ಯುತ್ ಖಾಸಗೀಕರಣಕ್ಕೆ ಈಗಾಗಲೇ ಕೇಂದ್ರ ಸರಕಾರ ಸಂಸತ್ತಿನ ಉಪಸಮಿತಿಯ ಮುಂದೆ ಬಿಲ್ ಮಂಡಿಸಿದೆ. ವಿದ್ಯುತ್ ಖಾಸಗಿ ಬಿಲ್ ಎನಾದರೂ ಜಾರಿಗೆ ಬಂದರೆ, ಇಡೀ ದೇಶದಲ್ಲಿ ಆಹಾರ ಸ್ವಾವಲಂಬನೆ ಹಾಳಾಗುವುದಲ್ಲದೆ, ರೈತರು, ಬಡವರು ವಿದ್ಯುತ್ ಬಿಲ್ ಭರಿಸಲಾಗದೆ ಬೀದಿಗೆ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.

ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣದ ಬಗ್ಗೆ ಈಗಾಗಲೇ ರಾಷ್ಟ್ರದಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ಮಾತ್ರ ಇದುವರೆಗೂ ತನ್ನ ಅಭಿಪ್ರಾಯ ತಿಳಿಸಿಲ್ಲ. ಕೂಡಲೇ ರಾಜ್ಯ ಸರಕಾರ ತನ್ನ ಮೌನ ಮುರಿದು ತನ್ನ ಅಭಿಪ್ರಾಯ ತಿಳಿಸಬೇಕು.ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದಿಲ್ಲ ಎಂಬು ಘೋಷಣೆಯನ್ನು ಮಾಡಬೇಕೆಂಬುದು ರಾಜ್ಯದ ರೈತರ ಆಗ್ರಹವಾಗಿದೆ ಎಂದು ಗೋವಿಂದರಾಜು ತಿಳಿಸಿದರು.

ಖಾಸಗೀಕರಣದಿಂದ ಮೀಸಲಾತಿ ಕಣ್ಮರೆ: ಸಿದ್ದರಾಮಯ್ಯ ಆತಂಕ

ರಾಜ್ಯದಲ್ಲಿ ಸುಮಾರು 45 ಲಕ್ಷ ಕೊಳವೆ ಭಾವಿಗಳನ್ನು ಕೊರೆದು ರೈತರು ೬೦೦ ಟಿ.ಎಂ.ಸಿ ಯಷ್ಟು ಅಂತರ ಜಲವನ್ನು ಎತ್ತಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಯಾಗಿಸಿ, ಭತ್ತ, ಕಬ್ಬು ಸೇರಿದಂತೆ ಆಹಾರದ ಬೆಳೆಗಳನ್ನು ಬೆಳೆದು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಒಂದು ವೇಳೆ ವಿದ್ಯುತ್ ಖಾಸಗೀಕರಣವಾಗಿ ಸ್ಮಾರ್ಟ್ ಮೀಟರ್ ಅಳವಡಿಸಿದರೆ, ಬಿಲ್ ಕಟ್ಟಡಲಾಗದೆ ಬಹುತೇಕ ಐಪಿ ಸೆಟ್‌ಗಳು ನಿಂತು ಹೋಗಿ, ಆಹಾರದ ಕೊರತೆಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೇಲು ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅಲ್ಲದೆ, ಹಣ್ಣು, ತರಕಾರಿ, ಹೂವಿನ ಬೆಳೆಗಳ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಇದನ್ನು ಸರಕಾರ ಮನಗಂಡು, ವಿದ್ಯುತ್ ಖಾಸಗೀಕರಣಕ್ಕೆ ಎಂದಿಗೂ ಮುಂದಾಗಬಾರದು ಎಂಬುದು ರೈತರ ಆಗ್ರಹವಾಗಿದೆ ಎಂದರು.

ಮೋದಿ ಸರ್ಕಾರದಿಂದ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ: ಅಬ್ದುಲ್‌ ಜಬ್ಬಾರ್‌

ವಿವಿಧ ಬೇಡಿಕೆಗಳ ಮನವಿಯನ್ನು  ಎಇಇ ಅವರಿಗೆ ಸಲ್ಲಿಸಿದ್ರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ಪ್ರಧಾನ ಕಾರ್ಯದರ್ಶಿ ಟಿ.ಎಂ.ತಿಮ್ಮೇಗೌಡ, ಸಿ.ಎಸ್.ರಂಗಸ್ವಾಮಯ್ಯ, ಪುಟ್ಟಸ್ವಾಮಿ,ಈಶ್ವರಪ್ಪ, ಕೃಷ್ಣಪ್ಪ, ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Follow Us:
Download App:
  • android
  • ios