ವಿದ್ಯಾರ್ಥಿಗಳ ಪ್ರವಾಸ- ಶಬರಿಮಲೆ ಯಾತ್ರೆ , ಉಡುಪಿ ಜಿಲ್ಲೆಯಾದ್ಯಂತ ಪ್ರವಾಸಿಗರ ದಂಡು
ಕರಾವಳಿ ಜಿಲ್ಲೆ, ಉಡುಪಿಗೆ ರಾಶಿ ರಾಶಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲೂ ಶಾಲಾ ಮಕ್ಕಳು ಪ್ರವಾಸಕ್ಕೆಂದು ಉಡುಪಿಯ ಕೃಷ್ಣ ಮಠ, ಮಲ್ಪೆ ಬೀಚ್ ಗೆ ಧಾವಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳ ಸುತ್ತಲೂ ನೂರಾರು ಬಸ್ಸುಗಳು ನಿಂತಿವೆ.
ಉಡುಪಿ (ಡಿ.17): ಕರಾವಳಿ ಜಿಲ್ಲೆ, ಉಡುಪಿಗೆ ರಾಶಿ ರಾಶಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲೂ ಶಾಲಾ ಮಕ್ಕಳು ಪ್ರವಾಸಕ್ಕೆಂದು ಉಡುಪಿಯ ಕೃಷ್ಣ ಮಠ, ಮಲ್ಪೆ ಬೀಚ್ ಗೆ ಧಾವಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳ ಸುತ್ತಲೂ ನೂರಾರು ಬಸ್ಸುಗಳು ನಿಂತಿವೆ. ಉಡುಪಿಯ ಕೃಷ್ಣಮಠದಲಂತೂ ಬೆಳಗ್ಗಿನಿಂದಲೇ ಸಾವಿರಾರು ವಿದ್ಯಾರ್ಥಿಗಳು ದೇವರ ದರ್ಶನಕ್ಕೆ ಕ್ಯೂ ನಿಂತಿದ್ದಾರೆ. ಕೃಷ್ಣಮಠದಲ್ಲಿ ದೇವರ ದರ್ಶನ ಮಾಡಿ ಊಟ ಮುಗಿಸಿ ಮಲ್ಪೆ ಬೀಚ್ ನತ್ತ ಹೋಗುತ್ತಿದ್ದಾರೆ. ಪ್ರತಿದಿನ ಮಧ್ಯಾಹ್ನ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ . ವೀಕೆಂಡ್ ಬಂದಿರುವ ಕಾರಣ ಭಕ್ತರ ಸಂಖ್ಯೆ 10 ಪಟ್ಟು ಹೆಚ್ಚಿದೆ .
ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಪ್ರವಾಸ ರದ್ದಾಗಿತ್ತು. ಕೋವಿಡ್ ಕಾರಣಕ್ಕೆ ಯಾವ ಶಾಲೆಗಳು ಕೂಡ ಪ್ರವಾಸ ಏರ್ಪಡಿಸಿರಲಿಲ್ಲ. ಆದರೆ ಈ ವರ್ಷ ನಿರಾತಂಕವಾಗಿ ವಿದ್ಯಾರ್ಥಿಗಳು ಪ್ರವಾಸ ಬರುತ್ತಿದ್ದಾರೆ. ಡಿಸೆಂಬರ್ ತಿಂಗಳ ಅಂತ್ಯ ಭಾಗದವರೆಗೂ ಪ್ರವಾಸಿಗರ ದಂಡು ಇದೇ ರೀತಿ ಉಡುಪಿ ಜಿಲ್ಲೆಗೆ ಬರುವ ಸಾಧ್ಯತೆ ಇದೆ. ಎಲ್ಲಿ ನೋಡಿದರೂ ಶಾಲಾ ಪ್ರವಾಸದ ಬಸ್ಸುಗಳೇ ಕಾಣಿಸುತ್ತವೆ. ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಪುಟ್ಟ ಪುಟ್ಟ ಮಕ್ಕಳು ಕಡುಬಿಸಿಲಲ್ಲಿ ನಡೆದಾಡುತ್ತಿದ್ದಾರೆ.
ಇನ್ನೊಂದೆಡೆ ಶಬರಿಮಲೆಗೆ ತೆರಳುತ್ತಿರುವ ವೃತದಾರಿಗಳು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವಾಲಯಗಳ ನಗರಿ ಉಡುಪಿಯಲ್ಲಂತೂ ಉಡುಪಿ ಕೃಷ್ಣಮಠ, ಕೊಲ್ಲೂರು, ಕುಂಭಾಶಿ ಹೇಗೆ ಅನೇಕ ದೇವಾಲಯಗಳಿಗೆ ಅಯ್ಯಪ್ಪ ವೃತ್ತದಾದಿಗಳು ಬರುತ್ತಿದ್ದಾರೆ. ಶಬರಿಮಲೆಗೆ ಹೋಗುವ ಮುನ್ನ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ದೇವಾಲಯಗಳಿಗೆ ಭೇಟಿ ಕೊಡುವ ಪರಿಪಾಠ ಇದೆ. ಹಾಗಾಗಿ ಲಕ್ಷಾಂತರ ಭಕ್ತರು ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳತ್ತ ಬರುತ್ತಿದ್ದಾರೆ. ಕೆಲವರು ಶಬರಿಮಲೆಯಿಂದ ವಾಪಾಸ್ ಆಗುವ ವೇಳೆ ದೇವಾಲಯಗಳಿಗೆ ಭೇಟಿಕೊಡುತ್ತಿದ್ದಾರೆ.
Travel Tips : ಭಾರತದಲ್ಲಿವೆ ಅಪಾಯಕಾರಿ ರಸ್ತೆಗಳು! ಜೀವ ಕೈಯ್ಯಲ್ಲಿಟ್ಕೊಂಡೇ ಟ್ರಾವೆಲ್ ಮಾಡ್ಬೇಕಿಲ್ಲಿ
ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಿಗೆ ವಾಸ್ತವ್ಯ ಕಲ್ಪಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಪ್ರವಾಸಿಗರ ವಾಸ್ತವ್ಯ ಬಗ್ಗೆ ವಿಶೇಷ ಗಮನಹರಿಸಿ ಅನುಕೂಲ ಕಲ್ಪಿಸುವ ಸವಾಲಿದೆ. ಜೊತೆಗೆ ಪ್ರವಾಸಿಗರ ಭದ್ರತೆಯ ಬಗ್ಗೆಯೂ ಗಮನ ಹರಿಸಬೇಕಾಗಿದೆ.
Chikkamagaluru Trekking: ಟ್ರೆಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್ ಬಲ್ಲಾಳರಾಯನ ದುರ್ಗ ಕೋಟೆ
ಕಳ್ಳಕಾಕರ ಭಯ- ಜಿಲ್ಲಾ ಕೇಂದ್ರದಲ್ಲಿ ಕಳ್ಳ ಕಾಕರ ಭಯ ಹೆಚ್ಚಾಗಿದ್ದು ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳರಿಗೆ ಪ್ರವಾಸಿಗರು ಸುಲಭದ ಟಾರ್ಗೆಟ್ ಆಗಿರುವುದರಿಂದ, ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇರಿಸಬೇಕಾಗಿದೆ.