ತುಮಕೂರು, [ಜೂ.22]: ಜಮೀನು ವಿಚಾರದಲ್ಲಿ ನಡೆದಿದ ಗಲಾಟೆಯಲ್ಲಿ ತುಮಕೂರಿನ ಕುಣಿಗಲ್ ಕಾಂಗ್ರೆಸ್ ಮುಖಂಡನ ಪುತ್ರನೋರ್ವ  ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

2 ಅಡಿ ಜಾಗಕ್ಕೆ ಒಂದೇ ಕುಟುಂಬದ ಐವರ ತಲೆ ಉರುಳಿದವು..!

ಕಾಂಗ್ರೆಸ್ ಮುಖಂಡ ಪುಟ್ಟರೇವಣ್ಣ ಮಗ ಮಂಜುನಾಥ ಎಂಬಾತನೇ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ.ಕುಣಿಗಲ್ ತಾಲೂಕಿನ ಹೇರೂರಿನಲ್ಲಿ ಈ ಘಟನೆ ನಡೆದಿದೆ. ಪುಟ್ಟರೇವಣ್ಣನ ಸಹೋದರ ಸಂಬಂಧಿಗಳಾದ ಚಿಕ್ಕರೇವಣ್ಣ, ದೊಡ್ಡರೇವಣ್ಣ ನಡುವೆ ಮೊದಲಿನಿಂದಲೂ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿತ್ತು.  

ಅದು ಇಂದು [ಶನಿವಾರ] ಮಾತುಕಥೆ ನಡೆಯುತ್ತಿದ್ದ ವೇಳೆ ಸ್ವಲ್ಪ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಪುಟ್ಟರೇವಣ್ಣನ ಪುತ್ರ ಮಂಜುನಾಥ ಗನ್ ತೆಗೆದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಇದೀಗ ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.

ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು [ಶನಿವಾರ] ಮಧ್ಯಪ್ರದೇಶದಲ್ಲಿ ಒಂದೇ ಕುಟುಂಬದ ಐವರನ್ನು ಶೂಟ್ ಮಾಡಿ ಹತ್ಯೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.