ಸಾಗರ್‌, (ಮಧ್ಯಪ್ರದೇಶ),ಜೂ.22): ಜಾಗದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಸೇರಿ ಒಂದೇ ಕುಟುಂಬದ ಐವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದಿದೆ.

ಮೋಜ್ ಅಹಿರ್ವಾರ್(45), ಸಂಜೀವ್‌ ಅಹಿರ್ವಾರ್(35),  ರಾಜ್‌ಕುಮಾರಿ(30) ಯಶ್ವಂತ್‌(12) ಮತ್ತು  ತಾರಾಬಾಯಿ(55) ಹತ್ಯೆಗೀಡಾದವರು.

ಅದೇ ಕುಟುಂಬದ ಇನ್ನು ಮೂವರು ಮನೆಯೊಳಗೆ ಬೀಗ ಹಾಕಿಕೊಂಡಿದ್ದರಿಂದಾಗಿ ಮಹಿಳೆ ಮತ್ತು ಇಬ್ಬರು ಬಾಲಕರ ಪ್ರಾಣ ಉಳಿದಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಮನೋಜ್‌ ಮೋಜ್ ಅಹಿರ್ವಾರ್ ಮತ್ತು ಸಂಜೀವ್‌ ಅಹಿರ್ವಾರ್ ಇಬ್ಬರು ಸೋದರರು ಮತ್ತು ಅವರ ಕುಟುಂಬವು ಬಿನಾ ಟೌನ್‌ನ ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. 

ಎರಡು ದಿನಗಳ ಹಿಂದಷ್ಟೇ ಜಾಗದ ವಿಚಾರವಾಗಿ ವಿವಾದವೆದ್ದಿದೆ. ಉತ್ತಮ ರಸ್ತೆ ನಿರ್ಮಿಸುವುದಕ್ಕಾಗಿ ಮನೋಹರ್‌, ಸಂಜೀವ್‌ ಐರ್ವರ್‌ ಅವರಿಗೆ ಸೇರಿದ ಎರಡು ಅಡಿ ಜಾಗವನ್ನು ಕೇಳಿದ್ದಾನೆ. 

ಇದೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿ ಮನೋಹರ್‌ ಮತ್ತು ಅವರಿಬ್ಬರು ಮಕ್ಕಳಾದ ಪ್ರವೀಣ್‌ ಮತ್ತು ಪ್ರಶಾಂತ್‌ ಸಂಜೀವ್‌ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ ಎಂದು  ಬಿನಾ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಅನಿಲ್ ಮೌರ್ಯ ಮಾಹಿತಿ ನೀಡಿದರು.

ಈ ವೇಳೆ ಮನೋಜ್‌, ಸಂಜೀವ್‌, ಪತ್ನಿ ರಾಜ್‌ಕುಮಾರಿ ಮತ್ತು ಮಗ ಯಶ್ವಂತ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಂಜೀವ್‌ರ ತಂದೆಯ ಚಿಕ್ಕಮ್ಮ ತಾರಾಬಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾಗರ್‌ದಲ್ಲಿರುವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆರೋಪಿ ಮನೋಹರ್‌ ಐರ್ವರ್‌ ಅನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಲೈಸೆನ್ಸ್‌ ಹೊಂದಿದ್ದ ಗನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಬಳಿಕ ಅತನ ಇಬ್ಬರು ಪುತ್ರರು ಪರಾರಿಯಾಗಿದ್ದಾರೆ.

ಐಪಿಸಿ ಸೆಕ್ಷನ್‌ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.