Asianet Suvarna News Asianet Suvarna News

Tumakur : ಫ್ಲೆಕ್ಸ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ಪಪಂ ನಿರ್ಣಯ

  ಕೊರಟಗೆರೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾವ್ಯಶ್ರೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಫ್ಲೆಕ್ಸ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಂಡು, ಪಟ್ಟಣದಲ್ಲಿನ ಹಲವು ವರ್ಷಗಳ ನ್ಯೂನತೆಗಳನ್ನು ಸರಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು.

Town Panchayat Decided to put up for removal of flexes snr
Author
First Published Nov 13, 2022, 4:55 AM IST

 ಕೊರಟಗೆರೆ (ನ.13):  ಕೊರಟಗೆರೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾವ್ಯಶ್ರೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಫ್ಲೆಕ್ಸ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಂಡು, ಪಟ್ಟಣದಲ್ಲಿನ ಹಲವು ವರ್ಷಗಳ ನ್ಯೂನತೆಗಳನ್ನು ಸರಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸದಸ್ಯ ನಂದೀಶ್‌ ಮಾತನಾಡಿ, ಪಟ್ಟಣದಲ್ಲಿ (Town) ಇತ್ತೀಚೆಗೆ ಅನಗತ್ಯ ಫ್ಲೆಕ್ಸ್‌ಗಳು ತಿಂಗಳು ಗಟ್ಟಲೆ ಇದ್ದು, ಇದರಿಂದ ಸಾರ್ವಜನಿಕರಿಗೆ ಗೊಂದಲ ಕಿರಿಕಿರಿಯಾಗುತ್ತಿದೆ ಎಂದು ಪ್ರಸ್ತಾಪಿಸಿದಾಗ, ಇನ್ನು ಮುಂದೆ ಪಟ್ಟಣದಲ್ಲಿ ಫ್ಲೆಕ್ಸ್‌, (Flex)  ಬ್ಯಾನರ್‌, ಬಂಟಿಗ್‌ ಕಟ್ಟುವರು ಅವರ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆ ಕಟ್ಟಿಎರಡು ದಿನ ನಂತರ ತೆರವುಗೊಳಿಸಬೇಕು, ಅದಕ್ಕೂ ಮುಂಚೆ ಪಟ್ಟಣ ಪಂಚಾಯತಿಗೆ ಅಡಿಗೆ 2 ರು. ನಂತೆ ಶುಲ್ಕ ಪಾತಿಸಿಬೇಕು, ಈ ನಿಯಮ ಮೀರಿದರೆ ಅವುಗಳನ್ನು ಪಪಂನಿಂದ ತೆರವುಗೊಳಿಸಲಾಗುತ್ತದೆ ಎಂದರು.

ಸದಸ್ಯ ಪುಟ್ಟನರಸಯ್ಯ ಮಾತನಾಡಿ, ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಅನಧಿಕೃತ ನಲ್ಲಿ ಸಂಪರ್ಕಗಳಿದ್ದು ಅವುಗಳನ್ನು ಬಂದ್‌ ಮಾಡಬೇಕು, ಇಲ್ಲವೇ ಅಧಿಕೃತಗೊಳಿಸಿ ಪಟ್ಟಣ ಪಂಚಾಯತಿಗೆ ಆದಾಯ ಬರುವಂತೆ ಮಾಡಬೇಕು. ಹಲವಾರು ಮನೆಗಳ ಮುಂದೆ ಅನಗತ್ಯವಾಗಿ ನಲ್ಲಿಗಳಲ್ಲಿ ನೀರು ಪೋಲಾಗಿ ಚರಂಡಿಗಳಲ್ಲಿ ಹರಿಯುತ್ತಿದೆ. ಮುಖ್ಯ ಪೈಪ್‌ಲೈನ್‌ನ್ನು ಡ್ಯಾಮೇಜ್‌ ಮಾಡುತ್ತಿದ್ದಾರೆ. ಆದರೂ ವಾಟರ್‌ಮ್ಯಾನ್‌ಗಳು ಇವುಗಳ ಬಗ್ಗೆ ಹಲವು ಬಾರಿ ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳದೆ ಇದ್ದು ಇನ್ನು ಮುಂದೆ ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಪಟ್ಟಣದಲ್ಲಿನ ಹಲವು ಬಡವರಿಗೆ ಹಳೆ ಮನೆ ರೀಪೇರಿಗೆ ಹಣ ಮಂಜೂರಿಗೆ ಸದಸ್ಯ ನಟರಾಜು ಆಗ್ರಹಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗಬೇಕಾಗಿರುವ ಪಟ್ಟಣ ಪಂಚಾಯತಿ ಆಶ್ರಯ ಯೋಜನೆ ಮನೆಗಳು, ಪಪಂ ಜಾಗದಲ್ಲಿ ನಿರ್ಮಾಣವಾಗಿರುವ ಹಲವು ಮನೆಗಳ ಖಾತೆಯ ಗೊಂದಲದ ಬಗ್ಗೆ, ಕೊಳಚೆ ಪ್ರದೇಶದ ಮನೆಗಳ ನಿರ್ಮಾಣದ ಲೋಪದೋಷಗಳನ್ನು ಕೂಡಲೇ ಮುಖ್ಯಾಧಿಕಾರಿಗಳು ಸರಿಪಡಿಸುವಂತೆ ಸದಸ್ಯಕೆ.ಆರ್‌. ಓಬಳ ರಾಜು ಪ್ರಸ್ತಾಪಿಸದರು.

ಹಿರಿಯ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ 6 ಕೋಟಿ ರು. ವಿಶೇಷ ಅನುದಾನವನ್ನು ಶಾಸಕರು ಮಂಜೂರು ಮಾಡಿಸಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ,

ಇದರಿಂದ ಜನರ ಮುಂದೆ ನಾವುಗಳು ತಲೆತಗ್ಗಿಸಬೇಕಿದೆ ಎಂದರು. ಸಭೆಯಲ್ಲಿ ಗೌರಿ ಬಿದನೂರು ಮುಖ್ಯರಸ್ತೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಮಧ್ಯೆ ರಸೆæ್ತಯ ಜಾಗದಲ್ಲಿ ನಿರ್ಮಾಣವಾಗಿರುವ ಮತ್ತು ನಿರ್ಮಾಣವಾಗುತ್ತಿರುವ ಅನಧಿಕೃತ ಮನೆಗಳ ತೆರವು

ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸಲಾಯಿತು.

ಅಧ್ಯಕ್ಷೆ ಕಾವ್ಯಶ್ರೀ ಮಾತನಾಡಿ, ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಆದರೆ ಅವುಗಳ ಉದ್ಘಾಟನೆ ಕಾರ್ಯ ಕ್ರಮಗಳು ಆಗಿಲ್ಲ, ಅದೇ ರೀತಿ ನ್ಯಾಯಾ ಲಯದಲ್ಲಿ ಇರುವ ಹಲವು ಪ್ರಕರಣಗಳನ್ನು ನ್ಯಾಯಾಲಯದಲ್ಲೇ ಹೋರಾಟ ಮಾಡಿ ಸರಿಪಡಿಸಿಕೊಳ್ಳಲಾಗುವುದು ಎಂದರು.

ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ, ನಾನು ಪಪಂಗೆ ಏಪ್ರಿಲ್‌ ತಿಂಗಳಿಂದ ಅಧಿಕಾರಿಯಾಗಿ ಬಂದ ಮೇಲೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿರುವುದಾಗಿ ಹಾಗೂ ಪಟ್ಟಣ ಪಂಚಾಯಿತಿ ನಿರ್ಣಯಗಳನ್ನು ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಜಾರಿಗೆ ತರುವುದಾಗಿ ತಿಳಿಸಿದರು.

ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ನಾಗರಾಜು, ಹೇಮಲತಾ, ಅನಿತಾ, ಹುಸ್ನಪರಿಯಾ, ರಂಗನಾಥ್‌, ಗೋವಿಂದರಾಜು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

 

 ಫ್ಲೆಕ್ಸ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ಪಪಂ ನಿರ್ಣಯ

ಪಪಂ ಸಾಮಾನ್ಯ ಸಭೆ - ಪ್ರತಿ ಅಡಿಗೆ 2 ರು. ಶುಲ್ಕ ಪಾವತಿಸಬೇಕು

ನಿಯಮ ಮೀರಿದರೆ ಪಪಂನಿಂದ ಫ್ಲೆಕ್ಸ್‌ ತೆರವು

ಕೊರಟಗೆರೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾವ್ಯಶ್ರೀ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ  

Follow Us:
Download App:
  • android
  • ios