ಅಡಿಕೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳ ತರಬೇತಿ

ಐಸಿಎಆರ್‌- ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

Training in Scientific Farming Practices in  Areca  Nut Crop snr

  ಸುತ್ತೂರು :  ಐಸಿಎಆರ್‌- ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಮುಖ್ಯಅತಿಥಿಗಳಾಗಿ ಮೈಸೂರಿನ ನಿವೃತ್ತ ಸಿಸಿಎಫ್‌ ಮತ್ತು ಪ್ರಗತಿಪರ ರೈತ ಅಂಬಾಡಿ ಮಹದೇವ್‌ ಮಾತನಾಡಿ, ಅಡಿಕೆ ಬೆಳೆಯನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈಸೂರು ಭಾಗದಲ್ಲಿ ಬೆಳೆಯುತ್ತಿದ್ದು, ರೈತರು ಮೊದಲು ಉತ್ತಮ ಅಡಿಕೆ ಬೆಳೆಯುವ ಮಾಹಿತಿ ಪಡೆದು ತೋಟ ಮಾಡಬೇಕು, ಅದಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಿಮಗೆ ಮಾಹಿತಿ ನೀಡುತ್ತಾರೆ ಹಾಗೂ ಬೆಳೆಯನ್ನು ಬೆಳೆಯುವಾಗ ಯಾವುದೇ ತೊಂದರೆ ಆದರೂ ಕೃಷಿ ವಿಜ್ಞಾನ ಕೇಂದ್ರದ ಅಥವಾ ನಿಮ್ಮಗೆ ಅತ್ತಿರವಾದ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಶಾಮರಾಜು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿರಂತರವಾಗಿ ಕೃಷಿಗೆ ಸಂಬಂಧಿಸಿದ ತರಬೇತಿಗಳು ನಡೆಯುತ್ತಾ ಇರುತ್ತದೆ, ಅದರಲ್ಲಿ ಈ ಅಡಿಕೆ ತರಬೇತಿ ಕಾರ್ಯಕ್ರಮ ವಿಶೇಷ ಮತ್ತು ಇದೇ ಮೊದಲ ಬಾರಿ ಅಡಿಕೆಗೆ ಸಂಬಂಧಿಸಿದ ತರಬೇತಿಯನ್ನು ಮಾಡಲಾಗುತ್ತಿದೆ, ಬಂದಿರುವ ಎಲ್ಲ ರೈತರು ಈ ತರಬೇತಿಯ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಅಡಿಕೆ ಸಂಶೋಧನ ಕೇಂದ್ರ, ಕೆಳದಿ ಶಿವಪ್ಪನಾಯಕ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದÜ ಡಾ.ಎಚ್‌.ಪಿ. ಸುದೀಪ್‌ ಅವರು ರೈತರಿಗೆ ಅಡಿಕೆ ಬೆಳೆಯ ಇತಿಹಾಸ, ಅದನ್ನು ಬೆಳೆಯುತ್ತಿರುವ ಪ್ರದೇಶ ಮತ್ತು ಉತ್ಪಾದನೆ, ಅಡಿಕೆಯ ಉಪಯೋಗ, ಅಡಿಕೆ ಬೆಳೆಯ ಮುಖ್ಯ ತಳಿಗಳು ಮತ್ತು ಮೈಸೂರು ಜಿಲ್ಲೆಗೆ ಸೂಕ್ತವಾದ ಅಡಿಕೆ ತಳಿಗಳ ಬಗ್ಗೆ ಮುಂತಾದ ಬಗ್ಗೆ ಸಲಹೆ ಸೂಚನೆ ನೀಡಿದರು.

ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ವೆಂಕಟೇಶ್‌ ಆರ್ಥಿಕ ಸಾಕ್ಷರತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಅತಿಥಿಗಳು ಕಾರ್ಯಕ್ರಮವನ್ನು ಅಡಿಕೆ ಸಸಿಗಳಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಜಿ.ಎಂ. ವಿನಯ್‌ ಕಾರ್ಯಕ್ರಮದ ಪರಿಚಯ ಮತ್ತು ಉದ್ದೇಶವನ್ನು ನೆರೆದಂತಹ ರೈತರಿಗೆ ತಿಳಿಸಿಕೊಟ್ಟರು.

ಡಾ.ವೈ.ಪಿ. ಪ್ರಸಾದ್‌ ನಿರೂಪಿಸಿದರು. ಡಾ.ಜಿ.ಎಂ. ವಿನಯ್‌ ಸ್ವಾಗತಿಸಿದರು. ರಾಜಣ್ಣ ವಂದಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಗಂಗಪ್ಪ ಹಿಪ್ಪರಿಗಿ ಹಾಗೂ ಇತರ ಸಿಬ್ಬಂದಿ ವರ್ಗದವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸುಮಾರು 75ಕ್ಕೂ ಹೆಚ್ಚು ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

Latest Videos
Follow Us:
Download App:
  • android
  • ios