ಗದಗ: ಸೂರ್ಯಗ್ರಹಣ ಸಮಯದಲ್ಲೂ ತ್ರಿಕೂಟೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶ
ಗ್ರಹಣ ಸಂದರ್ಭದಲ್ಲಿ ಭಕ್ತರಿಗೆ ದೇವರ ದರ್ಶನ, ಧ್ಯಾನ, ಜಪ ಮಾಡುವುದಕ್ಕೆ ಅವಕಾಶ| ಇಡೀ ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ| ನಿತ್ಯದ ಪೂಜೆಯಂತೆ ಬೆಳಗ್ಗೆ ಪೂಜೆಗಳು ನಡೆಯಲಿವೆ, ಗ್ರಹಣ ಮುಗಿದ ನಂತರ ದೇವರಿಗೆ ಪುನಃ ವಿಶೇಷ ಪೂಜೆಗಳು ನಡೆಯಲಿವೆ|
ಗದಗ(ಜೂ.21): ಇಂದು ನಡೆಯಲಿರುವ ಕಂಕಣಾಕೃತಿ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಗದಗ ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಗ್ರಹಣ ಸಂದರ್ಭದಲ್ಲಿ ಭಕ್ತರಿಗೆ ದೇವರ ದರ್ಶನ, ಧ್ಯಾನ, ಜಪ ಮಾಡುವುದಕ್ಕೆ ಅವಕಾಶವಿದೆ. ಇಡೀ ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದೆ.
ಖಂಡಗ್ರಾಸ ಸೂರ‍್ಯಗ್ರಹಣ: ದೇಗುಲಗಳ ಬಾಗಿಲು ಬಂದ್!
ನಿತ್ಯದ ಪೂಜೆಯಂತೆ ಬೆಳಗ್ಗೆ ಪೂಜೆಗಳು ನಡೆಯಲಿವೆ, ಗ್ರಹಣ ಮುಗಿದ ನಂತರ ದೇವರಿಗೆ ಪುನಃ ವಿಶೇಷ ಪೂಜೆಗಳು ನಡೆಯಲಿವೆ ಎಂದು ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್ ಮಾಹಿತಿ ನೀಡಿದ್ದಾರೆ.