ತುಮಕೂರು, (ಜೂ.18): ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೇರಿಕೊಂಡು ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಇಂದು (ಮಂಗಳವಾರ) ತುಮಕೂರಿನ ಸುದ್ದಿಗೋಷ್ಠಿ ಮುಗಿಸಿ ಖಾಸಗಿ ಹೋಟೆಲ್‌ನಲ್ಲಿ ವಾಪಸ್ಸಾಗುತಿದಾಗ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಸುರೇಶ್ ಗೌಡರ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನಿಸಿದ್ದಾರೆ.

ತುಮಕೂರು ಗ್ರಾಮಾಂತರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವುದರ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಸುರೇಶ್ ಗೌಡ ಅವರು,  ಕಳ್ಳತನದಲ್ಲಿ ಪೊಲೀಸರು ಶಾಮಿಲಾಗಿರುವ ಶಂಕೆ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ಜೆಡಿಎಸ್ ಮುಖಂಡರು ಸುರೇಶ್ ಗೌಡರ ಮೇಲೆ ಮುಗಿಬಿದ್ದು ತಳ್ಳಾಟ ನೂಕಾಟ ಮಾಡಿ ಹಲ್ಲೆಗೆ ಮುಂದಾಗಿದ್ದಾರೆ.