Asianet Suvarna News Asianet Suvarna News

Bengaluru: ಬಡವನ ಜೀವನಕ್ಕೆ ಬೆಲೆಯೇ ಇಲ್ಲ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಡಪಾಯಿ ಆಟೋಚಾಲಕ ಬಲಿ!

Tree Fall On Auto In Vijayanagar ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡಪಾಯಿ ಆಟೋ ಡ್ರೈವರ್‌ ಬಲಿಯಾಗಿದ್ದಾನೆ. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಅದೇ ದಿನ ಸೂತಕದ ವಾತಾವರಣ ನಿರ್ಮಾಣವಾಗಿದೆ.

tree falls on auto driver shivarudraiah Death Wife Allegs on BBMP and Forest Department san
Author
First Published Aug 17, 2024, 9:23 AM IST | Last Updated Aug 17, 2024, 9:27 AM IST


ಬೆಂಗಳೂರು (ಆ.17): ಇಡೀ ಬೆಂಗಳೂರಿಗೆ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಆದರೆ, ಆಟೋ ಚಾಲಕ ಶಿವರುದ್ರಯ್ಯ ಮನೆಯಲ್ಲಿ ಮಾತ್ರ ಬದುಕಿಗೆ ಏಕೈಕ ಆಸರೆಯಾಗಿದ್ದ ಆತನನ್ನು ಉಳಿಸಿಕೊಳ್ಳುವ ಹೋರಾಟವಿತ್ತು. ಕೊನೆಗೂ ಮಧ್ಯರಾತ್ರಿಯ ವೇಳೆಗೆ ಅವರ ಹೋರಾಟಕ್ಕೆ ಫಲ ಸಿಗಲಿಲ್ಲ. ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಡಪಾಯಿ ಆಟೋ ಡ್ರೈವರ್‌ ಸಾವು ಕಂಡಿದ್ದಾನೆ. ಹಬ್ಬದ ಸಂಭ್ರಮದಲ್ಲಿದ್ದ ಮನೆ, ಕೆಲ ಹೊತ್ತಲ್ಲಿಯೇ ಸೂತಕದ ಮನೆಯಾಗಿ ಪರಿವರ್ತನೆಯಾಯಿತು. ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ವಿಜನಯಗರದ ಎಂಸಿ ಲೇಔಟ್‌ನಲ್ಲಿದ್ದ ಶಿವರುದ್ರಯ್ಯ ಅವರ ಆಟೋದ ಮೇಲೆ ಮರ ಬಿದ್ದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಫಲ ಸಿಗಲಿಲ್ಲ. ಮರ ತೆರವಿಗೆ ಸೂಚಿಸಿದ್ರು,ಬಿಬಿಎಂಪಿ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ದಿಂದಾಗಿ ಈ ಸಾವು ಎದುರಾಗಿದೆ. ಸಾರ್ವಜನಿಕರು ಒಣ ಮರ ತೆರವು ಮಾಡುವಂತೆ ದೂರು ನೀಡಿದ್ದರೂ. ಬಿಬಿಎಂಪಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿತ್ತು. ಹೀಗಾಗಿ ಶುಕ್ರವಾರ 50 ವರ್ಷದ ಆಟೋ ಚಾಲಕ ಶಿವರುದ್ರಯ್ಯ ಮೇಲೆ ಮರ ಬಿದ್ದು ತೀವ್ರ ಗಾಯಗೊಂಡಿದ್ದರು. ಪ್ರಕರಣದ ವಿಚಾರವಾಗಿ ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಅವರನ್ನು ತಕ್ಷಣವೇ ಸ್ತಲೀಯ ಗಾಯತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಅವರನ್ನು ವಿಕ್ಟೋರಿಯಾ ಹಾಗೂ ಕಿಮ್ಸ್‌ ಆಸ್ಪತ್ರೆಗೆ ಸಾಗಿಸುವ ನಡುವೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಶಿವರುದ್ರಯ್ಯ ಅವರ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಶಿವರುದ್ರಯ್ಯ ಮೃತದೇಹವನ್ನು ಕಿಮ್ಸ್‌ ಆಸ್ಪತ್ರೆಗೆ ಸದ್ಯ ರವಾನೆ ಮಾಡಲಾಗಿದೆ. ಶುಕ್ರವಾರ ಹಬ್ಬದ ನಡುವೆಯೂ ಶಿವರುದ್ರಯ್ಯ ಆಟೋ ಬಾಡಿಗೆಗೆ ಬಂದಿದ್ದರು. ವಿಜಯನಗರದ ಎಂ ಸಿ ಲೇಔಟ್ ಬಳಿ ಬರುವಾಗಲೇ ಚಲಿಸುತ್ತಿದ್ದ ಆಟೋದ ಮೇಲೆ ಮರ ಬಿದ್ದಿತ್ತು. ಮರ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಮೃತ ಶಿವರುದ್ರಯ್ಯ ಪತ್ನಿ ಗೌರಮ್ಮ  ಈ ಬಗ್ಗೆ ಮಾತನಾಡಿದ್ದು,  ನನ್ನ ಗಂಡನನ್ನು ಉಳಿಸಿಕೊಳ್ಳಬಹುದಿತ್ತು. ಬಿಬಿಎಂಪಿ ಫಾರೆಸ್ಟ್ ಡಿಪಾರ್ಟ್ ಮೆಂಟ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನನ್ನ ಗಂಡ ಸಾವು ಕಂಡದ್ದಾರೆ. ಗಾಯಿತ್ರಿ ಆಸ್ಪತ್ರೆಯಿಂದ ಹೊರಟಾಗ ವಿಕ್ಟೋರಿಯಾ ದಲ್ಲಿ ಬೆಡ್ ಇದೆ ಎಂದಿದ್ದರು. ಆದರೆ ಅಲ್ಲಿ ಹೋದಾಗ ಬೆಡ್ ವ್ಯವಸ್ಥೆ ಇರಲಿಲ್ಲ. ಬಳಿಕ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋದೆವು. ಅಲ್ಲಿ ಹೋಗೋ ಮಾರ್ಗ ಮಧ್ಯೆ ನನ್ನ ಗಂಡ ಉಸಿರು ನಿಂತು ಹೋಯ್ತು' ಎಂದು ಕಣ್ಣೀರಿಟ್ಟಿದ್ದಾರೆ.

ಬೆಂಗಳೂರಲ್ಲಿ ಭಾರೀ ಮಳೆ; ಆಟೋ ಮೇಲೆ ಬಿದ್ದ ಬೃಹತ್ ಮರ! ಚಾಲಕ, ಪ್ರಯಾಣಿಕರಿಗೆ ಗಾಯ!

'ಆಂಬ್ಯುಲೆನ್ಸ್ ಕೂಡ ನಾವೇ ಅರೆಂಜ್ ಮಾಡಿದ್ದೆವು. ನನ್ನ ಗಂಡನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ಬದುಕುತ್ತಿದ್ದರು. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನನ್ನ ಗಂಡನನ್ನು ಕಳೆದುಕೊಂಡಿದ್ದೇವೆ. ಹಣ ಇಲ್ಲ ಅಂತ ಖಾಸಗಿ ಆಸ್ಪತ್ರೆಗೆ ಹೋಗೋದಕ್ಕೆ ಹಿಂದೇಟು ಹಾಕಿದೆವು. ಇವತ್ತು ನನ್ನ ಮನೆಯವರನ್ನು ಕಳೆದುಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಗೆ ಸೇರಿಸಿದ್ರೆ, ಟೈಮ್‌ಗೆ ಸರಿಯಾಗಿ ಟ್ರೀಟ್‌ಮೆಂಟ್‌ ಸಿಗುತ್ತಿತ್ತು. ನನ್ನ ಗಂಡ ಬದುಕುತ್ತಿದ್ದರು. ಫಾರೆಸ್ಟ್ ಡಿಪಾರ್ಟ್ ಮೆಂಟ್ ಅವರು ಬೆಡ್ ಅರೆಂಜ್ ಆಗಿದೆ. ವೆಟಿಲೇಟರ್ ಇದೆ ಅಂತ ಎಲ್ಲಾ ಹೇಳಿ ಅವರ ಮಾತು ಕೇಳಿ ನನ್ನ ಗಂಡ ಕಳೆದುಕೊಂಡಿದ್ದೇವೆ. ಮನೆಗೆ ಆಧಾರವಾಗಿದ್ದವರು ಅವರು ಒಬ್ಬರೇ. ಹಬ್ಬ ಮಾಡಿ ಬಂದುವರು ಇನ್ನು ಉಳಿಯಲೇ ಇಲ್ಲ ಎಂದು ಕಣ್ಣೀರಿಡುತ್ತಲೇ ಮಾತನಾಡಿದ್ದಾರೆ.

Viral Video: ಅಟಲ್‌ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಜುಟ್ಟು ಹಿಡಿದು ರಕ್ಷಿಸಿದ ಕ್ಯಾಬ್‌ ಡ್ರೈವರ್!

ಮೊದಲು ಶಿವರುದ್ರಯ್ಯರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಳಿಕ ಸ್ಥಳಕ್ಕೆ ಹೋಗಿದ್ದ ಬಿಬಿಎಂಪಿ ಅಧಿಕಾರಿಗಳು. ನಂತರ ಶಿವರುದ್ರಯ್ಯರನ್ನ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಪ್ಟ್ ಮಾಡಲು ಸೂಚನೆ ನೀಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಹೋಗಲು ಸೂಚನೆ ಸಿಕ್ಕಿತ್ತು. ಅದ್ರೆ ಬೆಡ್ ಇಲ್ಲ ಅಂತಾ ಹೇಳಿ ಅಲ್ಲಿನ ಸಿಬ್ಬಂದಿ ಕಳಿಸಿದ್ದರು. ವಿಕ್ಟೋರಿಯಾದಿಂದ ಕಿಮ್ಸ್ ಗೆ ಬರುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು  ಪತ್ನಿ ಗೌರಮ್ಮ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios