Asianet Suvarna News Asianet Suvarna News

ಪಟ್ಟದಕಲ್ಲು ಪ್ರವೇಶ ದರ ಏರಿಕೆ, ‘ಸೌಲಭ್ಯ ಕೊಡದೆ ಇದೆಲ್ಲ ಯಾಕೆ?’

ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲು ತಾಣಕ್ಕೆ ತೆರಳಿ  ಪ್ರವಾಸಿಗರ ಜೇಬಿಗೆ ಬಿಸಿ ತಟ್ಟಲಿದೆ. ಶಿಲ್ಪಕಲೆಯ ಸೌಂದರ್ಯ ನೋಡಲು ತೆರಳುವವರು ಹೆಚ್ಚಿಗೆ ಪ್ರವೇಶ ಶುಲ್ಕ ನೀಡಬೇಕಾಗಿದೆ.

Tourist unhappy with Bagalkot Pattadakal Entrance fee Hike
Author
Bengaluru, First Published Jul 28, 2019, 7:30 PM IST

ಬಾಗಲಕೋಟೆ[ಜು. 28]  ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪಟ್ಟದಕಲ್ಲು ವೀಕ್ಷಣೆಗೆ ಬರುವ ಪ್ರವಾಸಿಗರಿಗೆ  ದುಬಾರಿ  ಪ್ರವೇಶ ದರ ಬಿಸಿ ತಟ್ಟಿದೆ. ಪ್ರವೇಶದ ದರ ಭಾರತೀಯರಿಗೆ 40 ರೂ.  ಹಾಗೂ ವಿದೇಶಿಯರಿಗೆ 600 ರೂ. ನಿಗದಿ ಮಾಡಲಾಗಿದೆ.

ಪ್ರವೇಶದರ ದುಬಾರಿಯಾಗಿದ್ದಕ್ಕೆ ಪ್ರವೇಶದ್ವಾರದ ಬಳಿ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು 35ರೂಪಾಯಿ ಪ್ರವೇಶದರ ಹಾಗೂ ಎಸಿ ದರ 5 ರೂ. ಸೇರಿ ಒಟ್ಟು 40 ರೂ. ಪಡೆಯಲಾಗುತ್ತಿದೆ. ಪಟ್ಟದಕಲ್ಲು ದೇಗುಲ ವೀಕ್ಷಿಸುವ ಪ್ರವಾಸಿಗರಿಗೆ ಯಾವುದೇ ಸೂಕ್ತ ಮೂಲಸೌಕರ್ಯ ಇಲ್ಲ. ಶೌಚಾಲಯ ನಿರ್ವಹಣೆ ಸೂಕ್ತವಿಲ್ಲ. ಇಷ್ಟೆಲ್ಲಾ ಇದ್ದರೂ ದುಬಾರಿ ಪ್ರವೇಶ ದರ ತೆಗೆದುಕೊಳ್ಳೋದು ಏಕೆಂದು ಪ್ರವಾಸಿಗರು ಪ್ರಶ್ನಿಸಿದ್ದಾರೆ.

ಇದು ‘ಕನ್ನಡಿಗ’ನ Rap ಸಾಂಗ್: ಜಬರ್‌ದಸ್ತ್‌ ಇದೆ ಮೇಕಿಂಗ್!

ಒಂಚೂರು ಇತಿಹಾಸ:  ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗು೦ಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯಲ್ಲಿ ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ೦ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ೦ಶದ ಅರಸರು ಏಳನೇ ಮತ್ತು ಎ೦ಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು740  ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು 2ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು ಶೈವ ಸಂಪ್ರದಾದವುಗಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ.

Tourist unhappy with Bagalkot Pattadakal Entrance fee Hike

Follow Us:
Download App:
  • android
  • ios