*  ಕುಮ್ಮಟದುರ್ಗದ ಬೆಟ್ಟಕ್ಕೆ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ತಂಡ ಭೇಟಿ*  ಮಾಹಿತಿ ನೀಡಲು ಗೈಡ್‌ಗಳ ನಿಯೋಜಿಸಲು ಚಿಂತನೆ *  ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ವಿದೇಶಿ ಪ್ರವಾಸಿಗರು 

ಗಂಗಾವತಿ(ಅ.10): ಐತಿಹಾಸಿಕ ಸ್ಥಳವಾಗಿರುವ ಸಮೀಪದ ಕುಮ್ಮಟದುರ್ಗಾ ಬೆಟ್ಟಕ್ಕೆ(Kummatadurga Hill) ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ(Tourism Department) ತಂಡ ಶನಿವಾರ ಭೇಟಿ ನೀಡಿ ಸ್ಥಳ ವೀಕ್ಷಿಸಿದ್ದಾರೆ. 

ಡಿಸಿ ವಿಕಾಸ ಕಿಶೋರ್‌ ಸುರಳ್ಕರ್‌ ಮತ್ತು ಪ್ರವಾಸೋದ್ಯಮ(Tourism) ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ ಕುಮಾರ ಅವರು ಕುಮ್ಮಟದುರ್ಗಾ, ವಾಣಿ ಭದ್ರೇಶ್ವರ ದೇವಸ್ಥಾನ, ಸಣ್ಣಾಪುರ ಸಮೀಪವಿರುವ ತುಂಗಭದ್ರಾ ಸಮತೋಲನಾ ಜಲಾಶಯ ಮತ್ತು ಬಾಲ ಆಂಜನೇಯ ದೇವಸ್ಥಾನಗಳಿಗೆ(Temple) ತೆರಳಿ ವೀಕ್ಷಿಸಿದರು. ಕೊಪ್ಪಳ(Koppal) ರಸ್ತೆಯ ಮಾರ್ಗದಲ್ಲಿರುವ ಜಬ್ಬಲಗುಡ್ಡದ ಮೂಲಕ ಕುಮ್ಮಟದುರ್ಗಕ್ಕೆ ತೆರಳಿದ ತಂಡ ಅಲ್ಲಿರುವ ಕೋಟೆ, ಕುದರೆ ಕಲ್ಲು ಸೇರಿದಂತೆ ಪ್ರಮುಖ ಕುರುಹುಗಳನ್ನು ವೀಕ್ಷಿಸಿದರು.

ಪ್ರವಾಸಿಗರಿಗೆ ಕುದರೆ ಸವಾರಿ ಮೂಲಕ ವಿಕ್ಷಣೆ:

ಕೊಪ್ಪಳ, ಗಂಗಾವತಿ(Gangavati) ತಾಲೂಕುಗಳು ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಪ್ರದೇಶವಾಗಿವೆ. ಆನೆಗೊಂದಿ(Anegondi) ಪ್ರದೇಶದಲ್ಲಿರುವ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಅದರಂತೆ ಕುಮ್ಮಟದುರ್ಗವನ್ನು ಪ್ರವಾಸೋಧ್ಯಮ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ತಂಡ ಆಗಮಿಸಿ ವೀಕ್ಷಣೆ ಮಾಡಿದರು.

Koppal| ನೀರಾವರಿ ಹೆಸರಿನಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಹಗ್ಗ-ಜಗ್ಗಾಟ

ಜಬ್ಬಲಗುಡ್ಡದಿಂದ ಕುಮ್ಮಟ ದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಕುದರೆ(Horse) ಕಲ್ಲುವಿನಿಂದ 7 ಕಿ.ಮೀ. ಬೆಟ್ಟಹತ್ತಲು ಪ್ರವಾಸಿಗರಿಗೆ(Tourists)ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಕುದರೆ ಸವಾರಿ ಮೂಲಕ ಕುಮ್ಮಟದುರ್ಗಾ ವೀಕ್ಷಿಸುವುದಕ್ಕೆ ಚಿಂತನೆ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ಟ್ರೆಕ್ಕಿಂಗ್‌(Trekking), ಹಾರ್ಸ್‌ ರೈಡಿಂಗ್‌(Horse Riding) ಮುಂತಾದ ಕಾರ್ಯಕ್ರಮ ರೂಪಿಸಲು ಪೂರ್ವಭಾವಿಯಾಗಿ ವೀಕ್ಷಣೆ ಕೈಗೊಳ್ಳಲಾಗಿದೆ. ಅದರಂತೆ ಹಂಪಿ ಸಮೀಪವಿರುವ ಸಣ್ಣಾಪುರ ಗ್ರಾಮದ ತುಂಗಭದ್ರಾ ಸಮಾನಾಂತರ ಜಲಾಶಯಕ್ಕೂ(Dam) ಪ್ರವಾಸಿಗರು ಆಗಮಿಸುತ್ತಿದ್ದು, ಪ್ರತಿವರ್ಷ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸ್ಥಳೀಯರಿಗೂ ಅನುಕೂಲವಾಗುವ ಉದ್ದೇಶದಿಂದ ಬೋಟಿಂಗ್‌(Boating) ಮತ್ತು ಬರುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಸಿಬ್ಬಂದಿಗಳನ್ನು ಒದಗಿಸುವ ಕಾರ್ಯ ಮಾಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಗೈಡ್‌ಗಳ ನಿಯೋಜನೆ:

ಈ ಪ್ರದೇಶದ ಸ್ಮಾರಕಗಳು(Monument) ಮತ್ತು ದೇವಸ್ಥಾನಗಳ ಪ್ರಸಿದ್ಧಿ ಪಡೆದಿದ್ದು, ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳನ್ನು ನಿಯೋಜಿಸಲು ಚಿಂತನೆ ನಡೆದಿದೆ. ಆನೆಗೊಂದಿ, ಅಂಜನಾದ್ರಿ ಪರ್ವತ(Anjanadri Hill), ಪಂಪಾ ಸರೋವರ, ವಿಜಯನಗರದ ಕೃಷ್ಣದೇವರಾಯದ ಸಮಾಧಿ (60 ಕಾಲಿನ ಮಂಟಪ) ನವ ವೃಂದಾವನ, ಋುಷಿಮುಖ ಪರ್ವತ ಮತ್ತು ಕೊಪ್ಪಳ ರಸ್ತೆಯ ಭಾಗದಲ್ಲಿ ಬರುವ ಕುಮಾರರಾಮ ಬೆಟ್ಟ, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಬಗ್ಗೆ ಪ್ರವಾಸಿಗರಿಗೆ ತಿಳಿ ಹೇಳುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಗೈಡ್‌ಗಳನ್ನು ನಿಯೋಜಿಸುವ ಬಗ್ಗೆ ಚರ್ಚೆ ಮಾಡಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ಕನಕರೆಡ್ಡಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಚಾರಣದ ಡಾ. ಶಿವಕುಮಾರ ಮಾಲಿಪಾಟೀಲ, ಮಂಜುನಾಥ ಗುಡ್ಲಾನೂರ, ಹರನಾಯಕ, ಪಾಮಾನಾಯಕ, ನಿರುಪಾದಿ ಭೋವಿ, ಹರಿಕೃಷ್ಣ, ಪ್ರಹ್ಲಾದ ಕುಲಕರ್ಣಿ, ರಮಾನಾಥ ಬಂಡಾರ್ಕರ, ಮುನಿರಾಬಾದ್‌ ಸಾಮಾಜಿಕ ಅರಣ್ಯ ಇಲಾಖೆಯ ಕೆ.ಎಂ. ನಾಗರಾಜ, ಲಿಂಗರಾಜ, ನಾಗಪ್ಪ ಸಿದ್ದರ, ಶಿವರೆಡ್ಡಿ, ಗ್ರಾಮಸ್ಥರಾದ ಹನುಮಂತಪ್ಪ ಭೋವಿ, ಹುಲುಗಪ್ಪ,ಲಕ್ಷಣ, ನಿರುಪಾದಿ ಸೇರಿದಂತೆ ಜಿಲ್ಲಾಡಳಿತದ ಸಿಬ್ಬಂದಿಗಳು ಇದ್ದರು.