Asianet Suvarna News Asianet Suvarna News

ತುಮಕೂರು: ಮನೆ ಕಳೆದುಕೊಂಡ ವೃದ್ಧೆ, ಮಾನವೀಯತೆ ಮೆರದ ಅಧಿಕಾರಿಗಳು

ಮಾನವೀಯತೆಯುಳ್ಳ ಒಬ್ಬ ತಹಸೀಲ್ದಾರ್‌ ಏನು ಕೆಲಸ ಮಾಡಬಹುದು ಎಂಬುದಕ್ಕೆ ಕುಣಿಗಲ್‌ ತಹಶೀಲ್ದಾರ್‌ ವಿಶ್ವನಾಥ್‌ ಸಾಕ್ಷಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಳೆಗೆ ಮನೆ ಕಳೆದುಕೊಂಡ ವೃದ್ಧೆಯ ನೆರವಿಗೆ ನಿಂತ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ.

Tumakur officers helps old woman who lost home in Flood
Author
Bangalore, First Published Aug 22, 2019, 2:52 PM IST
  • Facebook
  • Twitter
  • Whatsapp

ತುಮಕೂರು(ಆ.22): ಕುಣಿಗಲ್‌ ಪಟ್ಟಣದ ಮಲ್ಲಿ ಪಾಳ್ಯ ಕಾಲೋನಿಯಲ್ಲಿ ಮಂಜಮ್ಮ ಎಂಬ ವೃದ್ಧೆಯೊಂದಿಗೆ ತಿಪ್ಪಮ್ಮ ಎಂಬ ಮಗಳು ವಾಸಿಸುವ ಮನೆ ಈ ಹಿಂದೆ ಸುರಿದ ಮಳೆಗೆ ಆಕೆಯ ಮನೆ ಕುಸಿದು ಬಿದ್ದಿತ್ತು. ಸ್ಥಳ ಪರಿಶೀಲನೆಗೆ ಹೋದ ತಹಸೀಲ್ದಾರ್‌ ವಿಶ್ವನಾಥ್‌ ಅವರ ಸ್ಥಿತಿಯನ್ನು ನೋಡಿ ತಕ್ಷಣ ತಾವು ಸೈನಿಕರಂತೆ ಕಾರ್ಯಾಚರಣೆಗೆ ಇಳಿದರು.

ಪುರಸಭಾ ಮುಖ್ಯಾಧಿಕಾರಿ ರಮೇಶ್‌, ಸಮಾಜ ಕಲ್ಯಾಣಾಧಿಕಾರಿ ಜಯಣ್ಣ, ಮುಖ್ಯ ವೈದ್ಯಾಧಿಕಾರಿ ಡಾ. ಗಣೇಶ್‌ ಬಾಬು, ಸ್ಲಂ ಬೋರ್ಡ್‌ ಮೇಲ್ವಿಚಾರಕರಾದ ರಾಜು ಸೇರಿದಂತೆ ಹಲವಾರು ಅಧಿಕಾರಿಗಳನ್ನು ಒಟ್ಟುಗೂಡಿಸಿಕೊಂಡು ಅವರವರ ಇಲಾಖೆಯಲ್ಲಿ ಸಿಗುವ ಸೌಲತ್ತುಗಳನ್ನು ಆ ವೃದ್ಧೆಗೆ ನೀಡಲು ಸಹಾಯ ಮಾಡಲು ಎಲ್ಲರಿಗೂ ಸೂಚಿಸಿದರು. ನಂತರ ಶಾಸಕ ರಂಗನಾಥ್‌ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಆ ವಾರ್ಡ್‌ ಸದಸ್ಯ ಶ್ರೀನಿವಾಸ್‌ ಸಮ್ಮುಖದಲ್ಲಿ ವೃದ್ಧೆ ಮತ್ತು ಆಕೆಯ ಮಗಳಿಗೆ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು.

ಅಗತ್ಯ ವಸ್ತುಗಳನ್ನು ಕೊಡಿಸಿದ ಅಧಿಕಾರಿ:

ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 100 ಕೆ.ಜಿ. ಅಕ್ಕಿ ತಟ್ಟೆಲೋಟ ಬೆಡ್‌ ಶೀಟ್‌ ಚಾಪೆ ಹಾಸಿಗೆ ಸೋಪು ಕೊಬ್ಬರಿ ಎಣ್ಣೆ ಸೊಳ್ಳೆ ಪರದೆ ಮಂಚ ಕೊಡಿಸಿದ್ದಾರೆ. ಪುರಸಭೆ ವತಿಯಿಂದ ಅವರಿಗೆ ವೀಲ್‌ ಚೇರ್‌ ಮತ್ತು ಸ್ಲಂ ಬೋರ್ಡ್‌ ವತಿಯಿಂದ ಮನೆ ನಿರ್ಮಿಸಿ ಕೊಡಲು ಸೂಚಿಸಿದರು.

ತುಮಕೂರು: 18 ಅಕ್ರಮ ಕಟ್ಟಡ, ಕಲಾಪ ಬಹಿಷ್ಕಾರ

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಜಯಣ್ಣ, ಉಮೇಶ್‌ ವಸಂತ್‌ ಪುರಸಭಾ ಮುಖ್ಯಾಧಿಕಾರಿ ರಮೇಶ್‌ ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಗಣೇಶ್‌ ಬಾಬು ಜಗದೀಶ್‌, ಪುರಸಭೆ ಸದಸ್ಯ ಶ್ರೀನಿವಾಸ್‌ ಸ್ಲಂಬೋರ್ಡ್‌ ಮೇಲ್ವಿಚಾರಕರಾದ ರಾಜು ಸೇರಿದಂತೆ ಇತರರು ಇದ್ದರು.

Follow Us:
Download App:
  • android
  • ios