ವಿರೋಧದ ನಡುವೆಯೂ ಇಂದು 'ಟಿಪ್ಪು ನಿಜ ಕನಸುಗಳು' ಪುಸ್ತಕ ಬಿಡುಗಡೆ
ಕಿರಿದಾದ ವೇದಿಕೆ, ಕಿಕ್ಕಿರಿದು ತುಂಬಿದ ಜನರು. ಎಲ್ಲೆಡೆ 'ಭಾರತ್ ಮಾತಾಕೀ ಜೈ' ಘೋಷಣೆ. ಟಿಪ್ಪು ವಿರುದ್ಧ ವಾಗ್ಬಾಣಗಳು. ಇದು ಇವತ್ತು ಮೈಸೂರಿನಲ್ಲಿ ನಡೆದ ಟಿಪ್ಪು ನಿಜ ಕನಸುಗಳ ನಾಟಕ ಕೃತಿ ಬಿಡುಗಡೆಯ ಕಾರ್ಯಕ್ರಮದ ಹೈಲೈಟ್ಸ್.
ವರದಿ : ಮಧು.ಎಂ.ಚಿನಕುರಳಿ.
ಮೈಸೂರು (ನ.13) : ಕೊನೆಗೂ 'ಟಿಪ್ಪು ನಿಜ ಕನಸುಗಳು' ನಾಟಕ ಕೃತಿ ವಿರೋಧದ ನಡುವೆಯೂ ಘಟಾನುಘಟಿ ನಾಯಕರು ಪುಸ್ತಕ ಬಿಟುಗಡೆ ಮಾಡಿದರು. ಕೃತಿ ಬಿಡುಗಡೆ ಕಾರ್ಯಕ್ರಮದುದ್ದಕ್ಕೂ ಟಿಪ್ಪುವಿನ ಕ್ರೌರ್ಯ ಬಿಚ್ಚಿಟ್ಟರು. ಜತೆಗೆ ಟಿಪ್ಪುವಿನ ಪರ ಮಾತನಾಡುವವರ ವಿರುದ್ಧ ಹರಿಹಾಯ್ದರು.
ಇದೊಂದು ಐತಿಹಾಸಿಕ ಕೃತಿಯಾಗಿದ್ದು. ಇದುವರೆಗೆ ಟಿಪ್ಪುವಿನ ಕರಾಳ ಮುಖಗಳನ್ನು ಮುಚ್ಚಿಟ್ಟಿದ್ದ ವಿಚಾರಗಳನ್ನು ಮತ್ತಷ್ಟು ಬಯಲುಗೊಳಿಸಿದೆ. ಈ ಕೃತಿ ನಾಟಕ ಅಷ್ಟೇ ಅಲ್ಲ, ಇದು ಸಿನಿಮಾ ರೂಪದಲ್ಲಿ ಬಂದ್ರೂ ಭರ್ಜರಿ ಯಶಸ್ವಿಯಾಗುತ್ತೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇಂದು 'ಟಿಪ್ಪು ನಿಜ ಕನಸುಗಳು' ಪುಸ್ತಕ ಬಿಡುಗಡೆ
ಕಿರಿದಾದ ವೇದಿಕೆ, ಕಿಕ್ಕಿರಿದು ತುಂಬಿದ ಜನರು. ಎಲ್ಲೆಡೆ 'ಭಾರತ್ ಮಾತಾಕೀ ಜೈ' ಘೋಷಣೆ. ಟಿಪ್ಪು ವಿರುದ್ಧ ವಾಗ್ಬಾಣಗಳು. ಇದು ಇವತ್ತು ಮೈಸೂರಿನಲ್ಲಿ ನಡೆದ ಟಿಪ್ಪು ನಿಜ ಕನಸುಗಳ ನಾಟಕ ಕೃತಿ ಬಿಡುಗಡೆಯ ಕಾರ್ಯಕ್ರಮದ ಹೈಲೈಟ್ಸ್.
ಹೌದು ಇಂದು ಮೈಸೂರಿನ ರಂಗಯಾಣ ಭೂಮಿ ಗೀತದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ರಚಿಸಿರುವ 'ಟಿಪ್ಪು ನಿಜವಾದ ಕನಸುಗಳು' ಕೃತಿ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಕೃತಿ ಲೋಕಾರ್ಪಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಲೇಖಕ ರೋಹಿತ್ ಚಕ್ರತೀರ್ಥ, ವಾಗ್ಮೀ ವಾದಿರಾಜ ಸೇರಿ ಹಲವರು ಭಾಗವಹಿಸಿದ್ರು. ಕೃತಿ ಬಿಡುಗಡೆ ಬಳಿಕ ಲೇಖಕ ಅಡ್ಡಂಡ ಕಾರ್ಯಾಪ್ಪ ಕೃತಿಯ ಕುರಿತ ಸವಿವರವಾಗಿ ತಿಳಿಸಿದ್ರು.
ನಂತರ ಮಾತನಾಡಿದ ವಾದಿರಾಜ್ ಹಾಗೂ ರೋಹಿತ್ ಚಕ್ರತೀರ್ಥ ಟಿಪ್ಪು ವಿರುದ್ಧದ ಹೋರಾಟಗಳ ಮೆಲುಕು ಹಾಕಿದ್ರು. ಗಿರೀಶ್ ಕಾರ್ನಾಡ್ ಸೇರಿದಂತೆ ಟಿಪ್ಪು ಪರ ಪುಸ್ತಕ ಹಾಗೂ ನಾಟಕ ಬರೆದವರನ್ನು ಗೇಲಿ ಮಾಡಿದ್ರು. ಟಿಪ್ಪು ಆಡಳಿತದಲ್ಲಿ ಹಿಂದುಗಳ ವಿರುದ್ಧ ಆದ ಆನ್ಯಾಯಗಳನ್ನ ಖಂಡಿಸಿದರು.. ಇದರ ಜೊತೆಗೆ ಟಿಪ್ಪುವಿನಿಂದ ಆದ ಅನ್ಯಾಯವನ್ನ ಪ್ರತಿ ಹಳ್ಳಿಗಳಿಗೆ ತಲುಪಿಸುವಂತೆ ಓದುಗರಿಗೆ ಕರೆ ನೀಡಿದ್ರು.
ಬಳಿಕ ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿದರು. ಟಿಪ್ಪುವನ್ನ ಸಮರ್ಥಿಸಿಕೊಂಡಿದ್ದ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ತನ್ವೀರ್ ಸೇಠ್ 'ದಿ ಸೋರ್ಡ್ ಆಫ್ ಟಿಪ್ಪು' ಧಾರವಾಹಿ ನಿರ್ಮಿಸಿದ್ದ ಸಂಜಯ್ ಖಾನ್, ಸಾಹಿತಿ ಗಿರೀಶ್ ಕಾರ್ನಾಡ್ ಸೇರಿ ಎಲ್ಲಾ ಪ್ರಗತಿಪರರನ್ನ ಹಿಗ್ಗಾಮುಗ್ಗಾ ಝಾಡಿಸಿದ್ರು. ಇದೇ ವೇಳೆ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನ ಸತತ ನಾಲ್ಕು ವರ್ಷಗಳ ಹೋರಾಟದಿಂದ ಬದಲಾಯಿಸಿದ್ದೇನೆ ಎಂದ ಅವರು, ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಕ್ಕೆ 'ಚಾಮರಾಜ ಒಡೆಯರ್' ಎಂದು ನಾಮಕರಣ ಮಾಡುವುದಾಗಿ ಘೋಷಣೆ ಮಾಡಿದರು. ಅಷ್ಟೇ ಅಲ್ಲ; ಟಿಪ್ಪು ಹಾಗೂ ಮುಸ್ಲಿಮರ ವಿರುದ್ಧ ಹರಿಹಾಯ್ದ ಪ್ರತಾಪ ಸಿಂಹ, ಇವರಿಬ್ಬರಲ್ಲೂ ಕ್ರೌರ್ಯ ಇತ್ತೇ ಹೊರತು ಶೌರ್ಯ ಇರಲಿಲ್ಲಾ. ಟಿಪ್ಪು ಯಾವ ಸೀಮೆ ಹುಲಿ? ಕೋಟೆ ಬೋನಿನಲ್ಲಿ ಸತ್ತು ಬಿದ್ದವನು ಹುಲಿ ಹೇಗೆ ಆಗುತ್ತಾನೆ ಎಂದು ಪ್ರಶ್ನಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವನರನ್ನ ತರಾಟೆಗೆ ತೆಗದುಕೊಂಡ ಪ್ರತಾಪ ಸಿಂಹ ಅವರು, ಟಿಪ್ಪು ಒಂದು ವೇಳೆ ಕೊಡವರು, ಮೇಲುಕೋಟೆ ಬ್ರಾಹ್ಮಣರು ಹಾಗೂ ಮದಕರಿನಾಯಕನ ವಂಶಸ್ಥರಿಗೆ ಮಾಡಿದ ಅನ್ಯಾಯವನ್ನು ನಿಮ್ಮ ಸಮುದಾಯದವರಿಗೆ ಮಾಡಿದ್ದರೆ ಟಿಪ್ಪು ಜಯಂತಿ ಮಾಡುತ್ತಿದ್ರಾ ಅಂಥಾ ಪ್ರಶ್ನಿಸಿದ್ರು.
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಮಾತನಾಡಿ, ಪುಸ್ತಕ ಓದುವುದರಿಂದ ಅಥವಾ ನಾಟಕ ನೋಡುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಹಿಂದಿನ ಇತಿಹಾಸ ಏನಾಗಿದೆ ಎಂಬುದು ಕೃತಿ, ನಾಟಕಗಳ ಮೂಲಕ ತಿಳಿಯಬಹುದಷ್ಟೇ.. ಹೀಗಾಗಿ ಟಿಪ್ಪುವಿನ ನೈಜ ಇತಿಹಾಸ ತಿಳಿಸಿದ ಈ ಕೃತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆಂದು ಕರೆ ನೀಡಿದ್ರು.
ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ:
ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ ತಟ್ಟಿತು. ಈ ಕಾರ್ಯಕ್ರಮವನ್ನು ತನ್ವೀರ್ ಸೇಠ್ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯಲ್ಲಿ ಬಂದೊಬಸ್ತ್ ಮಾಡಲಾಯಿತು. 5ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನಕ್ಕೆ ವಿರೋಧ: ಪಿಐಎಲ್ ಸಲ್ಲಿಸಲು ತನ್ವೀರ್ ಸೇಠ್ ನಿರ್ಧಾರ
ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನ ಪರಿಶೀಲನೆ ಮಾಡಿ ಕಳುಹಿಸಲಾಗುತ್ತಿತ್ತು. ನಾಟಕ ಕೃತಿ ಬಿಡುಗಡೆ ಕೇವಲ ಸ್ಯಾಂಪಲ್ ಆಗಿದ್ದು ಇದೇ ತಿಂಗಳ ನವೆಂಬರ್ 20 ರಿಂದ ನಾಟಕ ಪ್ರದರ್ಶನ ಆರಂಭವಾಗಲಿದೆ. ಸದ್ಯ ಟಿಪ್ಪು ಕೃತಿ ಬಿಡುಗಡೆ ಆಗಿರುವುದು ಪರಿಸ್ಥಿತಿ ಬುದಿ ಮುಚ್ಚಿದ ಕೆಂಡವಾಗಿದೆ.