Tumakur : 21ಕ್ಕೆ ಪರಂವ ಚಿತ್ರ ಬಿಡುಗಡೆ: ಸಂತೋಷ್‌

ಪೌರಾಣಿಕ ಹಿನ್ನೆಲೆಯಿರುವ ವೀರಗಾಸೆ ಕಲೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ಚಿತ್ರೀಕರಿಸಿರುವ ಪರಂವ ಸಿನಿಮಾ ಜುಲೈ 21ಕ್ಕೆ ರಾಜ್ಯಾದ್ಯಂತ ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ನೆಲದ ಕಥೆಯನ್ನಾಧಿರಿಸಿದ ಸಿನಿಮಾವನ್ನು ಕನ್ನಡಿಗರು ನೋಡಿ, ಆಶೀರ್ವದಿಸುವಂತೆ ಚಿತ್ರದ ನಿರ್ದೇಶಕ ಸಂತೋಷ್‌ ಕೈದಾಳ ತಿಳಿಸಿದ್ದಾರೆ.

Tumakur : Paramva release on 21st: Santhosh snr

  ತುಮಕೂರು: ಪೌರಾಣಿಕ ಹಿನ್ನೆಲೆಯಿರುವ ವೀರಗಾಸೆ ಕಲೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ಚಿತ್ರೀಕರಿಸಿರುವ ಪರಂವ ಸಿನಿಮಾ ಜುಲೈ 21ಕ್ಕೆ ರಾಜ್ಯಾದ್ಯಂತ ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ನೆಲದ ಕಥೆಯನ್ನಾಧಿರಿಸಿದ ಸಿನಿಮಾವನ್ನು ಕನ್ನಡಿಗರು ನೋಡಿ, ಆಶೀರ್ವದಿಸುವಂತೆ ಚಿತ್ರದ ನಿರ್ದೇಶಕ ಸಂತೋಷ್‌ ಕೈದಾಳ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 200ಕ್ಕೂ ಹೆಚ್ಚು ರಂಗಭೂಮಿಯ ಹಿನ್ನೆಲೆಯುಳ್ಳ ಹೊಸ ಕಲಾವಿದರ ನಟಿಸಿರುವ ಪರಂವ ಚಿತ್ರ. ತುಮಕೂರು ಜಿಲ್ಲೆಯಲ್ಲಿ ಶೇ.80ರಷ್ಟುಚಿತ್ರೀಕರಣ ನಡೆಸಿದ್ದು, ಸಿದ್ಧಗಂಗಾ ಶ್ರೀಗಳ ಆಶೀರ್ವಾದದೊಂದಿಗೆ ಸಿದ್ಧಗಂಗೆಯಲ್ಲಿಯೂ ಚಿತ್ರೀಕರಿಸಲಾಗಿದೆ. ಸ್ಥಳೀಯ ಪ್ರತಿಭೆಯಾಗಿ ನಾವು ಮಾಡಿದ ಸಿನಿಮಾವನ್ನು ನೋಡಿ ಪೋ›ತ್ಸಾಹಿಸುವಂತೆ ಮನವಿ ಮಾಡಿದ್ದಾರೆ.

ವೀರಗಾಸೆ ಬಹಳ ಪ್ರಸಿದ್ಧ ಕಲೆ. ಶಿವನ ಡಮರುಗದಿಂದ ಬರುವ ನಾದವನ್ನು ಪರಂವ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತಿದೆ. ವೀರಗಾಸೆಯನ್ನು ಬದುಕಾಗಿಸಿಕೊಂಡಿದ್ದ ಕುಟುಂಬವೊಂದು, ತನಗೊಲಿದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಪಡುವ ಪಡಿಪಾಟಲುಗಳನ್ನೇ ಕಥಾವಸ್ತುವನ್ನಾಗಿಸಲಾಗಿದೆ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಪ್ರೇಮ್‌ ಸಿಡೇಗಲ್‌ ಚಿತ್ರದ ನಾಯಕನಾಗಿದ್ದು, ಮಂಗಳೂರು ಮೂಲದ ಮೈತ್ರೇಯಿ ನಾಯಕನಟಿಯಾಗಿದ್ದ, ಸುಮಾರು 200ಕ್ಕೂ ಹೆಚ್ಚು ಜನರು ಪಾತ್ರಗಳನ್ನು ಮಾಡಿದ್ದಾರೆ. ಮೊದಲು ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರ ಸ್ಪಂದನೆ ನೋಡಿ, ಥಿಯೇಟರ್‌ಗಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಪರಂವ್‌ ಚಿತ್ರದ ನಾಯಕ ನಟ ಪ್ರೇಮ ಸಿಡೆಗಲ್‌ ಬಿ.ಟೆಕ್‌ ಆಗ್ರಿಕಲ್ಚರ್‌ ಪದವೀಧರನಾಗಿ, ಸಾಣೇಹಳ್ಳಿ ರಂಗಶಾಲೆಯಲ್ಲಿ ನಟನೆ ಕಲಿತು, ನಾಟ್ಯ ಯೋಗ ರಂಗ ತಂಡದೊಂದಿಗೆ ಊರೂರು ತಿರುಗಿ ನಾಟಕ ಪ್ರದರ್ಶಿಸಿ,ಸಿನಿಮಾ ರಂಗಕ್ಕೆ ಬಂದು, ಐದಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದು, ನಂತರ 9ಕ್ಕೂ ಹೆಚ್ಚು ಚಿತ್ರಗಳಲ್ಲಿ ಶಿವರಾಜ್‌ಕುಮಾರ್‌, ಸುದೀಪ್‌ ಅವರೊಂದಿಗೆ ಸಣ್ಣಪುಟ್ಟಪಾತ್ರಗಳನ್ನು ಮಾಡಿ, ನನ್ನಂತಹ ಸಮಾನ ಮನಸ್ಕರ ಜೊತೆ ಸೇರಿ ವೀರಗಾಸೆ ಕಲೆ ಪ್ರಮುಖ ಕಥಾವಸ್ತುವಾಗಿರುವ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇವೆ ಎಂದರು.

ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಸಿನಿಮಾಗೆ ಹಲವಾರು ಹಿರಿಯ ಕಲಾವಿದರು ಸಹಕಾರ ನೀಡಿದ್ದಾರೆ. ಡಾಲಿ ಧನಂಜಯ್‌, ಮನಸ್ಸಿರಲಿ ಪ್ರೇಮ್‌, ಸಿದ್ಧಗಂಗಾ ಮಠಾಧ್ಯಕ್ಷರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ನಮ್ಮನ್ನು ಪೋ›ತ್ಸಾಹಿಸಿದ್ದಾರೆ. ಜುಲೈ 21ಕ್ಕೆ ಬಿಡುಗಡೆಯಾಗುವ ಸಿನಿಮಾ ವೀಕ್ಷಿಸಿ ಸ್ಥಳೀಯರನ್ನು ಪೋ›ತ್ಸಾಹಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಆನಂದ್‌, ನವೀನ್‌, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios