Bidar: ಹಳಿ ಮೇಲೆ ನಿಂತ ಲಾರಿಗೆ ರೈಲು ಡಿಕ್ಕಿ: ತಪ್ಪಿದ ಭಾರಿ ಅನಾಹುತ

ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ದೇಶ್ವರ ರೈಲ್ವೆ ಕ್ರಾಸಿಂಗ್ ಬಳಿ ಲಾರಿ ಬ್ರೇಕ್ ಫೇಲ್ ಆಗಿ ಹಳಿಯ ಮೇಲೆ ಬಂದು ನಿಂತಿದೆ. ಹಳಿಯ ಮೇಲೆ ನಿಂತ ಲಾರಿಗೆ ರೈಲು ಗುದ್ದಿದ ಪರಿಣಾಮ ಲಾರಿಯ ಹಿಂಭಾಗ ನಜ್ಜು ಗುಜ್ಜಾಗಿದೆ. 

train dash to lorry in bidar gvd

ಬೀದರ್ (ಜು.07): ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ದೇಶ್ವರ ರೈಲ್ವೆ ಕ್ರಾಸಿಂಗ್ ಬಳಿ ಲಾರಿ ಬ್ರೇಕ್ ಫೇಲ್ ಆಗಿ ಹಳಿಯ ಮೇಲೆ ಬಂದು ನಿಂತಿದೆ. ಹಳಿಯ ಮೇಲೆ ನಿಂತ ಲಾರಿಗೆ ರೈಲು ಗುದ್ದಿದ ಪರಿಣಾಮ ಲಾರಿಯ ಹಿಂಭಾಗ ನಜ್ಜು ಗುಜ್ಜಾಗಿದೆ. ಲಾರಿ ಡ್ರೈವರ್​ನ ಬೇಜವಾಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ರೈಲು ಬರುತ್ತಿದೆ ಎಂದು ರೈಲ್ವೆ ಗೇಟ್​ ಸಿಬ್ಬಂದಿ ಗೇಟ್ ಹಾಕಿದ್ದಾರೆ. ಲಾರಿ ಬ್ರೇಕ್ ಫೇಲ್ ಆದ ಪರಿಣಾಮ ಗೇಟ್ ಲಾಕ್ ಮಾಡಿದರೂ ಮೊದಲನೆಯ ಗೇಟ್ ಮುರಿದು ಲಾರಿ ಒಳಗೆ ನುಗ್ಗಿದೆ. 

ರೈಲು ಗೇಟ್​ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ರೈಲಿಗೆ ಕೆಂಪು ಬಟ್ಟೆಯನ್ನು ತೋರಿಸಿದ್ದಾರೆ. ಸದ್ಯ ಗೇಟ್ ಕೀಪರ್ ರೆಡ್ ನಿಶಾನೆ  ತೋರಿಸಿದಕ್ಕೆ ರೈಲು ಬ್ರೇಕ್ ಹಾಕಿದ  ಚಾಲಕ ದೂರದಿಂದಲೇ ಲಾರಿಯನ್ನು ಗಮನಿಸಿ ರೈಲಿಗೆ ನಿಧಾನಗತಿಯಲ್ಲಿ ಬ್ರೇಕ್ ಹಾಕಿದ್ದಾನೆ. ಹಾಗಿದ್ದರೂ ರೈಲು ನಿಧಾನವಾಗಿ ಲಾರಿಗೆ ಗುದ್ದಿಕೊಂಡು ಹೋಗಿದ್ದು, ಭಾರಿ ದುರಂತ ತಪ್ಪಿದೆ. ಇನ್ನು ರೈಲು ಹಳಿ ಮೇಲೆ ಕೆಟ್ಟು ನಿಂತ ಲಾರಿಗೆ ರೈಲು ಡಿಕ್ಕಿ ಹಿನ್ನೆಲೆ ಕ್ಷಣಾರ್ಧದಲ್ಲಿ ಲಾರಿ ಪುಡಿಯಾಗಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ

ರೈಲು ಡಿಕ್ಕಿ; ಕಾರ್ಮಿಕ ಸಾವು: ವೇಗವಾಗಿ ಚಲಿಸುತ್ತಿದ್ದ ದಾದರ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಘಟನೆ ಭಾನುವಾರ ಬೆಳಗಾವಿಯ ಸಮರ್ಥ ನಗರದ ಹತ್ತಿರ ನಡೆದಿದೆ. ಇಲ್ಲಿನ ಗಾಂಧಿನಗರ ಗೋಕುಲಗಲ್ಲಿಯ ಹಸನ್‌ ರಜಾಕ್‌ ಶೇಖ್‌ (29) ಮೃತ ವ್ಯಕ್ತಿ. ಪ್ರತಿನಿತ್ಯದಂತೆ ಬೆಳಿಗ್ಗೆ 9.15ರ ಸುಮಾರಿಗೆ ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ರೈಲು ಹಳಿ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದ. ಜೋಡು ರೈಲುಹಳಿ ಇರುವುದರಿಂದ ವೇಗವಾಗಿ ಬರುತ್ತಿದ್ದ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಪುದುಚೇರಿಗೆ ಹೋಗುತ್ತಿದ್ದ ದಾದರ್ ಎಕ್ಸ್‌ಪ್ರೆಸ್‌ ರೈಲು ಯಾವ ಹಳಿ ಮೇಲೆ ಬರುತ್ತಿದೆ ಎಂಬುವುದನ್ನು ಅರಿತುಕೊಳ್ಳಲಾಗಲಿಲ್ಲ. 

ಕಂದಕಕ್ಕೆ ಉರುಳಿದ ಬಸ್ 9 ಶಾಲಾ ಮಕ್ಕಳು ಸೇರಿ 16 ಸಾವು!

ಸಮೀಪ ಬಂದ ನಂತರ ರೈಲುಹಳಿಯಿಂದ ಹೊರಗೆ ಹೋದರೆ ಆಯಿತು ಎಂದುಕೊಂಡಿದ್ದ ವ್ಯಕ್ತಿಗೆ ನೋಡು ನೋಡುತ್ತಿದ್ದ ಬಂದ ರೈಲು ಡಿಕ್ಕಿಹೊಡೆದಿದೆ. ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ ಮನೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿಹೋಗಿದ್ದ, ಈ ವೇಳೆ ದುರ್ಘಟನೆ ನಡೆದಿದೆ. ಮೃತ ಹಸನ್‌ಗೆ ಎರಡು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ರೆಲ್ವೆ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಬೆಳಗಾವಿ ರೆಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios