ಕಾರವಾರ: ಉದ್ಧಟತನ ತೋರಿ ಅಲೆಗೆ ಸಿಲುಕಿದ ಪ್ರವಾಸಿಗರು

*   ಬೀಚ್‌ನಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ತಮಿಳುನಾಡಿನ ಮಹಿಳೆಯರು
*  ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಜೋರಾದ ಅಲೆಗಳ ಅಬ್ಬರ
*  ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದಾಗ, ಅಪಾಯಕಾರಿ ಜಾಗದಲ್ಲಿ ಇಳಿಯದಂತೆ ಸೂಚನೆ 

Tourists Hit by Sea Waves in Karwar  grg

ಕಾರವಾರ(ಜು.07):  ತಮಿಳುನಾಡಿನಿಂದ ಬಂದಿದ್ದ ಪ್ರವಾಸಿಗರ ಕುಟುಂಬ ಉದ್ಧಟತನ ತೋರಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ಘಟನೆ ಬುಧವಾರ ನಡೆದಿದೆ.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರ ಜೋರಾಗಿತ್ತು. ಸ್ಥಳದಲ್ಲಿದ್ದ ಲೈಫ್‌ಗಾರ್ಡ್‌ ಹಾಗೂ ಹೋಮ್‌ಗಾರ್ಡ್‌ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದರು. ಸೂಚನೆಯನ್ನು ಲೆಕ್ಕಿಸದೇ ತಮ್ಮ ಊರಿನಲ್ಲೂ ಸಮುದ್ರವಿದೆ. ನೋಡಿದ್ದೇವೆ ಎಂದು ಉದ್ಧಟತನದ ಮಾತನಾಡಿ, ಸಮುದ್ರಕ್ಕೆ ಐವರು ಮಹಿಳೆಯರು ಇಳಿದಿದ್ದರು.

ಮೋಜು-ಮಸ್ತಿಯಲ್ಲಿ ತೊಡಗಿದ್ದ ವೇಳೆ ರಭಸದಿಂದ ಅಲೆಯೊಂದು ಬಂದಿದೆ. ಪರಿಣಾಮ ಇಬ್ಬರು ಮಹಿಳೆಯರು ಅಲೆಯ ಹೊಡೆತಕ್ಕೆ ನೀರಲ್ಲಿ ಬಿದ್ದಿದ್ದಾರೆ. ಅವರ ಜತೆಗಿದ್ದವರು ಬಿದ್ದ ಮಹಿಳೆಯರನ್ನು ಹಿಡಿದುಕೊಂಡಿದ್ದಾರೆ. ಅದೃಷ್ಟವಶಾತ್‌ ಅಲೆಗಳು ಅವರನ್ನು ಎಳೆದುಕೊಂಡು ಹೋಗಿಲ್ಲ.

ಕಾರವಾರ: ಅರಗ ಹೆದ್ದಾರಿಯಲ್ಲಿ ಕೃತಕ ನೆರೆ, ಮನೆಗಳೊಳಗೆ ಕೆರೆ!

ಪೊಲೀಸ್‌ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಪಾಯ ಇರುವ ಕಡೆ ಫಲಕ ಅಳವಡಿಸಿದೆ. ಜತೆಗೆ ಕಡಲ ತೀರಗಳಲ್ಲಿ ಕೆಂಪು ಬಣ್ಣದ ಬಾವುಟಗಳನ್ನು ನೆಟ್ಟಿದೆ. ಇದರೊಂದಿಗೆ ಲೈಫ್‌ಗಾರ್ಡ್‌ ಹಾಗೂ ಹೋಮ್‌ಗಾರ್ಡ್‌ ಬಂದೋಬಸ್ತ್‌ಗೆ ನಿಯೋಜಿಸಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದಾಗ, ಅಪಾಯಕಾರಿ ಜಾಗದಲ್ಲಿ ಇಳಿಯದಂತೆ ಸೂಚಿಸಿದರೂ ಅವರ ಮಾತನ್ನು ಕೇಳದೇ ಪ್ರವಾಸಿಗರು ಉದ್ಧಟತನದಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದರೂ ಇಳಿಯುತ್ತಿದ್ದಾರೆ.

ನಡುಗಡ್ಡೆಗಳು ಇರುವುದಿಂದ ಕಾರವಾರದ ಟ್ಯಾಗೋರ್‌ ಕಡಲ ತೀರದಲ್ಲಿ ಅಲೆಗಳ ಅಬ್ಬರ ಉಳಿದ ಕಡೆ ಹೋಲಿಸಿದರೆ ಕಡಿಮೆಯೇ ಇರುತ್ತದೆ. ಆದರೆ ಅಂಕೋಲಾದ ನದಿಭಾಗ, ಹನಿ ಬೀಚ್‌, ಗೋಕರ್ಣ ಹಾಗೂ ಮುರುಡೇಶ್ವರದ ತೀರಗಳಲ್ಲಿ ಅಲೆಗಳ ಅಬ್ಬರ ಜೋರಾಗಿಯೇ ಇರುತ್ತದೆ. ರಭಸದಿಂದ ಅಲೆಗಳ ಎದ್ದಾಗ ಸ್ವಲ್ಪ ಆಯತಪ್ಪಿದ್ದರೂ ಕೊಚ್ಚಿಕೊಂಡು ಹೋಗುತ್ತಾರೆ.

ಕೆಲವು ದಿನದ ಹಿಂದೆ ಕುಮಟಾದಲ್ಲಿ ಅರಬ್ಬಿ ಸಮುದ್ರಕ್ಕೆ ಇಳಿದ ನಾಲ್ವರು ಮೃತಪಟ್ಟಿದ್ದರು. ಖಾಸಗಿ ರೆಸಾರ್ಟ್‌ ಮಾಲೀಕರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದ್ದರೂ ಅವರ ಮಾತನ್ನು ಕೇಳದೇ ತೀರಕ್ಕಿಳಿದು ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದರು.
 

Latest Videos
Follow Us:
Download App:
  • android
  • ios