Asianet Suvarna News Asianet Suvarna News

ಆನೇಕಲ್‌ನಲ್ಲಿಯೂ ಶೀಘ್ರ ಸಂಚಾರಿ ಪೊಲೀಸ್‌ ಠಾಣೆ ಆರಂಭ: ಎಸ್‌ಪಿ ಮಲ್ಲಿಕಾರ್ಜುನ್‌ ಮಾಹಿತಿ

ವಾಹನ ದಟ್ಟಣೆ ಮತ್ತು ರಸ್ತೆ ಸುರಕ್ಷತೆಗಾಗಿಯೇ ಶೀಘ್ರದಲ್ಲೇ ಆನೇಕಲ್ ಉಪವಿಭಾಗದಲ್ಲಿ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ ಅಂದರೆ (ಸಂಚಾರಿ ಪೊಲೀಸ್‌ ಠಾಣೆ) ಸ್ಥಾಪನೆಯಾಗಲಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

Traffic police station will be started soon in Anekal SP Mallikarjun information sat
Author
First Published Jan 28, 2023, 11:22 PM IST

ವರದಿ : ಟಿ.ಮಂಜುನಾಥ ಹೆಬ್ಬಗೋಡಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಆನೇಕಲ್ (ಜ.28): ಬೆಂಗಳೂರು ಹೊರವಲಯದ ನಗರಗಳು ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿರುವುದರಿಂದ ವಾಹನ ದಟ್ಟಣೆ ಸಹಜವಾಗಿಯೇ ಹೆಚ್ಚುತ್ತಿದೆ. ಆದ್ದರಿಂದ ವಾಹನ ದಟ್ಟಣೆ ಮತ್ತು ರಸ್ತೆ ಸುರಕ್ಷತೆಗಾಗಿಯೇ ಶೀಘ್ರದಲ್ಲೇ ಆನೇಕಲ್ ಉಪವಿಭಾಗದಲ್ಲಿ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ ಅಂದರೆ (ಸಂಚಾರಿ ಪೊಲೀಸ್‌ ಠಾಣೆ) ಸ್ಥಾಪನೆಯಾಗಲಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಬೆಂಗಳೂರು ಹೊರವಲಯ ಹೊಸೂರು ರಸ್ತೆಯ ಎಸ್‌ಎಫ್‌ಎಸ್‌ ಕಾಲೇಜಿನಲ್ಲಿ ಹೆಬ್ಬಗೋಡಿ ಠಾಣೆ ವತಿಯಿಂದ ಅಯೋಜಿಸಲಾಗಿದ್ದ 34ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದರು. ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸುವಂತೆ ಕರೆ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಬಾಲದಿಂಡಿ ಅವರು ರಸ್ತೆಯ ಸುರಕ್ಷತೆ ಕಾಪಾಡಲು, ನಿಯಮಗಳನ್ನು ಪಾಲಿಸಲು ಹಾಗೂ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಆನೇಕಲ್ ಗೆ ಶೀಘ್ರದಲ್ಲೇ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಸಲಾಗುತ್ತದೆ. ಈ ಬಗ್ಗೆ ಸರ್ಕಾರದಿಂದ ಒಪ್ಪಿಗೆಯೂ ದೊರೆತಿದ್ದು, ಸಂಚಾರಿ ಠಾಣೆ ನಿರ್ಮಾಣದ ನಂತರ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂಬ ಭರವಸೆಯಿದೆ. ಜೊತೆಗೆ, ಕೆಲವು ಜಂಕ್ಷನ್‌ಗಳಲ್ಲಿ ಉಂಟಾಗುವ ಟ್ರಾಫಿಕ್‌ ಕೂಡ ತಗ್ಗಲಿದೆ ಎಂದು ಭರವಸೆ ನೀಡಿದರು. 

ನಟ ತಾರಕ್ ರತ್ನ ಆರೋಗ್ಯ ಸ್ಥಿತಿ ಗಂಭೀರ- ಸ್ಟಂಟ್‌ ಅಳವಡಿಸಿದರೂ ನಿಲ್ಲದ ರಕ್ತಸ್ರಾವ: ಚಂದ್ರಬಾಬು ನಾಯ್ಡು ಭೇಟಿ

ಸಂಚಾರಿ ನಿಯಮ ಪಾಲಿಸದೇ ಅಪಘಾತ: ಈ ಕಾರ್ಯಕ್ರಮದಲ್ಲಿ ಸೆಂಟ್ ಪ್ರಾನ್ಸಿಸ್ ಕಾಲೇಜಿನ ವಿದ್ಯಾರ್ಥಿಗಳು, NCC ಕೆಡಿಟ್ ಗಳು, ಅಡಿಶನಲ್ SP ಪುರುಷೋತ್ತಮ, DYSP ಲಕ್ಷ್ಮೀನಾರಾಯಣ್ ಮತ್ತು ಎಲ್ಲಾ ಠಾಣೆಗಳ ಇನ್ಸ್‌ಪೆಕ್ಟರ್ ಗಳು ಭಾಗವಹಿಸಿದ್ದರು. ಬೆಂಗಳೂರು ದಿನಗಳೆದಂತೆ ತೀವ್ರ ವಾಹನ ದಟ್ಟಣೆಯಿಂದ ಟ್ರಾಫಿಕ್‌ ಸಮಸ್ಯೆ ಎದುರಿಸುತ್ತಿದೆ. ಜೊತೇಗೆ ಸಂಚಾರಿ ನಿಯಮಗಳನ್ನ ಪಾಲಿಸದೇ ಹೆಚ್ಚು ಅಪಘಾತಗಳಾಗುತ್ತಿವೆ. ಆದ್ದರಿಂದ ಎಲ್ಲೆಡೆ ರಸ್ತೆ ಸುರಕ್ಷತಾ ಸಪ್ತಾಹಗಳನ್ನ ಆಚರಿಸಿ ವಾಹನ ಸವಾರರಿಗೆ ಮತ್ತು ‌ವಾಹನಗಳ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದು SFS ಕಾಲೇಜಿನಲ್ಲಿ ಅಯೋಜನೆಗೊಂಡು ವಿದ್ಯಾರ್ಥಿಗಳು ರೋಡ್ ಶೋ ಮೂಲಕ ಜನರಲ್ಲಿ ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು. 

ರಸ್ತೆ ಸುರಕ್ಷತೆ ಪ್ರತಿಜ್ಞಾ ವಿಧಿ ಬೋಧನೆ: ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಅಡಿಶನಲ್ SP ಎಂ.ಎಲ್. ಪುರುಷೋತ್ತಮ ಅವರು ಮಕ್ಕಳು ಮತ್ತು ಕಾಲೇಜು ಸಿಬ್ಬಂದಿ ಸೇರಿ ಅಲ್ಲಿ ನೆರೆದಿದ್ದವರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು. ಎಸ್‌ಎಫ್‌ಎಸ್‌ ಕಾಲೇಜು ವಿದ್ಯಾರ್ಥಿಗಳು ಆನೇಕಲ್‌ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಸ್ತೆ ನಿಯಮಗಳ ಪಾಲನೆಯ ಕುರಿತ ನಾಮಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಕೆಲವು ರಸ್ತೆ ನಿಯಮ ಪಾಲನೆಯ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. 

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಂಟ್ ಪ್ರಾನ್ಸಿಸ್ ಕಾಲೇಜಿನ‌ ಪ್ರಾಂಶುಪಾಲ ರಾಯ್ ಮಾತಾನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸ್ತೆ ಸುರಕ್ಷತಾ ಸಪ್ತಾಹ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು   NCC ಕೆಡಿಟ್ ಗಳೊಂದಿಗೆ ಜರಗಿತು.

Follow Us:
Download App:
  • android
  • ios