ತ್ರಿಚಕ್ರ ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡ್ತಿರೋ ಯುಟ್ಯೂಬರ್‌ಗಳು!
ಪಂಜಾಬ್ ಮೂಲದ ಇಬ್ಬರು ಯೂಟ್ಯೂಬರ್‌ಗಳಾದ ಗುರುವೇಂದರ್ ಮತ್ತು ವಿಕಾಸ್ ಎಂಬವರು ತ್ರಿಚಕ್ರ ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ಪಡುಬಿದ್ರಿಗೆ ಬಂದಿದ್ದಾರೆ.
ಮೂಲ್ಕಿ (ಫೆ.5) : ಪಂಜಾಬ್ ಮೂಲದ ಇಬ್ಬರು ಯೂಟ್ಯೂಬರ್‌ಗಳಾದ ಗುರುವೇಂದರ್ ಮತ್ತು ವಿಕಾಸ್ ಎಂಬವರು ತ್ರಿಚಕ್ರ ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ಪಡುಬಿದ್ರಿಗೆ ಬಂದಿದ್ದಾರೆ.
ಕಳೆದ ಸೆಪ್ಟಂಬರ್ 24ರಂದು ಪಂಜಾಬ್‌ನಿಂದ ತ್ರಿಚಕ್ರ ಸೈಕಲ್ ಏರಿರುವ ಇವರಿಬ್ಬರು, ಸಾವಿರಾರು ಕಿಲೋಮೀಟರ್‌ಗಳನ್ನು ತ್ರಿಚಕ್ರ ಸೈಕಲ್‌ನಲ್ಲೇ ಇಡೀ ದೇಶದ ಗಡಿಭಾಗಗಳು ಮತ್ತು ಕರಾವಳಿ ಕರ್ನಾಟಕದ ಕಡಲು ತೀರ ಹಾಗೂ ಅನೇಕ ಭಾಗಗಳಲ್ಲಿ ಸಂಚರಿಸಲಿದ್ದಾರೆ.
ಕಿನ್ನಿಗೋಳಿ ಸಮೀಪದ ಐಕಳಕ್ಕೆ ಬಂದ ಗುರುವೇಂದರ್ ಮತ್ತು ವಿಕಾಸ್ ಶನಿವಾರ ಐಕಳದಲ್ಲಿ ನಡೆದ ಕಾಂತಾಬಾರೆ ಬೂದಾಬಾರೆ ಕಂಬಳದಲ್ಲಿ ಭಾಗವಹಿಸಿದರು. ಇವರು ಇನ್ನೆರಡು ದಿನ ಐಕಳಬಾವ ಜೋಡುಕರೆ ಕಂಬಳ ವೀಕ್ಷಣೆ ಮಾಡಲು ಇಲ್ಲೇ ಉಳಿದುಕೊಳ್ಳಲಿದ್ದಾರೆ.
ಐಕಳದಿಂದ ಮಂಗಳೂರು ಮೂಲಕ ಕೇರಳ, ತಮಿಳುನಾಡು, ಛತ್ತೀಸ್‌ಗಡ್ ಮತ್ತಿತರ ರಾಜ್ಯಗಳಿಗೆ ಪ್ರಯಾಣಿಸಲಿದ್ದಾರೆ. ಪ್ರತಿ ದಿನ ಸುಮಾರು 70 ರಿಂದ 80 ಕಿಲೋ ಮೀಟರ್ ಪ್ರಯಾಣಿಸುವ ಇವರು, ತ್ರಿಚಕ್ರ ಸೈಕಲ್‌ನ್ನು ವೆಲ್ಡರ್ ಮೂಲಕ ತಮಗೆ ಬೇಕಾದ ಶೈಲಿಗೆ ಮಾರ್ಪಡಿಸಿಕೊಂಡಿದ್ದಾರೆ. ಅದರಲ್ಲಿ ಸೋಲಾರ್ ಅಳವಡಿಸಿದ್ದರು, ಆದರೆ ಆದು ತಂಬಾ ಭಾರವಾದ್ದರಿಂದ ಸಂಚರಿಸಲ ಕಷ್ಟವಾಗುತ್ತದೆಂದು ಅದನ್ನು ತೆಗೆಸಿದ್ದಾರೆ. ಮೊಬೈಲ್‌ಗೆ ಬೇಕಾದ ಚಾರ್ಜಿಂಗ್ ಪವರ್ ಬ್ಯಾಂಕ್, ಅಡುಗೆಗೆ ಬೇಕಾದ ಪಾತ್ರೆಗಳು, ಅಡುಗೆ ತಯಾರಿ ಮಾಡಲು ಬೇಕಾದ ಬೆಂಕಿ ಒಲೆ, ಬಟ್ಟೆ, ನೀರು, ಅಲ್ಲಲ್ಲಿ ತಂಗಲು ಬೇಕಾದ ಟೆಂಟ್, ಏರ್ ಪಂಪ್ ಇತ್ಯಾದಿ ವಸ್ತುಗಳನ್ನು ತಮ್ಮ ಜೊತೆಗೆ ಇಟ್ಟು ಕೊಂಡು ದೇಶ ಸುತ್ತುತ್ತಿದ್ದಾರೆ. ಇವರಿಬ್ಬರು ಒಳ್ಳೆಯ ಚಿತ್ರ ಪಟುಗಳಾಗಿದ್ದು ಚಿತ್ರ ಬಿಡಿಸಲು ಬೇಕಾದ ಪೇಪರ್ ಮತ್ತು ಸ್ಟ್ಯಾಂಟ್ ಕೂಡ ತಮ್ಮ ಜೊತೆಗೆ ಇಟ್ಟುಕೊಂಡಿದ್ದಾರೆ. ತಮಗೆ ದಿನನಿತ್ಯ 500ರಿಂದ 600 ರುಪಾಯಿ ಖರ್ಚು ವೆಚ್ಚ ಇದೆ ಎಂದು ಗುರುವೇಂದರ್ ಮತ್ತು ವಿಕಾಸ್ ತಿಳಿಸಿದ್ದಾರೆ.
ಚಿಕ್ಕಮಗಳೂರು: ಬತ್ತದ ದುಡಿಯುವ ಉತ್ಸಾಹ, ಛಲದಂಕ ಮಲ್ಲನಂತೆ ಅಂಗವಿಕಲತೆ ಮೆಟ್ಟಿನಿಂತ ಧೀರ..!