Asianet Suvarna News Asianet Suvarna News

ಬೈಲಹೊಂಗಲ ಬಳಿ ಲಾರಿ-ಬುಲೆರೊ ಡಿಕ್ಕಿ: ತಾಯಿ ಮಗ ಸೇರಿ ಮೂವರ ಸಾವು

ಲಾರಿ-ಬುಲೆರೊ ಪಿಕ್‌ ಅಪ್ ವಾಹನ ಮುಖಾಮುಖಿ ಡಿಕ್ಕಿ| ಮೂವರು ಸಾವನ್ನಪ್ಪಿ, ನಾಲ್ವರಿಗೆ ಗಾಯ| ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಬಳಿ ನಡೆದ ದುರ್ಘಟನೆ| ಅಪಘಾದಲ್ಲಿ ತಾಯಿ ಮಗ ಸೇರಿ ಮೂವರ ಸಾವು| 

Truck Bolero vehicle Accident Near Bailhongal in Belagavi District Three People Dead
Author
Bengaluru, First Published Jan 18, 2020, 10:06 AM IST
  • Facebook
  • Twitter
  • Whatsapp

ಬೆಳಗಾವಿ(ಜ.18): ಲಾರಿ-ಬುಲೆರೊ ಪಿಕ್‌ ಅಪ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, ನಾಲ್ಕು ಮಂದಿಗೆ ಗಾಯಗಳಾದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಬಳಿ ಇಂದು(ಶನಿವಾರ) ನಡೆದಿದೆ. ಮೃತರನ್ನ ಕುಡದೊಳ್ಳಿ(30), ಕುಮಾರ್ ಕುಡದೊಳ್ಳಿ(8), ಸೋಮನಟ್ಟಿಯ ತುಳಜನ್ನವರ್(35) ಎಂದು ಗುರುತಿಸಲಾಗಿದೆ. 

ಬುಲೆರೊ ಪಿಕ್‌ ಅಪ್ ವಾಹನದಲ್ಲಿರೆಲ್ಲರೂ ಜಿಲ್ಲೆಯ ಕಡಬಿ ಶಿವಾಪುರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಯರಗಟ್ಟಿಯಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಲಾರಿ, ಬೆಳಗಾವಿಯಿಂದ ಯರಗಟ್ಟಿಯತ್ತ ತೆರಳುತ್ತಿದ್ದ ಬುಲೆರೋ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಪಘಾತದಲ್ಲಿ ತಾಯಿ ಮಗ ಸೇರಿ ಮೂವರು ಮೃತಪಟ್ಟಿದ್ದಾರೆ. ಈ ಸಂಬಂಧ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios