ಬೆಂಗಳೂರು (ನ.05):  ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸಂಚಾರಿ ಪೊಲೀಸರ ಭಾರೀ ದಂಡ ವಿಧಿಸುತ್ತಿದ್ದಾರೆ. ಇದೀಗ ಅನೇಕ ಭಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೋರ್ವ ಸಿಕ್ಕಿ ಬಿದ್ದಿದ್ದು ಆತನಿಗೆ ಭರ್ಜರಿ ದಂಡ ಹಾಕಲಾಗಿದೆ.

61 ಬಾರಿ ನಿಯಮ ಉಲ್ಲಂಘಿಸಿದ್ದ ಬಿಎಸ್‌ಎನ್‌ಎಲ್‌ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನಕ್ಕೆ ಕೆ.ಆರ್‌.ಪುರ ಸಂಚಾರ ಠಾಣೆ ಎಎಸ್‌ಐ ರಾಮನಾಯಕ್‌ 32 ಸಾವಿರ ದಂಡ ವಿಧಿಸಿದ್ದಾರೆ.

 

 ಕೆಎ-03-ಜೆಜೆಡ್-3801 ದ್ವಿ-ಚಕ್ರ ವಾಹನದ ಮಾಲೀಕರಿಂದ ರು.32,000 ದಂಡವನ್ನು ಕಟ್ಟಿಸಲಾಗಿದೆ. ಅವರನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ