ಸೋಶಿಯಲ್ ಮೀಡಿಯಾದಲ್ಲಿ ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಜನರ ಸಂಶಯವನ್ನು ನಿವಾರಿಸಲು ಎಸ್‌ಪಿ ಸಮ್ಮುಖದಲ್ಲಿಯೇ ಗುಂಡಿ ತೆಗೆದು ಪರಿಶೀಲಿಸಲಾಗುತ್ತಿದೆ.

ದಾವಣಗೆರೆ(ಆ.17): ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂದು ಕೆಲವರು ಸಾಮಾಜಿ ಜಾಲತಾಣದಲ್ಲಿ ಮಾಹಿತಿ ಹಾಕಿರುವ ಕಾರಣ ಎಸ್ ಪಿ ಅವರು ತಾಲ್ಲೂಕು ಪೊಲೀಸ್ ಇಲಾಖೆಗೆ ಸತ್ಯಾಂಶವನ್ನು ತಿಳಿಯಲು ತಾಹಸೀಲ್ದಾರ್ ಸಮ್ಮುಖದಲ್ಲಿ ಗುಂಡಿ ತೆಗೆಸಿ ಪರಿಶೀಲಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಭಾಗದಲ್ಲಿ ಹಗೇವು ಇದೆ. ಹಿಂದಿನ ಕಾಲದಲ್ಲಿ ರೈತರು ಬೆಳೆದ ಅಕ್ಕಿ . ಜೋಳ ರಾಗಿ ಹಾಗೂ ಇತರೆ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಈ ಹಗೇವ್ ಗಳನ್ನು ಮಾಡಿಸಲಾಗುತ್ತಿತ್ತು. ಗುಂಡಿಯನ್ನು ನೋಡಿ ನಿಧಿ ಇರಬಹುದೆಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಶೋಧನೆ ನಡೆಯುತ್ತಿದೆ. ಆದರೆ ಯಾವುದೇ ನಿಧಿ ಸಿಕ್ಕಿಲ್ಲ