ಮಲ್ಪೆ (ನ.12): ಇಲ್ಲಿನ ಸಂಪಿಗೆನಗರದ ನಿವಾಸಿ ವಿಜಯ ಪೂಜಾರಿ ಎಂಬವರಿಂದ ಇಬ್ಬರು ಮಂಗಳಮುಖಿಯರು ಸುಮಾರು 80 ಸಾವಿರ ರು. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಅವರು ರಾತ್ರಿ 10.15 ಗಂಟೆಗೆ ಬೈಕ್‌ನಲ್ಲಿ ಕಿನ್ನಿಮೂಲ್ಕಿ ಗೋಪುರದ ಬಳಿ ಸವೀರ್‍ಸ್‌ ರಸ್ತೆಯಲ್ಲಿ ಹೋಗುತ್ತಿದ್ದಾಗ, ರಸ್ತೆಪಕ್ಕ ಒಂದು ಬಿಳಿ ಬಣ್ಣದ ಕಾರು ಮತ್ತು ಬೈಕ್‌ ನಿಂತಿದ್ದವು. 

ಕಾರಿನ ಎದುರುಗಡೆ ಇದ್ದ ಇಬ್ಬರು ಮಂಗಳಮುಖಿಯರು ವಿಜಯ ಅವರನ್ನು ನಿಲ್ಲಿಸಿ ಕುತ್ತಿಗೆಯನ್ನು ಸವರಿಕೊಂಡು ಎಲ್ಲಿಗೆ ಹೋಗುತ್ತಿರಿ ಎಂದು ಕೇಳಿದರು. ಅವರು ಸಂಪಿಗೆನಗರ ಎಂದಾಗ, ಕಾರಿನಲ್ಲಿದ್ದ ಇಬ್ಬರೂ ಕಾರಿನಲ್ಲಿ ವೇಗವಾಗಿ ಮಂಗಳೂರಿನ ಕಡೆ ಹೋದರು. 

Vocal for Local, ನೀವು ಆಯ್ಕೆ ಮಾಡಬೇಕಾದ ದೇಸೀ ಫ್ಯಾಷನ್ trends ...

ವಿಜಯ ಅವರು ಸಂಶಯಗೊಂಡು ಕುತ್ತಿಗೆಯನ್ನು ನೋಡಿದಾಗ 2 ಪವನಿನ ಚಿನ್ನದ ಸರ ಕಿತ್ತುಕೊಂಡು ಹೋಗಿರುವುದು ಅರಿವಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.