ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಪ್ರವಾಸಿ ತಾಣಗಳಿಂದಲೇ ಸುಪ್ರಸಿದ್ಧಿಯಾಗಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಪ್ರವಾಸಿ ತಾಣಗಳು ಗಲಭೆ ಕೇಂದ್ರಗಳಾಗಿ ಪರಿವರ್ತನೆಗೊಂಡು, ಕುಖ್ಯಾತಿ ಪಡೆಯುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.05): ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಪ್ರವಾಸಿ ತಾಣಗಳಿಂದಲೇ ಸುಪ್ರಸಿದ್ಧಿಯಾಗಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಪ್ರವಾಸಿ ತಾಣಗಳು ಗಲಭೆ ಕೇಂದ್ರಗಳಾಗಿ ಪರಿವರ್ತನೆಗೊಂಡು, ಕುಖ್ಯಾತಿ ಪಡೆಯುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಲ್ಲಾದರೂ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸಿನಂತ ಬೆಳೆಗಳು ಪ್ರಮುಖ ಆದಾಯದ ಮೂಲಗಳಾದರೆ ಇಲ್ಲಿರುವ ಪ್ರವಾಸಿ ತಾಣಗಳು ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿ ಕೊಡುತ್ತಿವೆ. ಪ್ರವಾಸೋದ್ಯಮವನ್ನೇ ನಂಬಿ ಹೊಟೇಲ್, ರೆಸಾರ್ಟ್, ಹೋಂಸ್ಟೇ ಸೇರಿದಂತೆ ವಿವಿಧ ವಲಯಗಳು ದೊಡ್ಡ ಮಟ್ಟಕ್ಕೆ ಬೆಳೆದಿವೆ. 

ಇಲ್ಲಿನ ಅಬ್ಬಿಫಾಲ್ಸ್, ಮುಗಿಲುಪೇಟೆ, ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ, ಮಡಿಕೇರಿಯ ರಾಜಾಸೀಟು ಸೇರಿದಂತೆ ಹತ್ತು ಹಲವು ಪ್ರವಾಸಿತಾಣಗಳು ದೇಶ, ವಿದೇಶದ ಪ್ರವಾಸಿಗರನ್ನು ಸೆಳೆಯುತ್ತವೆ. ಅವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಂದಲೇ ಇಲ್ಲಿನ ಆರ್ಥಿಕತೆ ಮುನ್ನಡೆಯುತ್ತಿದೆ. ಆದರೆ ಬರುವ ಪ್ರವಾಸಿಗರ ಮೇಲೆ ಇತ್ತೀಚೆಗೆ ಹಲ್ಲೆ ಪ್ರಕರಣಗಳು ತೀವ್ರಗೊಂಡಿವೆ. ಇದೀಗ ಮಡಿಕೇರಿಯ ರಾಜಾಸೀಟಿನ ಮುಂಭಾಗ ವ್ಯಾಪಾರ ಮಾಡುವ ವ್ಯಾಪಾರಿ ಜಂಷದ್ ಮತ್ತು ರಾಜಾಸೀಟು ಗೇಟಿನಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ಜಯಣ್ಣ ನಡುವೆ ಚಿಪ್ಸ್ ವಿಚಾರದಲ್ಲಿ ಗಲಾಟೆಯಾಗಿದೆ. 

ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ಪುಟ್ಟರಂಗಶೆಟ್ಟಿ

ಸೆಕ್ಯುರಿಟಿ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಎಲ ಮಾಡಿರುವ ಜಂಷದ್ನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದು, ವಿಚಾರ ನಡೆಸುತ್ತಿದ್ದಾರೆ. ಈ ರೀತಿ ಗಲಾಟೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಾಸೀಟು ಮುಂಭಾಗದಲ್ಲಿ ತಿಂಡಿ, ತಿನಿಸು ಆಟಿಕೆಗಳ ವ್ಯಾಪಾರವನ್ನು ಸಂಪೂರ್ಣ ಬಂದ್ ಮಾಡಿಸಿದ್ದಾರೆ. ಹೀಗೆ ತೀವ್ರ ಹಲ್ಲೆ, ಗಲಾಟೆಗಳು ನಡೆಯುತ್ತಿರುವುದರಿಂದ ಪ್ರವಾಸಿ ತಾಣಗಳಿಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. 

ಅಷ್ಟಕ್ಕೂ ಈ ಇಬ್ಬರು ಹೊಡದಾಡಿಕೊಂಡಿರುವುದು ತೀರ ಸಿಲ್ಲಿ ವಿಷಯ ಎನ್ನುವುದು ಅಚ್ಚರಿ. ಸೆಕ್ಯುರಿಟಿ ಕೆಲಸ ಮಾಡುವ ಜಯಣ್ಣ ಅವರು ತಮ್ಮ ಮೊಮ್ಮಗನಿಗಾಗಿ ಜಂಷದ್ ಬಳಿ ಆಲೂಗೆಡ್ಡೆ ಚಿಪ್ಸ್ ಕೇಳಿದ್ದರಂತೆ. ಈ ವೇಳೆ ಜಯಣ್ಣ ಅವರು ನಾನೂ ದುಡ್ಡು ಕೊಡಬೇಕಾ, ಫ್ರೀ ಇಲ್ಲವೇ ಎಂದು ಪ್ರಶ್ನಿಸಿದ್ದರಂತೆ. ಅದಕ್ಕೆ ಜಂಷದ್ ಫ್ರೀ ಇಲ್ಲ ಎಂದಾಗ ಜಯಣ್ಣ ಅವರ ಸೊಸೆ ಜಂಷದ್ ಅವರಿಗೆ ಹೋಗಿ ದುಡ್ಡುಕೊಟ್ಟು ಬಂದಿದ್ದರಂತೆ. ಅದಾದ ನಂತರ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಏಕಾಏಕಿ ಬಂದು ಹಲ್ಲೆ ನಡೆಸಿದ್ದಾನೆ ಎಂದು ಹಲ್ಲೆಗೊಳಗಾದ ಜಯಣ್ಣ ಅವರ ಪತ್ನಿ ಸುಶೀಲಾ ದೂರಿದ್ದಾರೆ. 

ಪಂಚಾಯಿತಿ ಕೆಲಸಗಳು ವಿಳಂಬವಾಗದಿರಲಿ: ಶಾಸಕ ಶರತ್‌ ಬಚ್ಚೇಗೌಡ

ಆದರೆ ಬಂಧನಕ್ಕೆ ಒಳಗಾಗಿರುವ ಜಂಷದ್ ಸ್ಥಳೀಯರಿಗೆ ನಾನು ಹೆಚ್ಚಿನ ಬೆಲೆಗೆ ಮಾರಾಟ ಮಾಡದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ. ಆದರೂ ದುಡ್ಡುಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನು ತಿರುಗಿ ಕೇಳಿದಕ್ಕಾಗಿ ಹೆಲ್ಮೆಟ್ ನಿಂದ ಹಲ್ಲೆ ನಡೆಸಿದರು. ಹೀಗಾಗಿ ನಾನೂ ಹೊಡೆದಿದ್ದೇನೆ ಎಂದು ದೂರಿದ್ದಾನೆ. ಏನೇ ಆಗಲಿ ಪ್ರವಾಸಿ ತಾಣಗಳಲ್ಲಿ ಈ ರೀತಿ ಹಲ್ಲೆ, ಜಗಳಗಳು ನಡೆಯುತ್ತಿರುವುದರಿಂದ ಪ್ರವಾಸಿಗರು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರ ಪೊಲೀಸರನ್ನು ನೇಮಿಸಬೇಕಾಗಿದ್ದ ಪ್ರವಾಸೋದ್ಯಮ ಇಲಾಖೆ ಅಗತ್ಯದಷ್ಟು ಪ್ರವಾಸಿ ಪೊಲೀಸರನ್ನು ನೇಮಿಸದೇ ಇರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.