ರಾಯಚೂರಿನಿಂದ ಬಾಗಲಕೋಟೆಗೆ ವಾಪಸ್ಸಾಗುತ್ತಿದ್ದ ಬಸ್‌| ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಬಳಿ ನಡೆದ ಘಟನೆ| ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಲಿಂಗಸುಗೂರು(ಮಾ.10): ರಾಯಚೂರು-ಬೆಳಗಾವಿ ರಸ್ತೆಯ ತಾಲೂಕಿನ ಸರ್ಜಾಪುರ ಬಳಿ ಸಾರಿಗೆ ಬಸ್ಸಿಗೆ ಟ್ರ್ಯಾಕ್ಟರ್‌ ಡಿಕ್ಕಿಯಾಗಿ ಟ್ರ್ಯಾಕ್ಟರ್‌ ಚಾಲಕ ಗಾಯಗೊಂಡಿದ್ದು, ಭಾರಿ ಅನಾಹುತ ತಪ್ಪಿದೆ. 

ರಾಯಚೂರಿನಿಂದ ಬಾಗಲಕೋಟೆಗೆ ವಾಪಸ್ಸಾಗುತ್ತಿದ ಬಸ್ಸಿಗೆ ಸರ್ಜಾಪುರ ಬಳಿ ಟ್ರ್ಯಾಕ್ಟರ್‌ ಚಾಲಕನ ನಿರ್ಲಕ್ಷತನದಿಂದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಮುಂಭಾಗ ನಜ್ಜುನುಜ್ಜಾಗಿದೆ. 

ಅಪಘಾತ ನಾಟಕವಾಡಿ ಚಾಲಕರ ಪರ್ಸ್‌ ಎಗರಿಸುತ್ತಿದ್ದ ಖದೀಮ

ಟ್ರ್ಯಾಕ್ಟರ್‌ ಪಲ್ಟಿಯಾಗಿ ಎಂಜಿನ್‌ ಜಖಂಗೊಂಡಿದ್ದು ಎಂಜಿನ್‌ ಮೇಲೆ ಬಸ್ಸು ಏರಿ ನಿಂತಿರುವ ದೃಶ್ಯ ಭವಾನಕವಾಗಿತ್ತು. ಆದರೂ ಬಸ್ಸಿನಲ್ಲಿರುವ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್‌ ಚಾಲಕ ಸುರೇಶ ವೀರಪ್ಪ(38) ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.