Asianet Suvarna News Asianet Suvarna News

ಮನೆ ಇಲ್ಲದ ಬಡವರಿಗೆ ಅಗ್ಗ ಬೆಲೆಯ ಫ್ಲಾಟ್‌

ಉಡುಪಿಯಲ್ಲಿ ನಿವೇಶನ - ವಸತಿ ರಹಿತರಿಗೆ ಬಹುಮಹಡಿ ವಸತಿ ಸಮುಚ್ಚಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 1.25 ಸೆಂಟ್ಸ್‌ ಭೂಮಿಯಲ್ಲಿ ಪ್ರಥಮ ಹಂತದಲ್ಲಿ ಜಿ 4 ಮಾದರಿಯಲ್ಲಿ 460 ಮನೆಗಳ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. 2ನೇ ಹಂತದಲ್ಲಿ 264 ಮನೆಗಳ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

flat to be build in udupi for homeless
Author
Bangalore, First Published Jan 5, 2020, 2:29 PM IST

ಉಡುಪಿ(ಜ.05): ಬೆಂಗಳೂರನ್ನು ಬಿಟ್ಟರೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಉಡುಪಿ ನಗರದ ನಿವೇಶನ - ವಸತಿ ರಹಿತರಿಗೆ ಬಹುಮಹಡಿ ವಸತಿ ಸಮುಚ್ಚಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತದ ಈ ವಸತಿ ಸಮುಚ್ಚಯಕ್ಕೆ ಜ.8ರಂದು ರಾಜ್ಯದ ಕಂದಾಯ, ಪೌರಾಡಳಿತ ಸಚಿವ ಆರ್‌.ಅಶೋಕ್‌, ವಸತಿ ಸಚಿವ ಸೋಮಣ್ಣ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 1200ಕ್ಕೂ ಹೆಚ್ಚು ನಿವೇಶನ - ವಸತಿ ರಹಿತರಿದ್ದಾರೆ. ಆದರೆ, ಅವರೆಲ್ಲರಿಗೆ ನಿವೇಶನ ಒದಗಿಸುವಷ್ಟುಸರ್ಕಾರಿ ಭೂಮಿ ನಗರದಲ್ಲಿ ಲಭ್ಯ ಇಲ್ಲ. ಜೊತೆಗೆ ನಗರದಲ್ಲಿರುವ ಭೂಮಿ ದುಬಾರಿಯಾಗಿದ್ದು, ನಿವೇಶನರಹಿತ ಬಡವರಿಗೆ ಕೈಗೆಟುಕುವಂತಿಲ್ಲ.

ಕಾಂಗ್ರೆಸ್‌ನವ್ರು ಪೌರತ್ವ ಕಾಯ್ದೆ ಓದಿಲ್ಲ: ಆರ್. ಅಶೋಕ್

ಆದ್ದರಿಂದ ನಗರದ ಹೊರಭಾಗದ ಹೆರ್ಗ ಎಂಬಲ್ಲಿನ 8.22 ಎಕ್ರೆ ಭೂಮಿಯನ್ನು ಗುರುತಿಸಲಾಗಿದ್ದು, ಅದರಲ್ಲಿ 1.25 ಸೆಂಟ್ಸ್‌ ಭೂಮಿಯಲ್ಲಿ ಪ್ರಥಮ ಹಂತದಲ್ಲಿ ಜಿ 4 ಮಾದರಿಯಲ್ಲಿ 460 ಮನೆಗಳ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. 2ನೇ ಹಂತದಲ್ಲಿ 264 ಮನೆಗಳ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

ಮೋದಿ ವಿರುದ್ಧ ಅವಹೇಳನಕಾರಿ ವಾಟ್ಸಾಪ್‌ ಸ್ಟೇಟಸ್, ದೂರು ದಾಖಲು.

350 ಚದರಡಿಯ, ಹಾಲ್, ಬೆಡ್‌ ರೂಮ್, ಅಡುಗೆ ಮನೆ, ಶೌಚಾಲಯ, ಬಾಲ್ಕನಿ ಇರುವ ಪ್ರತಿ ಮನೆಗೆ 7,42,994 ರು. ವೆಚ್ಚವಾಗಲಿದೆ. ಅದರಲ್ಲಿ ಕೇಂದ್ರ ಸರ್ಕಾರದ 1.50 ಲಕ್ಷ ರು., ರಾಜ್ಯ ಸರ್ಕಾರದ 1.20 ಲಕ್ಷ ರು., ನಗರಸಭೆಯಿಂದ 74,299 ರು. ಅನುದಾನ ಇರುತ್ತದೆ. ಫಲಾನುಭವಿ 90 ಸಾವಿರ ರು.ಗಳನ್ನು ನೀಡಬೇಕು. ಉಳಿದ 3,08,695 ರು.ಗಳನ್ನು ಬ್ಯಾಂಕ್‌ ಆಫ್‌ ಬರೋಡದಿಂದ ಶೇ 8.25 ಬಡ್ಡಿಯ ಸಾಲದ ಮೂಲಕ ಫಲಾನುಭವಿ 20 ಅಥವಾ 30 ವರ್ಷಗಳ ಕಂತುಗಳಲ್ಲಿ ಭರಿಸಲಾಗುತ್ತದೆ.

ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 2 ಲಕ್ಷ ರು.ಗಳನ್ನು ಭರಿಸಿದರೆ, ಈ ಫಲಾನುಭವಿಗಳು ಕೇವಲ 60 ಸಾವಿರ ರು.ಗಳನ್ನು ಭರಿಸಬೇಕಾಗುತ್ತದೆ. ಅವರಿಗೆ 2,58,695 ರು. ಬ್ಯಾಂಕ್‌ ಸಾಲ ನೀಡಲಾಗುತ್ತದೆ. ಫಲಾನುಭವಿಗಳು ನೋಂದಾಯಿತ ಕಾರ್ಮಿಕರಾಗಿದ್ದರೆ ಅವರಿಗೆ ಬ್ಯಾಂಕು ಸಾಲದ ಮೇಲೆ ಬಡ್ಡಿ ಕೂಡ ಇರುವುದಿಲ್ಲ.

ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ

ಮೊದಲ ಹಂತದ ಫಲಾನುಭವಿಗಳಲ್ಲಿ 53 ಮನೆಗಳನ್ನು ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ, 83 ಮನೆಗಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ತಳಮಹಡಿಯ ಮನೆಗಳನ್ನು ಅಂಗವಿಕಲ ಮತ್ತು ವಯೋವೃದ್ಧ ಫಲಾನುಭವಿಗಳಿಗೆ ಕಾದಿರಿಸಲಾಗಿದ್ದು, ಉಳಿದ ಮನೆಗಳನ್ನು ಲಾಟರಿ ಮೂಲಕ ವಿತರಿಸಲಾಗುತ್ತದೆ.

ಉಳಿದ ಫಲಾನುಭವಿಗಳಿಗೆ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪರ್ಕಳ ಸಮೀಪದ ಸಣ್ಣಕ್ಕಿಬೆಟ್ಟು ಎಂಬಲ್ಲಿ 1.12 ಎಕ್ರೆ, ಸುಬ್ರಹ್ಮಣ್ಯ ನಗರದಲ್ಲಿ 0.63 ಎಕ್ರೆ ಮತ್ತು ಕೊಡವೂರುನಲ್ಲಿ 0.60 ಎಕ್ರೆ ಪ್ರದೇಶಗಳಲ್ಲಿ ಗುರುತಿಸಲಾಗಿದೆ ಎಂದು ರಘುಪತಿ ಭಟ್‌ ಮಾಹಿತಿ ನೀಡಿದರು.

KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್‌ನಲ್ಲಿ ಭಾರೀ ಹೆಚ್ಚಳ

ಹಿಂದಿನ ಶಾಸಕ ಪ್ರಮೋದ್‌ ಅವರು ಹೆರ್ಗದಲ್ಲಿ ಈ ಭೂಮಿಯನ್ನು ಗುರುತಿಸಿದ್ದರು. ಆದರೆ ಚುನಾವಣೆಯ ಸಂದರ್ಭದಲ್ಲಿ ಅವರು ಕಳುಹಿಸಿದ್ದ ಅರ್ಧಂಬರ್ಧ ಯೋಜನೆಯನ್ನು ರಾಜೀವ್‌ ಗಾಂಧಿ ವಸತಿ ನಿಗಮ ಒಪ್ಪದೆ ಹಿಂದಕ್ಕೆ ಕಳುಹಿಸಿತ್ತು. ಈಗ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ರಾಷ್ಟ್ರೀಯ ಕಟ್ಟಡ ನಿಯಮಗಳನ್ನು ಪಾಲಿಸಲಾಗಿದೆ, ಕೇಂದ್ರ ಮತ್ತು ರಾಜ್ಯದ ಅನುದಾನ ಕೂಡ ಬಂದಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಈ ಯೋಜನೆಯನ್ನು ಒಪ್ಪಿದೆ. 2021ರ ಮೆ ತಿಂಗಳೊಳಗೆ ವಸತಿ ಸಮುಚ್ಚಯ ಪೂರ್ಣಗೊಂಡು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ಹೇಳಿದ್ದಾರೆ.

Follow Us:
Download App:
  • android
  • ios