ಗದಗ(ಮಾ.08): ಸ್ಟೇರಿಂಗ್ ಕಟ್ಟಾದ ಪರಿಣಾಮ ಸಿಮೆಂಟ್ ತುಂಬಿದ್ದ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಜಿಲ್ಲೆ ನರಗುಂದ ಪಟ್ಟಣದ ಹೊರವಲಯದಲ್ಲಿ ಇಂದು(ಭಾನುವಾರ) ನಡೆದಿದೆ. ಲಾರಿಯ ಮುಂಭಾಗ ಸಂಪೂರ್ಣ ಪೀಸ್ ಪೀಸ್ ಆಗಿದೆ.  

ವೇಗವಾಗಿ ಬರುತ್ತಿದ್ದ ಲಾರಿ ರೋಡ್ ಬ್ರೇಕ್ ದಾಟುವ ವೇಳೆ ಸ್ಟೇರಿಂಗ್ ಕಟ್ ಆಗಿದ್ದರಿಂದ ಕಂದಕಕ್ಕೆ ಉರುಳಿ ಬಿದ್ದಿದೆ. ಲಾರಿಯಲ್ಲಿ‌ ಸಿಲುಕಿದ್ದ ಚಾಲಕ, ಕ್ಲೀನರ್‌ನನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಶಿವಕುಮಾರ ದೊಶೆಟ್ಟಿ, ಕ್ಲೀನರ್ ಇಸ್ಮಾಯಿಲ್ ಸಾಬ್‌ಗೆ ಗಾಯವಾಗಿದೆ. ಚಾಲಕ, ಕ್ಲೀನರ್ ಇಬ್ಬರು ಕಲಬುರಗಿ ಜಿಲ್ಲೆ ಚಿಂಚೊಳ್ಳಿ ಹಾಗೂ ನಾಗರಾಳ ಗ್ರಾಮದ  ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಲಬುರಗಿಯಿಂದ ಹುಬ್ಬಳ್ಳಿಗೆ ಸಿಮೆಂಟ್ ಲಾರಿ ಹೊರಟಿತ್ತು ಎಂದು ತಿಳಿದು ಬಂದಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.