ತುಮಕೂರು(ಜ.05): ಊಟ, ತಿಂಡಿ ಹಾಗೂ ಇತರೆ ಸೌಲಭ್ಯ ನಿರ್ವಹಣೆ ವಿಫಲ ದೂರುಗಳ ಮೇರೆಗೆ ಶನಿವಾರ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಐ.ಜಿ.ನಾಗರಾಜ್‌ ಹಾಗೂ ಪುರಸಭೆ ಸದಸ್ಯ ರೊಪ್ಪ ಹನುಮಂತರಾಯಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಾವಗಡ ಪಟ್ಟಣ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನ ಹಿಂಭಾಗದಲ್ಲಿ ತೆರೆಯಲಾದ ಸಮಾಜ ಕಲ್ಯಾಣ ಇಲಾಖೆಯ ಪದವಿ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಗುಣಮಟ್ಟದ ಆಹಾರ ಹಾಗೂ ಇನ್ನಿತರೆ ಸೌಲಭ್ಯಗಳ ಕೊರತೆ ಕುರಿತು ದೂರುಗಳ ಮೇರೆಗೆ ತೆರಳಿದ್ದ ತಾಪಂ ಉಪಾಧ್ಯಕ್ಷ ಐ.ಜಿ.ನಾಗರಾಜು ಇತರೆ ಗಣ್ಯರು ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಭೇಟಿ ಸಮಸ್ಯೆ ಆಲಿಸಿದ್ದಾರೆ.

ಮನೆ ಇಲ್ಲದ ಬಡವರಿಗೆ ಅಗ್ಗ ಬೆಲೆಯ ಫ್ಲಾಟ್‌

ಈ ವೇಳೆ ಹಾಸ್ಟಲ್‌ನಲ್ಲಿಯೇ ತಯಾರಿಸಿದ ಮಧ್ಯಾಹ್ನದ ಊಟ ಸೇವಿಸಿದರು. ನಂತರ ಊಟ ತಿಂಡಿ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿದ ಅವರು, ಸಮಸ್ಯೆ ಇಲ್ಲದ ಹಾಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಿ ಹಾಗೂ ಏನೇ ಸಮಸ್ಯೆ ಇದ್ದರೂ ಹೇಳಿ, ನಿಮ್ಮ ಜತೆ ನಾವಿದ್ದೇವೆ ಎಂದು ನಿಲಯ ಪಾಲಕ ಅಶ್ವತ್ಥಪ್ಪ ಹಾಗೂ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಇದೇ ವೇಳೆ ಮುಖಂಡ ಹನುಮಂತರಾಯಪ್ಪ,ಆನಂದ್‌ ಹಾಗೂ ಇತರರಿದ್ದರು.