ಉತ್ತರಕನ್ನಡ: ಗೋಕರ್ಣದಲ್ಲಿ ಮಹಿಳಾ ಪೊಲೀಸ್ ಮೇಲೆ ಪ್ರವಾಸಿಗರಿಂದ ಹಲ್ಲೆ
ಮಹಾಬಲೇಶ್ವರ ದೇವಸ್ಥಾನದ ಕರ್ತವ್ಯದಲ್ಲಿದ್ದ ಲೇಡಿ ಪೊಲೀಸ್‌ಗೆ ಬಾಡಿಗೆ ಬೈಕ್‌ನಲ್ಲಿ ಬಂದ ಇಬ್ಬರು ಕಾಲಿಗೆ ತಾಗಿಸಿದ್ದಾರೆ. ಆಕಸ್ಮಿಕವಾಗಿ ತಾಗಿರಬಹುದು ಎಂದು ತಿರುಗಿ ನೋಡಿದಾಗ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿದ್ದು ಹೆಚ್ಚಿನ ಜನಸಂದಣಿ ಇರುವುದರಿಂದ ಈ ಪ್ರವಾಸಿಗರ ಸ್ಕೂಟಿಯನ್ನು ಹಿಂಬಾಲಿಸಿದ್ದಾರೆ. ದಂಡೆಭಾಗದ ಸಮೀಪ ನಿಲ್ಲಿಸಿ ತಿಳಿ ಹೇಳಲು ಹೋದಾಗ ಏಕಾಏಕಿ ಪೊಲೀಸ್ ಮೇಲೆ ಎರಗಿದ್ದು ಇದನ್ನು ನೋಡಿದ ಸ್ಥಳೀಯರು ಪ್ರವಾಸಿಗರನ್ನು ತಡೆದು ಪೊಲೀಸರನ್ನು ರಕ್ಷಿಸಿದ್ದಾರೆ.
ಗೋಕರ್ಣ(ಫೆ.18): ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೊಲೀಸ್ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಹಾಬಲೇಶ್ವರ ದೇವಸ್ಥಾನದ ಕರ್ತವ್ಯದಲ್ಲಿದ್ದ ಲೇಡಿ ಪೊಲೀಸ್‌ಗೆ ಬಾಡಿಗೆ ಬೈಕ್‌ನಲ್ಲಿ ಬಂದ ಇಬ್ಬರು ಕಾಲಿಗೆ ತಾಗಿಸಿದ್ದಾರೆ. ಆಕಸ್ಮಿಕವಾಗಿ ತಾಗಿರಬಹುದು ಎಂದು ತಿರುಗಿ ನೋಡಿದಾಗ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿದ್ದು ಹೆಚ್ಚಿನ ಜನಸಂದಣಿ ಇರುವುದರಿಂದ ಈ ಪ್ರವಾಸಿಗರ ಸ್ಕೂಟಿಯನ್ನು ಹಿಂಬಾಲಿಸಿದ್ದಾರೆ. ದಂಡೆಭಾಗದ ಸಮೀಪ ನಿಲ್ಲಿಸಿ ತಿಳಿ ಹೇಳಲು ಹೋದಾಗ ಏಕಾಏಕಿ ಪೊಲೀಸ್ ಮೇಲೆ ಎರಗಿದ್ದು ಇದನ್ನು ನೋಡಿದ ಸ್ಥಳೀಯರು ಪ್ರವಾಸಿಗರನ್ನು ತಡೆದು ಪೊಲೀಸರನ್ನು ರಕ್ಷಿಸಿದ್ದಾರೆ.
ಇಸ್ಲಾಂ ಇರುವವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ: ಸಂಸದ ಅನಂತಕುಮಾರ ಹೆಗಡೆ
ಆನಂತರ ಇಬ್ಬರನ್ನು ವಶಕ್ಕೆ ಕರೆದುಕೊಂಡು ಪಡೆದು ಠಾಣೆಗೆ ಬಂದಿದ್ದು, ವಿಚಾರಣೆ ನಡೆಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹಲ್ಲೆ ನಡೆಸಿದ ಹೊರ ರಾಜ್ಯದ ಹುಡುಗಿಯರು ಗಾಂಜಾ ಮುತ್ತಿನಲ್ಲಿದ್ದು, ಎಂಬ ಮಾಹಿತಿ ದೊರೆತಿದೆ. ಪಿಎಸ್‌ಐ ಖಾದರ್‌ಬಾಷಾ ವಿಚಾರಣೆ ಕೈಗೊಂಡಿದ್ದಾರೆ.