Asianet Suvarna News Asianet Suvarna News

'ಸಚಿವ ಮಾಧುಸ್ವಾಮಿಯವರೇನು ಪರಮಪಾವನರಲ್ಲ'

ಸಚಿವರಿಂದ ದ್ವೇಷದ ರಾಜಕಾರಣ: ಆರೋಪ| ಮಾಧುಸ್ವಾಮಿ ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಕರೋಡಪತಿ ವರ್ತಕರಿಗೆ ಜಮೀನು ಮುಂಜೂರು ಮಾಡಿರುವ ಜ್ವಲಂತ ಸಾಕ್ಷಿಗಳಿವೆ, ಅದನ್ನೆಲ್ಲ ಮರೆತು ತಾನು ಮಾತ್ರವೆ ಸತ್ಯಸಂಧರೆಂದು ತೋರಿಸಲು ಹೊರಟಿರುವುದು ಹೇಯಕೃತ್ಯವಾಗಿದೆ|

TP Former Vice President Aladakatte Timmayya Talks Over Minister J C Madhuswamy
Author
Bengaluru, First Published Jun 29, 2020, 12:55 PM IST

ಚಿಕ್ಕನಾಯಕನಹಳ್ಳಿ(ಜೂ.29): ಕಳೆದ ಸಾಲಿನಲ್ಲಿ ಹಿಂದಿನ ಶಾಸಕರು ಪರಿಶೀಲಿಸಿ ಅಂತಿಮಗೊಳಿಸಿರುವ ಬಗರ್‌ ಹುಕುಂ ಅರ್ಜಿಗಳನ್ನು ಮರುಪರಿಶೀಲಿಸುವ ಸಚಿವ ಕಾರ್ಯ ದ್ವೇಷ ರಾಜಕಾರಣದ ಪರಮಾವಧಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಆರೋಪಿಸಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಅವರು ಸಚಿವ ಜೆ.ಸಿ.ಮಾಧುಸ್ವಾಮಿಯವರು ಕ್ಷುಲ್ಲಕ ಕಾರ್ಯಕ್ಕೆ ಕೈಹಾಕಿರುವ ಬಗ್ಗೆ ಖಂಡಿಸಿ ಮಾತನಾಡುತ್ತಿದ್ದರು. ಮಾಧುಸ್ವಾಮಿಯವರೇನು ಪರಮಪಾವನರಲ್ಲ. ಈ ಹಿಂದೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಕರೋಡಪತಿ ವರ್ತಕರಿಗೆ ಜಮೀನು ಮುಂಜೂರು ಮಾಡಿರುವ ಜ್ವಲಂತ ಸಾಕ್ಷಿಗಳಿವೆ. ಅದನ್ನೆಲ್ಲ ಮರೆತು ತಾನು ಮಾತ್ರವೆ ಸತ್ಯಸಂಧರೆಂದು ತೋರಿಸಲು ಹೊರಟಿರುವುದು ಹೇಯಕೃತ್ಯವಾಗಿದೆ.

ಶಿರಾ: ಕಾರು ಉರುಳಿ ಬಿದ್ದು ಮೂವರ ಯುವಕರ ದುರ್ಮರಣ

ಈ ಹಿಂದೆ ಶಾಸನ ಬದ್ಧವಾಗಿ ಶಾಸಕರಾಗಿದ್ದ ಸಿ.ಬಿ.ಸುರೇಶ್‌ ಬಾಬುರವರು ನಿಗದಿತವಾಗಿ ಕಾಲಕಾಲಕೆ ್ಕ ಕಾನೂನಾತ್ಮಕವಾಗಿ ಬಗರ್‌ ಹುಕುಂ ಸಮಿತಿ ಸಭೆ ಕರೆದು ದಾಖಲಾತಿ ಪರಿಶೀಲಿಸಿ ಮಂಜೂರು ಮಾಡಿದ್ದಾರೆ. ಆದರೆ, ಈಗಿನ ಸಚಿವರು ಅದನ್ನು ಕಾನೂನು ಬಾಹಿರವೆಂದು ತನಿಖೆಗೊಳಪಡಿಸಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಸುಮಾರು 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರು ತಮ್ಮ ಜಮೀನಿಗೆ ಮಂಜೂರು ಪತ್ರ ಸಿಕ್ಕ ಖುಷಿಯಲ್ಲಿರುವಾಗಲೇ ಸಚಿವರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ, ರೈತರ ಜಮೀನುಗಳನ್ನು ಖಾತೆಯಾಗದಂತೆ ತಡೆಹಿಡಿದಿದ್ದಾರೆ ಎಂದರು.

ಸಚಿವರು ತಮಗೆ ಅಧಿಕಾರವಿದೆಯೆಂದು ಈ ರೀತಿ ದರ್ಬಾರು ಮಾಡಲು ಹೊರಟಿದ್ದಾರೆ. ಸಿಕ್ಕಿರುವ ಅಧಿಕಾರವನ್ನು ಅವರು ಕ್ಷೇತ್ರದ ಅಭಿವೃದ್ಧಿಗೆ ಉಪಯೋಗಿಸಲಿ. ಅದನ್ನು ಬಿಟ್ಟು ಈ ರೀತಿ ಬಡವರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ಬಿಡುವುದು ಅವರ ರಾಜಕೀಯ ಭವಿಷ್ಯಕ್ಕೆ ಆರೋಗ್ಯಕರ ಎಂದರು.

ಆಲದಕಟ್ಟೆ ತಿಮ್ಮಣ್ಣನವರ ಆರೋಪದ ವಿರುದ್ದ ಸಚಿವರ ಕಾರ್ಯವೈಖರಿಯನ್ನು ಸಮರ್ಥಿಸಲು ಸಭೆಗೆ ಉತ್ತರ ನೀಡಿದ ತಹಸೀಲ್ದಾರ್‌ ಬಿ.ತೇಜಸ್ವಿನಿ, ಹಿಂದಿನ ಸಭೆಯ ನಡಾವಳಿಯನ್ನು ಪರಿಶೀಲಿಸುವಂತೆ ಸರ್ಕಾರಿ ಆದೇಶವಿರುವುದರಿಂದ ಸಚಿವರು ತನಿಖೆಗೊಳಪಡಿಸಿದ್ದಾರೆ. ಆದ್ದರಿಂದ ಇದರಲ್ಲಿ ಸಚಿವರ ವೈಯ್ಯಕ್ತಿಕ ಹಿತಾಸಕ್ತಿಯೇನಿಲ್ಲ ಎಂದು ಸಮಜಾಯಿಸಿ ನೀಡಿದರು. ಆಗ ತಿಮ್ಮಣ್ಣ, ಇದು ಸಚಿವ ಸಂಪುಟ ಸಭೆಯ ತೀರ್ಮಾನವೋ ಅಥವಾ ಇಲಾಖಾ ಆದೇಶವೋ ಸ್ಪಷ್ಟನೆಯಿಲ್ಲದ ಕಾರಣ ಆದೇಶದ ಪ್ರತಿ ನೀಡಿ ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಈವರಗೆ 881 ಕೋವಿಡ್‌ ಪರೀಕ್ಷೆಯಾಗಿದ್ದು, ಮೂವರಲ್ಲಿ ಮಾತ್ರ ಪಾಸಿಟಿವ್‌ ಬಂದಿದೆ. 101 ಮಂದಿ ಹೋಂ ಕ್ವಾರಂಟೈನ್‌ಗೊಳಪಟ್ಟಿದ್ದಾರೆ.ಪ್ರತಿದಿನ 300 ಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀನಿವಾಸಚಾರ್‌ ಸಭೆಗೆ ಮಾಹಿತಿ ನೀಡಿದರು.

ಸದಸ್ಯೆ ಶೈಲಾ ಶಶಿಧರ್‌ ಮಾತನಾಡಿ, ಕೋವಿಡ್‌ ಪರೀಕ್ಷೆಗೆ ಹೆದರಿ ರೋಗಿಗಳು, ಇತರೆ ಖಾಯಿಲೆಗಳಿಗೂ ಸಹ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ.ಮೆಡಿಕಲ್‌ ಶಾಪ್‌ಗಳಲ್ಲಿ ಮಾತ್ರೆ-ಔಷಧಿ ತೆಗೆದುಕೊಂಡು ಮನೆಯ್ಲಲೇ ಇರುತ್ತಾರೆ. ಇದರಿಂದ ಕೊರೋನಾ ಪ್ತತೆಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ವೈದ್ಯರ ಚೀಟಿ ಇದ್ದರೆ ಮಾತ್ರ ಮಾತ್ರೆ-ಔಷಧಿ ನೀಡಬೇಕೆಂಬ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಇದರ ಜೊತೆಗೆ ಕೋವಿಡ್‌ ಪರೀಕ್ಷೆ ಮಾಡುವ ಆರೋಗ್ಯ ಸಿಬ್ಬಂದಿ ಜನಪ್ರತಿನಿಧಿಗಳ ಸಂಪರ್ಕದಲ್ಲಿರಬೇಕೆಂದು ತಾಕೀತು ಮಾಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಕಾರ್ಯವಾಗುತ್ತಿಲ್ಲ,ಆಸ್ಪತ್ರೆಗೆ ಬಂದ ಗರ್ಭಿಣಿಯನ್ನು ದಿನಗಟ್ಟಲೆ ಕಾಯಿಸಿ ಕೊನೆಗಳಿಗೆಯಲ್ಲಿ, ಇಲ್ಲಿ ಆಗುವುದಿಲ್ಲ, ತಿಪಟೂರು ಅಥವಾ ತುಮಕೂರಿಗೆ ಹೋಗಿಸಾಗಾಕುತ್ತಾರೆ. ಇದರಿಂದ ಬಡವರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ತಿಮ್ಮಣ್ಣ ಆರೋಪಿಸಿದರು.

2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕಿನಲ್ಲಿ 2524 ಮಂದಿಗೆ 2353 ಮಂದಿ ಹಾಜಾರಾಗಿದ್ದಾರೆ. 171 ಮಂದಿ ಗೈರುಹಾಜರಿಯಿದ್ದು, ಇವರಲ್ಲಿ 154 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದ ಪ್ರವೇಶ ಪತ್ರ ಬಂದಿಲ್ಲ.17 ವಿದ್ಯಾರ್ಥಿಗಳು ಮಾತ್ರ ಅನಾರೋಗ್ಯದ ಕಾರಣ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಮಾಹಿತಿ ನೀಡಿದರು.

ಗ್ರಾಮದಲ್ಲಿ ಪೂರಾ ಪರಿಶಿಷ್ಟಜನಾಂಗದ ಜನರೇ ಇದ್ದರು ಸಹ ಬಂದ್ರೆಹಳ್ಳಿ ತಾಂಡ್ಯದ ಅಂಗನವಾಡಿ ಕೇಂದ್ರದ ಶಿಕ್ಷಕಿ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದಾರೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್‌ ನುಡಿದರು. ಇಲಾಖಾಧಿಕಾರಿ ಇದನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಯತೀಶ್‌, ಸ್ಥಾಯಿಸಮಿತಿ ಅಧ್ಯಕ್ಷೆ ಗಂಗಮ್ಮ, ಇಒ ಅತಿಕ್‌ಪಾಷಾ ಮುಂತಾದವರಿದ್ದರು.
 

Follow Us:
Download App:
  • android
  • ios