ಚಿಕ್ಕಮಗಳೂರು(ಏ.21)  ಇದೊಂದು  ವಿಡಿಯೋ ಸೋಶಿಯುಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಚಿಕ್ಕಮಗಳೂರಿನ ದೃಶ್ಯ.  ಬೀಯರ್ ಬಾಟಲ್ ಗಳನ್ನು ಹೊತ್ತಿದ್ದ ಲಾರಿ ಪಲ್ಟಿಯಾಗಿದೆ. ಜನ ಬಿಡ್ತಾರ..

ತಾಮುಂದು ನೀಮುಂದು ಎಂದು ಕೈಗೆ ಸಿಕ್ಕ ಬೀಯರ್  ಬಾಟಲ್ ಗಳನ್ನು ತುಂಬಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದರೂ ಪರಿಸ್ಥಿತಿ  ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.  ಕೊರೋನಾ ನಿಯಮಾವಳಿ.. ಮಾಸ್ಕ್ ಎಲ್ಲ ಇಲ್ಲಿ ಕೇಳಲೇಬೇಡಿ.

ಲಾಕ್ ಡೌನ್ ಭಯಕ್ಕೆ ಬೆಚ್ಚಿದ ಮದ್ಯಪ್ರಿಯರು ಮಾಡಿದ ಕೆಲಸ

ಕೊರೋನಾ ಪ್ರಕರಣ ದೊಡ್ಡ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದರೂ ನಮ್ಮ ಜನರ ಮನಸ್ಥಿತಿ ಹೇಗಿದೆ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ.  ಜನರಿಗೆ ಕೊರೋನಾಕ್ಕಿಂತ ಕೈಗೆ ಸಿಗುವ ಬೀಯರ್ ಬಾಟಲ್ ಗಳೆ ಹೆಚ್ಚಾದವು.

ಕೊರೋನಾ ಕರ್ನಾಟಕದಲ್ಲಿ ತನ್ನ ಹಳೆಯ ದಾಖಲೆಗಳನ್ನು ಮುರಿದು ಮುಂದಕ್ಕೆ   ಹೋಗಿದೆ.  ಬುಧವಾರ ದಾಖಲೆಯ 23,558 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 12,22,202ಕ್ಕೆ ಏರಿಕೆಯಾಗಿದೆ.  ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ.. ಎಂದಷ್ಟೆ ಹೇಳಬಹುದು.