Asianet Suvarna News Asianet Suvarna News

Mangaluru: ಪೊಲೀಸ್ ಕ್ಯಾಂಪಸ್‌ನಲ್ಲೇ ಲಕ್ಷಾಂತರ ಮೌಲ್ಯದ ಮರಗಳು ಕಟ್!

ನಗರದ ಹೊರಭಾಗದಲ್ಲಿರುವ  ಕರ್ನಾಟಕ ಮೀಸಲು ಪೊಲೀಸ್ ಪಡೆಯ ಕ್ಯಾಂಪಸ್‌ನಲ್ಲಿ ಲಕ್ಷಾಂತರ ಮೌಲ್ಯದ ಮರಗಳ ಮಾರಣ ಹೋಮ ನಡೆದಿರೋ ಆರೋಪ ಕೇಳಿ ಬಂದಿದ್ದು, ಅರಣ್ಯ ‌ಇಲಾಖೆ ಲಿಖಿತ ಅನುಮತಿ ಪಡೆಯದೇ ಮರಗಳನ್ನು ಕಡಿಯಲಾಗಿದೆ.

Trees worth lakhs were cut in Mangaluru police campus itself gvd
Author
Bangalore, First Published Aug 24, 2022, 12:45 PM IST

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು

ಮಂಗಳೂರು (ಆ.24): ನಗರದ ಹೊರಭಾಗದಲ್ಲಿರುವ  ಕರ್ನಾಟಕ ಮೀಸಲು ಪೊಲೀಸ್ ಪಡೆಯ ಕ್ಯಾಂಪಸ್‌ನಲ್ಲಿ ಲಕ್ಷಾಂತರ ಮೌಲ್ಯದ ಮರಗಳ ಮಾರಣ ಹೋಮ ನಡೆದಿರೋ ಆರೋಪ ಕೇಳಿ ಬಂದಿದ್ದು, ಅರಣ್ಯ ‌ಇಲಾಖೆ ಲಿಖಿತ ಅನುಮತಿ ಪಡೆಯದೇ ಮರಗಳನ್ನು ಕಡಿಯಲಾಗಿದೆ.

ಮಂಗಳೂರು ಹೊರವಲಯದ ಅಸೈಗೋಳಿಯ ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್ ಕ್ಯಾಂಪಸ್‌ನಲ್ಲಿ ಲಕ್ಷಾಂತರ ಮೌಲ್ಯದ ಹಲಸು, ಅಕೇಶಿಯಾ ಮರಗಳನ್ನು ಕಡಿಯಲಾಗಿದೆ. 6 ಹಲಸಿನ ಮರ, 1 ಅಕೇಶಿಯಾ ಮರ ಸೇರಿ ಹತ್ತಕ್ಕೂ ಅಧಿಕ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಗಮನಕ್ಕೆ ತರದೇ ಲಕ್ಷಾಂತರ ಮೌಲ್ಯದ ಮರಗಳನ್ನು ಕಡಿಯಲಾಗಿದೆ. ಬೆಟಾಲಿಯನ್ ಕ್ಯಾಂಪಸ್‌ನಲ್ಲಿ ಸದ್ಯ ಕಡಿದ ಮರದ ಬುಡಗಳು, ಟೊಂಗೆಗಳು ಸಾಕ್ಷಿಯಾಗಿ ನಿಂತಿವೆ. 

ಪುತ್ತೂರು: ಹಿಂದೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಫೀಲ್ಡಿಗಿಳಿದ RSS

ಅನಧಿಕೃತವಾಗಿ ಬೆಟಾಲಿಯನ್ ಅಧಿಕಾರಿಗಳೇ ಮರ ಕಡಿದಿರೋ ಶಂಕೆ ವ್ಯಕ್ತವಾಗಿದ್ದು, ಸದ್ಯ ಕೆಲ ಮರದ ಬುಡಗಳಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಕ್ಯಾಂಪಸ್ ಎಂಟ್ರಿಯಾಗುವ ದಾರಿ, ಕ್ಯಾಂಟೀನ್ ಜಾಗಗಳಲ್ಲಿ ಮರ ಕಡಿಯಲಾಗಿದೆ. ಅರಣ್ಯ ‌ಇಲಾಖೆ ಲಿಖಿತ ಅನುಮತಿ ‌ನೀಡದೇ ಇದ್ದರೂ ಮರಗಳನ್ನ ಕಡಿಯಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಡೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಆವರಣ ಒಳಗೆ ಸಾರ್ವಜನಿಕರ ಪ್ರವೇಶ ಇಲ್ಲವಾಗಿದ್ದು, ಏನೇ ನಡೆದರೂ ಹೊರ ಜಗತ್ತಿನ ಗಮನಕ್ಕೆ ‌ಬರೋದಿಲ್ಲ. ಹೀಗಾಗಿ ಹಲವಾರು ‌ಮರಗಳನ್ನು ಕಡಿದು ಸದ್ಯ ಮಣ್ಣು ಹಾಕಿ ಮುಚ್ಚಿರುವ ಆರೋಪ ಕೇಳಿ ಬಂದಿದೆ.  ಇನ್ನು ಈ ಬಗ್ಗೆ  ಉಪವಲಯ ಅರಣ್ಯಾಧಿಕಾರಿ ಮಹಾಬಲ ಸ್ಪಷ್ಟನೆ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ

ಯಾರೋ ತಪ್ಪು ‌ಮಾಹಿತಿ ಕೊಟ್ಟಿದ್ದಾರೆ:
ಬೆಟಾಲಿಯನ್ ಕ್ಯಾಂಪಸ್‌ನಲ್ಲಿ ಮರ ಕಡಿಯಲಾಗಿದೆ ಅಂತ ಯಾರೋ ತಪ್ಪು ‌ಮಾಹಿತಿ ಕೊಟ್ಟಿದ್ದಾರೆ. ಅಲ್ಲಿ ಯಾವುದೋ ಒಂದು ‌ಮರ ಕಡಿದಿದ್ದೇವೆ ಅಷ್ಟೇ. ಕ್ಯಾಂಪಸ್ ‌ಪಕ್ಕದ ಮನೆಯವರ ದೂರಿನ ಹಿನ್ನೆಲೆ ಒಂದು ಮರ ಕಡಿಯಲಾಗಿದೆ. ಈ ವೇಳೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಫೋನ್ ಮಾಡಿ ಅವರ ಗಮನಕ್ಕೆ ತರಲಾಗಿದೆ. ಬೇರೆ ಯಾವುದೇ ಮರ ಕಡಿದಿಲ್ಲ.

ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಖಚಿತ: ವಿವಿಧ ಕಾಮಗಾರಿಗೆ ಶಂಕು

ಲಿಖಿತ ಅನುಮತಿ ಕೊಟ್ಟಿಲ್ಲ, ಮೌಖಿಕವಾಗಿ ಹೇಳಿದ್ದೆ: ಅಪಾಯಕಾರಿ ಮರ ಕಡಿಯಲು ಅವರು ಅರ್ಜಿ ಕೊಟ್ಟಿದ್ದರು. ಆದರೆ ನಾವು ಅವರಿಗೆ ಇನ್ನೂ ಲಿಖಿತ ಅನುಮತಿ ಕೊಟ್ಟಿಲ್ಲ. ಆದರೆ ಪಟ್ಟಾ ಜಾಗದಲ್ಲಿ ಅರ್ಜಿ ಕೊಟ್ಟು ಅವರು ಕಡಿಯಬಹುದು. ಆದರೆ ಅದನ್ನ ಸಾಗಾಟ ಮಾಡುವ ಹಾಗಿಲ್ಲ. ತೀರಾ ಅಪಾಯಕಾರಿ ಇದ್ದರೆ ಕಡಿಯಬಹುದು. ಸದ್ಯ ಅವರು ಒಂದು ಕಾಡು ಜಾತಿ ಸೇರಿ ನಾಲ್ಕು ಕರ ಕಡಿದಿದ್ದಾರೆ. ನಾವು ಪರಿಶೀಲನೆ ಮಾಡಿ ಮೌಖಿಕವಾಗಿ ಕಡಿಯಲು ಹೇಳಿದ್ದೇವೆ ಎಂದು ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ಎಂದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios