ತುಮಕೂರು (ಆ.15): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋವಿಡ್‌-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಸರ್ಕಾರದ ನಿರ್ದೇಶನದಂತೆ ದಿನಾಂಕ 31-07-2020 ರವರೆಗೆ ಜಾರಿಯಾಗಿದ್ದ ಲಾಕ್‌ಡೌನ್‌ನ್ನು ತೆರವುಗೊಳಿಸಿದ್ದು, ಶೀಘ್ರ ನಗರ ಸಾರಿಗೆ ಕಾರ್ಯಾರಂಭ ಮಾಡಲಿವೆ.

ಕೊರೋನಾ ಅಟ್ಟಹಾಸ: ಸಾಯುವ ಮುನ್ನ ಪತ್ರಕರ್ತ ಕಣ್ಣೀರು, ವಿಡಿಯೋ ವೈರಲ್..

ತುಮಕೂರು ವಿಭಾಗದಿಂದ ಆಗಸ್ಟ್‌ 17ರಿಂದ ನಗರ ವ್ಯಾಪ್ತಿಯಲ್ಲಿ ತುಮಕೂರು ಬಸ್‌ ನಿಲ್ದಾಣದಿಂದ ಸಿದ್ದಗಂಗಾಮಠ-ಹೆಗ್ಗೆರೆ, ಶೆಟ್ಟಿಹಳ್ಳಿ-ಎಲ್ಲಾಪುರ, ಗೂಳರಿವೆ-ಎಲ್ಲಾಪುರ, ಮೇಳೇಕೋಟೆ-ಬೆಳಗುಂಬ, ಊರುಕೆರೆ-ಮರಳೂರು ದಿಣ್ಣೆ ನಗರ ಸಾರಿಗೆಗಳನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯಾಚರಣೆ ಆರಂಭಿಸಲಿವೆ.

ಸಾರಿಗೆ ಕಾರ್ಯಾರಂಭದ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್‌ ತಿಳಿಸಿದ್ದಾರೆ.