ಗ್ಯಾಸ್‌ ಸಂಪರ್ಕ ಇ-ಕೆವೈಸಿಗೆ ಕಾಲ ಮಿತಿ ವದಂತಿ : ಇಲ್ಲಿದೆ ಸ್ಪಷ್ಟನೆ

ಗ್ಯಾಸ್ ಏಜೆನ್ಸಿಗಳಲ್ಲಿ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರ ಇ-ಕೆವೈಸಿಯನ್ನು ಮಾಡಿಸಲು ಇದುವರೆವಿಗೂ ಯಾವುದೇ ಕಾಲಬದ್ಧ ಮಿತಿಯನ್ನು ವಿಧಿಸಿರುವುದಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಅನಿಲ ಸಂಪರ್ಕ ಗ್ರಾಹಕತ್ವದ ತಮ್ಮ ನೈಜತೆಯನ್ನು ಸಾಬೀತುಪಡಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ದತ್ತಾತ್ರೆಯ ಗಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Time limit rumor for gas connection e-KYC: Here is the clarification snr

ಶಿರಾ: ಗ್ಯಾಸ್ ಏಜೆನ್ಸಿಗಳಲ್ಲಿ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರ ಇ-ಕೆವೈಸಿಯನ್ನು ಮಾಡಿಸಲು ಇದುವರೆವಿಗೂ ಯಾವುದೇ ಕಾಲಬದ್ಧ ಮಿತಿಯನ್ನು ವಿಧಿಸಿರುವುದಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಅನಿಲ ಸಂಪರ್ಕ ಗ್ರಾಹಕತ್ವದ ತಮ್ಮ ನೈಜತೆಯನ್ನು ಸಾಬೀತುಪಡಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ದತ್ತಾತ್ರೆಯ ಗಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸ್ವಾಮ್ಯದ ಐಒಸಿ, ಬಿಪಿಸಿ ಮತ್ತು ಎಚ್‌ಪಿಸಿ ಕಂಪನಿಗಳಿಂದ ಲೈಸೆನ್ಸ್ ಪಡೆದಿರುವ ಗ್ಯಾಸ್ ಏಜೆನ್ಸಿಗಳಲ್ಲಿ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರ ನೈಜತೆಯನ್ನು ಪರಿಶೀಲಿಸಿ, ಅರ್ಹರಲ್ಲದವರನ್ನ ಕೈಬಿಡುವ ಕಾರಣದಿಂದ ಅನಿಲ ಸಂಪರ್ಕ ಗ್ರಾಹಕರ ಇ-ಕೆವೈಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯಾರ ಹೆಸರಿನಲ್ಲಿ ಅನಿಲ ಸಂಪರ್ಕ ಇದೆಯೋ ಅಂತಹ ಗ್ರಾಹಕರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದೆ. ಇ-ಕೆವೈಸಿಯನ್ನು ಆಧಾರ್ ಆಧಾರಿತ ಬೆರಳಚ್ಚು ಮತ್ತು ಫೇಸ್ ಆರ್‌ಡಿ ಮೂಲಕ ಮಾಡಲಾಗುತ್ತದೆ. ಈ ಕೆಲಸವನ್ನು ಸಾರ್ವಜನಿಕರು ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಮಾಡಿಸಬಹದು ಮತ್ತು ಡೆಲಿವರಿ ಹುಡುಗರು ಭರ್ತಿ ಸಿಲಿಂಡನ್ನು ನೀಡುವ ಸಂದರ್ಭದಲ್ಲಿ ಅವರ ಬಳಿಯೂ ಸಹ ಇ-ಕೆವೈಸಿ ಮಾಡಿಸಬಹುದು. ಒಂದು ವೇಳೆ ತಮಗೆ ಸದರಿ ವಿಷಯದ ಸಂಬಂಧ ಯಾವುದಾದರೂ ಗೊಂದಲ ಇದ್ದಲ್ಲಿ ಮತ್ತು ಮಾಹಿತಿ ಕೊರತೆ ಇದ್ದಲ್ಲಿ ಸಂಬಂಧಿಸಿದ ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios