ಬೆಂಗಳೂರು: ಹೇ ಕಮಿಷನರ್, ರಸ್ತೆ ಗುಂಡಿ ಕ್ಲಿಯರ್‌ ಮಾಡಿ, ಟಾಮ್‌ ಕ್ರೂಸ್‌ ಎಐ ಚಿತ್ರ!

ಬೆಂಗಳೂರು ನಗರದ ಅನೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಇನ್ನಷ್ಟು ಹೆಚ್ಚಾಗಿವೆ. ಅದರ ಜೊತೆಗೆ ನಗರದ ವಿವಿಧೆಡೆ ವಿದ್ಯುತ್ ವೈರ್‌ಗಳನ್ನು ಅಳವಡಿಸಲು ಕೆಪಿಟಿಸಿಎಲ್ ಕೂಡ ರಸ್ತೆ ಅಗೆದಿರುವ ಕಾರಣ ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸಲಾಗದೇ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. 

Tom Cruise AI Image about Clear the Pothole in Bengaluru grg

ಬೆಂಗಳೂರು(ಡಿ.17):  ನಗರದ ಹಲವೆಡೆ ಬಾಯ್ದೆರೆದಿರುವ ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಹಾಲಿವುಡ್‌ನ ಖ್ಯಾತ ನಟ ಟಾಮ್ ಕ್ರೂಸ್ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ! 'ಹೇ ಬೆಂಗಳೂರು ಬಿಬಿಎಂಪಿ ಕಮಿಷನರ್, ರಸ್ತೆಗುಂಡಿಗಳನ್ನು ಕ್ಲಿಯರ್ ಮಾಡಿ' ಎಂದು ಭಿತ್ತಿಪತ್ರ ಹಿಡಿದುಕೊಂಡು ರಸ್ತೆ ಗುಂಡಿ ಮುಂದೆ ನಿಂತು ಮನವಿ ಮಾಡುವಂತೆ ಎ.ಐ ಸೃಷ್ಟಿತ ಛಾಯಾಚಿತ್ರವನ್ನು ನಮ್ಮ ಬೆಂಗಳೂರು ಬಿಬಿಎಂಪಿ ಹೆಸರಿನ ಎಕ್ಸ್‌ ಖಾತೆಗೆ ಲಿಂಕ್ ಮಾಡಲಾಗಿದೆ. 

ನಗರದ ಅನೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಇನ್ನಷ್ಟು ಹೆಚ್ಚಾಗಿವೆ. ಅದರ ಜೊತೆಗೆ ನಗರದ ವಿವಿಧೆಡೆ ವಿದ್ಯುತ್ ವೈರ್‌ಗಳನ್ನು ಅಳವಡಿಸಲು ಕೆಪಿಟಿಸಿಎಲ್ ಕೂಡ ರಸ್ತೆ ಅಗೆದಿರುವ ಕಾರಣ ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸಲಾಗದೇ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. 

ಇವರೇ ನೋಡಿ ನಮ್ಮ ಬೆಂಗಳೂರಿನ ಹೀರೋಗಳು; ನಾವಷ್ಟೇ ಅಲ್ಲ, ನಮ್ಮವರೂ ಚೆನ್ನಾಗಿರಬೇಕೆಂಬ ಗುಣದವರು!

ಬಹಳಷ್ಟು ಕಡೆಗಳಲ್ಲಿ ರಸ್ತೆಗಳಲ್ಲಿ ಗುಂಡಿಯಾಗಿವೆ. ಇದರಿಂದ ಟ್ರಾಫಿಕ್ ಜಾಮ್ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ವಿಚಾರದ ಬಗ್ಗೆ ಬಿಬಿಎಂಪಿ ಮತ್ತು ಸರ್ಕಾರದ ಗಮನ ಸೆಳೆಯಲು ಟಾಮ್ ಕ್ರೂಸ್ ಹೆಸರಿನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

'ಬೆಂಗಳೂರು ರಸ್ತೆಗಳ ನಿರ್ವಹಣೆ ಬಿಬಿಎಂಪಿ ಬದಲು ELCITA ಮಾಡಲಿ..' ಸರ್ಕಾರಕ್ಕೆ ಆಗ್ರಹಿಸಿದ ಕಿರಣ್ ಮಜುಂದಾರ್ ಶಾ

ಬೆಂಗಳೂರು: ಸಿಲಿಕಾನ್‌ ಸಿಟಿ ಎಂದು ಜಗತ್ತಿಗೆಲ್ಲಾ ಹೇಳುತ್ತಿದ್ದರೂ, ಬೆಂಗಳೂರಿನ ಕುಸಿಯುತ್ತಿರುವ ಮೂಲ ಸೌಕರ್ಯಗಳ ಬಗ್ಗೆ ಸಾರ್ವಜನಿಕರ ಆಕ್ರೋಶ ಮಾತ್ರ ನಿರಂತರವಾಗಿದೆ. ಇದಕ್ಕೆ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಬೆಂಗಳೂರಿನ ಗುಂಡಿಗಳ ಬಗ್ಗೆ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಗುಂಡಿಗಳಿಂದ ಕೂಡಿದ ರಸ್ತೆಗಳನ್ನು ದುರಸ್ತಿ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪರಿಹಾರವನ್ನು ಪ್ರಸ್ತಾಪ ಮಾಡಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರನ್ನು ಅವಲಂಬಿಸುವ ಬದಲು ನಗರದ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಗೆ (ELCITA) ನಿಯೋಜಿಸಬೇಕೆಂದು 71 ವರ್ಷದ ಉದ್ಯಮಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದರು, 

ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, 'ನಾವು ELCITA ಹೊಂದಿರುವಾಗ, ಹೆಚ್ಚಿನ ವಾಹನಗಳು ಸೇರುವ ಟ್ರಾಫಿಕ್‌ ವಲಯಗಳಲ್ಲಿ ಕಳಪೆ ಗುಣಮಟ್ಟದ ಗುತ್ತಿಗೆದಾರರು ಏಕೆ ಬಳಸುತ್ತಿದ್ದೇವೆ ಅನ್ನೋದೇ ಅರ್ಥವಾಗುತ್ತಿಲ್ಲ..' ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ನೇರವಾಗಿ ಪ್ರಶ್ನೆ ಮಾಡಿರುವ ಅವರು, ರಸ್ತೆಗಳ ದುರಸ್ತಿ ಹಾಗೂ ನಿರ್ವಹಣೆಗೆ ELCITA ಪರಿಣತಿಯೇ ಸಮರ್ಥ ಪರಿಹಾರ ಎಂದು ಹೇಳಿದ್ದರು.

ರಸ್ತೆಯ ಮೇಲೆ ನಿಲ್ಲುವ ನೀರುವ ಗುಂಡಿಗಳನ್‌ನು ಉಂಟು ಮಾಡುತ್ತದೆ ಎಂದು ಕಿರಣ್‌ ಮಜುಂದಾರ್‌ ಶಾ ಗಮನಸೆಳೆದಿದ್ದಾರೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು ಬೆಂಗಳೂರಿನ ರಸ್ತೆ ಅವನತಿಗೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. ಇದೇ ವೇಳೆ ELCITA ಮೂಲ ಸೌಕರ್ಯವನ್ನು ಅವರು ಶ್ಲಾಘಿಸಿದ್ದಾರೆ. ಇದರಲ್ಲಿ 75 ಮಳೆನೀರು ಕೊಯ್ಲು ಹೊಂಡಗಳು ಮತ್ತು ಭಾರೀ ಮಳೆಯ ಸಮಯದಲ್ಲಿ ನೀರಿನ ಹರಿವನ್ನು ತಗ್ಗಿಸಲು ವಿನ್ಯಾಸಗೊಳಿಸಲಾದ ಸಮರ್ಥ ಒಳಚರಂಡಿ ಜಾಲವನ್ನು ಒಳಗೊಂಡಿದೆ ಎಂದಿದ್ದರು.

ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಡಾಂಬರ್ ಬದಲು ಇಕೋಫಿಕ್ಸ್ ಬಳಕೆ; ಏನಾದ್ರೂ ಬಳಸಿ ಒಟ್ನಲ್ಲಿ ಗುಂಡಿ ಮುಚ್ಚಿಸಿ!

ಹೇ ಬೆಂಗಳೂರು ಬಿಬಿಎಂಪಿ ಕಮಿಷನರ್, ರಸ್ತೆಗುಂಡಿಗಳನ್ನು ಕ್ಲಿಯರ್ ಮಾಡಿ' ಎಂದು ಭಿತ್ತಿಪತ್ರ ಹಿಡಿದುಕೊಂಡು ರಸ್ತೆ ಗುಂಡಿ ಮುಂದೆ ನಿಂತು ಮನವಿ ಮಾಡುವಂತೆ ಎ.ಐ ಸೃಷ್ಟಿತ ಛಾಯಾಚಿತ್ರವನ್ನು ನಮ್ಮ ಬೆಂಗಳೂರು ಬಿಬಿಎಂಪಿ ಹೆಸರಿನ ಎಕ್ಸ್‌ ಖಾತೆಗೆ ಲಿಂಕ್ ಮಾಡಲಾಗಿದೆ. 

ಇನ್ನೊಂದು ಚಿತ್ರವನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪ್ರದೇಶ ಹೊಂಡಗಳು ಹಾಗೂ ಹದಗೆಟ್ಟ ರಸ್ತೆಗಳ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ, ELCITA ನಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಾನಿಕ್ಸ್ ಸಿಟಿ ಸಂಪೂರ್ಣವಾಗಿ ಭಿನ್ನವಾಗಿದೆ. ಅಲ್ಲಿನೇ ಸ್ಥಿತಿಯೇ ಬೇರೆ ರೀತಿಯಲ್ಲಿದೆ. ವಿಚಾರ ಏನೆಂದರೆ, ಅದು ಸ್ಮಾರ್ಟ್‌ ಮ್ಯಾನೇಜ್‌ಮೆಂಟ್‌ ಎಂದು ಹೇಳಿದ್ದರು. 

Latest Videos
Follow Us:
Download App:
  • android
  • ios