ಕನ್ನಡ ಕಲಿಯದ ಬ್ಯಾಂಕ್‌ ಸಿಬ್ಬಂದಿಯನ್ನು ಹೊರರಾಜ್ಯಕ್ಕೆ ವರ್ಗಾವಣೆ ಮಾಡಿ

ಆರು ತಿಂಗಳೊಳಗೆ ಕನ್ನಡ ಕಲಿಯದಿರುವ ಬ್ಯಾಂಕ್‌ ಸಿಬ್ಬಂದಿಯನ್ನು ರಾಜ್ಯದಿಂದ ಹೊರಕ್ಕೆ ವರ್ಗಾವಣೆ ಮಾಡಬೇಕು ಎಂದು ಸಾಹಿತಿ ಭೇರ್ಯ ರಾಮಕುಮಾರ್‌ ಆಗ್ರಹಿಸಿದರು.

Transfer bank staff who do not learn Kannada  snr

 ಭೇರ್ಯ (ನ.11):  ಆರು ತಿಂಗಳೊಳಗೆ ಕನ್ನಡ ಕಲಿಯದಿರುವ ಬ್ಯಾಂಕ್‌ ಸಿಬ್ಬಂದಿಯನ್ನು ರಾಜ್ಯದಿಂದ ಹೊರಕ್ಕೆ ವರ್ಗಾವಣೆ ಮಾಡಬೇಕು ಎಂದು ಸಾಹಿತಿ ಭೇರ್ಯ ರಾಮಕುಮಾರ್‌ ಆಗ್ರಹಿಸಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಪರಿಷತ… ಹಾಗೂ ಡಾ. ರಾಜ…, ಪುನಿತ್‌ ರಾಜಕುಮಾರ್‌ ವೇದಿಕೆಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕನ್ನಡ ಭಾಷೆ ಬಳಸದಿರುವ ಬ್ಯಾಂಕ್‌ ಸಿಬ್ಬಂದಿಯಿಂದ ಗ್ರಾಮೀಣ ರೈತರು ಹಾಗೂ ಮಹಿಳೆಯರಿಗೆ ಅಪಾರ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಬ್ಯಾಂಕಿನ ಮುಖ್ಯ ಆಡಳಿತ ಕಚೇರಿಗಳಿಗೆ ಶಿಸ್ತಿನ ಆದೇಶ ನೀಡಬೇಕೆಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಕನ್ನಡಿಗರ ಹೃದಯದ ಭಾಷೆ. ಜನರ ಜೀವವೂ ಕನಡವೇ.. ಬ್ಯಾಂಕ್‌ಗಳಲ್ಲಿ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ, ತಂಬಾಕು ಮಂಡಳಿ ಕಚೇರಿಗಳಲ್ಲಿ ಅತಿ ಹೆಚ್ಚು ಆಂಗ್ಲ ಭಾಷೆಯನ್ನು ಬಳಸಲಾಗುತ್ತಿದೆ. ಆ ಮೂಲಕ ಕನ್ನಡಿಗರ ಚಿಂತನೆಗಳಿಗೆ ಕೊಡಲಿ ಪೆಟ್ಟು ನೀಡಲಾಗುತ್ತಿದೆ. ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಕೂಡಲೇ ಶಿಸ್ತಿನ ಆದೇಶ ಹೊರಡಿಸಬೇಕು. ಕೇಂದ್ರ ಸರ್ಕಾರದ ಭಾಷಾ ನೀತಿಯಂತೆ ತ್ರಿಭಾಷಾ ಸೂತ್ರ ಜಾರಿಗೆ ತರಬೇಕು. ಎಲ್ಲೆಡೆ ಕನ್ನಡ ಬಳಕೆ ಕಡ್ಡಾಯ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬಿಇಒ ಟಿ.ಎನ್‌. ಗಾಯಿತ್ರಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಉಳಿವಿಗೆ ಶ್ರಮಿಸಬೇಕು. ಬ್ಯಾಂಕ್‌, ಶಿಕ್ಷಕ, ಪೊಲೀಸ್‌ ಅಧಿಕಾರಿ, ರೈಲ್ವೆ ಹೀಗೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಎದುರಿಸಬೇಕು. ಕಷ್ಟಪಟ್ಟು ಅಧ್ಯಯನ ಮಾಡಿ ಬದುಕು ಕಟ್ಡಿಕೊಳ್ಳಬೇಕು ಎಂದರು.

ಕನ್ನಡ ಪರ ಚಿಂತಕ ಡಾ.ಎಂ.ಆರ್‌. ವಿನಯ  ಮಿರ್ಲೆ ಮಾತನಾಡಿ, ಕನ್ನಡಿಗರು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಬೇಕು. ನಾಡು,ನುಡಿ,ಸಂಸೃತಿ ರಕ್ಷಿಸಲು ಶ್ರಮಿಸಬೇಕು ಎದರು. ಜೊತೆಗೆ ಕನ್ನಡ ಗೀತೆಗಳನ್ನು ಸ್ವತಃ ಹಾಡಿ, ಮಕ್ಕಳ ಬಳಿಯೂ ಸಾಮೂಹಿಕವಾಗಿ ಹಾಡಿಸಿ ಕಾರ್ಯಕ್ರಮಕ್ಕೆ ರಂಗು ತಂದರು.

ಕಾಲೇಜಿನ ಪ್ರಾಂಶುಪಾಲೆ ಕೋಮಲ, ಕನ್ನಡ ಉಪನ್ಯಾಸಕ ಮಹೇಶ್‌, ನಾಗೇಂದ್ರ, ಹಿರಿಯ ಅಧ್ಯಾತ್ಮಿಕ ಚಿಂತಕ ಎಸ್‌. ಗುಣಚಂದ್ರ ಕುಮಾರ್‌ ಮಾತನಾಡಿದರು.

ಬಾಲಕೃಷ್ಣ, ಮಂಜುಳ, ಬಿ.ಸಿ. ಗೀತಾ, ಜಯಶ್ರೀ, ಪೂಜಿತಾ ಹಾಗೂ ವಿದ್ಯಾರ್ಥಿಗಳು ಇದ್ದರು.

ಕನ್ನಡ ಭಾಷೆ ಉಳಿಸಿ

ಹುಣಸೂರು  :  ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆಯಾಗಿದ್ದು, ಭಾಷೆಯ ಪರಂಪರೆಯನ್ನು ಉಳಿಸದಿದ್ದರೆ ಅನಾಹುತ ಖಂಡಿತವೆಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಮೈಸೂರು ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಬಾಷೆಗೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಮತ್ತು ಭವ್ಯ ಇತಿಹಾಸವಿದೆ. ಕನ್ನಡ ಭಾಷೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಇತರ ಭಾಷಿಕರಿಗೂ ಬೇಕಾದ ಭಾಷೆಯಾಗಿದೆ. ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ನಮ್ಮ ಭಾಷಾ ಸಂಸ್ಕೃತಿಯನ್ನು, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವತ್ತ ಎಚ್ಚರವಹಿಸಿದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತವಾಗುವುದು ನಿಶ್ಚಿತ ಎಂದು ಅವರು ಎಚ್ಚರಿಸಿದರು.

ಕನ್ನಡಿಗರಿರದ ಸ್ಥಳವಿಲ್ಲ: ಭಾರತದ ಅಸ್ಮಿತೆಯಾಗಿರುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಬರುವ ಪಾತ್ರಗಳಲ್ಲಿ ಕನ್ನಡಿಗರಿದ್ದಾರೆ. ಪ್ರಭು ಶ್ರೀರಾಮಚಂದ್ರನ ಗೆಲುವಿನಲ್ಲಿ ಕನ್ನಡಿಗ ಹನುಮಂತನ ಪಾತ್ರ ಬಹುಮುಖ್ಯ. ರಾಮ ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡ ಪಂಪ ಸರೋವರ ನಮ್ಮ ರಾಜ್ಯದ ತುಂಗಭದ್ರಾನದಿಯಾಗಿದೆ. ಪರಶುರಾಮನ ತಾಯಿ ಎಲ್ಲಮ್ಮ ಸವದತ್ತಿಯವಳಾಗಿದ್ದಾಳೆ ಪಂಚಪಾಂಡವರಲ್ಲಿ ಮೊದಲ ಮೂವರು ತಾಯಿ ಕುಂತಿದೇವಿ ಕನ್ನಡಿಗಳು. ಕುಂತಲರಾಜ್ಯದ ಹೆಣ್ಣು ಮಗಳು, ಕುಂತಲ ರಾಜ್ಯವೆಂದರೆ ಇಂದಿನ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಯನ್ನೊಳಗೊಂಡ ಪ್ರದೇಶವಾಗಿದೆ ಎಂದರು.

Latest Videos
Follow Us:
Download App:
  • android
  • ios