Mandya: ಚುನಾವಣೆಗೆ ಇವರಿಗೆ ಮಾತ್ರ ಬಿಜೆಪಿ ಟಿಕೆಟ್

  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಹೊಸಬರಿಗೆ ಮಣೆ ಹಾಕದೇ ನಿಷ್ಠ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

  tickets for loyal, party workers in Next Election In Mandya  BJP snr

ಪಾಂಡವಪುರ (ಅ.21) :  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಹೊಸಬರಿಗೆ ಮಣೆ ಹಾಕದೇ ನಿಷ್ಠ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪಟ್ಟಣದಲ್ಲಿ ಕಿಯೋನಿಕ್ಸ್ ನಿರ್ದೇಶಕ ಎಚ್‌.ಎನ್‌.ಮಂಜುನಾಥ್‌ ನೇತೃತ್ವದಲ್ಲಿ ನಡೆದ ಮೂಲ ಬಿಜೆಪಿ (BJP)  ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಪ್ರಾಮಾಣಿಕ, ನಿಷ್ಠೆಯುಳ್ಳವರು ಹಾಗೂ ನಿರಂತರವಾಗಿ ಕಾರ್ಯಕರ್ತರ ಸಮಸ್ಯೆ ಆಲಿಸುವ ಮಂದಿಗೆ ಟಿಕೆಟ್‌ (Ticket)  ನೀಡಬೇಕು. ವಿಧಾನಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು.

ಕಳೆದ 31 ವರ್ಷಗಳ ಹಿಂದಿನ ಆಯೋಧ್ಯೆ ರಾಮಮಂದಿರದ ಹೋರಾಟದ ಕಾಲದಿಂದಲೂ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಕಟ್ಟಲು ಮುಂದಾಗಬೇಕಿದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

ಎಚ್‌.ಎನ್‌.ಮಂಜುನಾಥ್‌ ಮಾತನಾಡಿ, ಪಿಎಲ್ಡಿ ಬ್ಯಾಂಕ್‌, ಕಸಬಾ ಸೊಸೈಟಿ, ಗೃಹ ನಿರ್ಮಾಣ ಸಹಕಾರ ಸಂಘ, ಹಿರೇಮರಳಿ ಗ್ರಾಪಂ, ತಾಲೂಕು ಪಂಚಾಯ್ತಿಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಕಡೆ ದಿನ ಅಭ್ಯರ್ಥಿ ಕಣಕ್ಕಿಳಿಸಿ ಕಡಿಮೆ ಅಂತರ ಸೋಲಾಯಿತು. ಜತೆಗೆ ಕಳೆದ ಜಿಪಂ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಟಾಗಿದೆ ಎಂದರು.

ಆಯೋಧ್ಯೆ ರಾಮಮಂದಿರದ ಹೋರಾಟ ಆರಂಭವಾದ ದಿನದಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಮೂಲ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಜತೆಗೆ ನಾನೂ ಕೂಡ 31 ವರ್ಷಗಳಿಂದಲೂ ಕೇಸರಿ ಟವೆಲ… ಹಾಕಿ, ಪಕ್ಷದ ಬ್ಯಾನರ್‌ , ಬಂಟಿಂW್ಸ… ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಯಾವ ಪಕ್ಷದವರು ಬಂದರೂ ಇದೇ ಕೇಸರಿ ಟವೆಲ… ಹಾಕಿಕೊಂಡಿದ್ದೇವೆ. ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಿಲ್ಲ. ಕೇಸರಿ ಟವೆಲ… ಹಾಕಿಕೊಂಡು ನಾವು ಸುಮ್ಮನೇ ಕೂರಬೇಕೆ ಎಂದು ಪ್ರಶ್ನಿಸಿದರು.

ಕೆಲ ದಿನಗಳ ಹಿಂದೆ ನಾನೇ ಬಿಜೆಪಿ ಅಭ್ಯರ್ಥಿ, ನನ್ನನ್ನು ಬೆಂಬಲಿಸಿ ಎನ್ನುವ ಕರಪತ್ರಗಳು ಎಲ್ಲೆಡೆ ಹರಿದಾಡಿದೆ. ಪಕ್ಷ ಇನ್ನೂ ಯಾರು ಅಭ್ಯರ್ಥಿ ಎಂಬುದನ್ನು ತೀರ್ಮಾನಿಸಿಲ್ಲ. ಜತೆಗೆ ಯಾರಿಗೂ ಟಿಕೆಚ್‌ ಭರವಸೆ ನೀಡಿಲ್ಲ. ಈ ಮಧ್ಯೆ ನಾನೇ ಅಭ್ಯರ್ಥಿ ಎಂದರೆ ನಾವು ಯಾರೂ ಇಲ್ವ. ಕೇಸರಿ ಟವೆಲ… ಹಾಕಿಕೊಂಡು ತಿರುಗಲು ನಮಗೆ ಹುಚ್ಚ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ನಿರ್ಣಯದ ಜತೆಗೆ ಪಕ್ಷ ಯಾರಿಗೆ ಟಿಕೆಚ್‌ ನೀಡಿದರೂ ಅದಕ್ಕೆ ಬದ್ದನಿದ್ದು, ನಮ್ಮೆಲ್ಲರ ವಿಶ್ವಾಸ ಗಳಿಸಿ ಟಿಕೆಚ್‌ ತರುವ ಯಾರೇ ಅಭ್ಯರ್ಥಿಯಾದರೂ ಅವರ ಪರ ಪ್ರಚಾರ ನಡೆಸುವೆ ಎಂದರು.

ಕಾರ್ಯಕರ್ತರ ಒತ್ತಾಸೆಯಂತೆ 2004ರಲ್ಲಿ ಅಭ್ಯರ್ಥಿಯಾಗಿದ್ದೆ. 54ಸಾವಿರ ಮತ ಪಡೆದವರು ಶಾಸಕರಾಗಿದ್ದರು. ಈಗ ಗೆಲ್ಲುವವರ ಮತಗಳಿಕೆ ಹೆಚ್ಚಾಗುತ್ತಿದೆ. ಬಳಿಕ 2008ರಲ್ಲಿ ನನ್ನ ಹೆಸರು ಪ್ರಸ್ತಾಪವಾದರೂ ಮಾಜಿ ಶಾಸಕ ಕೆಂಪೇಗೌಡರಿಗೆ ಟಿಕೆಚ್‌ ನೀಡಲಾಯಿತು. 2013ರಲ್ಲಿ ಜಿ.ಎಂ.ರವೀಂದ್ರ ಅವರಿಗೆ ಟಿಕೆಚ್‌ ನೀಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

2018ರ ಚುನಾವಣೆ ವೇಳೆ ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಎಚ್‌.ಮಂಜುನಾಥ್‌ ಬಿಜೆಪಿ ಸೇರ್ಪಡೆಗೊಂಡರು. ಮಾಜಿ ಸಿಎಂ ಯಡಿಯೂರಪ್ಪ ಟಿಕೆಚ್‌ ಭರವಸೆ ನೀಡಿದರೂ ಪಲಾಯನ ಮಾಡಿದರು. ಚಪ್ಪಾಳೆ ತಟ್ಟಿಸಿಕೊಂಡ ಅವರು ಈಗ ನಾನು ಬಿಜೆಪಿ ಸೇರಿಲ್ಲ, ಯಡಿಯೂರಪ್ಪ ಅವರೇ ನಮ್ಮ ಮನೆಗೆ ಬಂದಿದ್ದರು ಎಂಬ ನಗೆಪಾಟಿಲಿಗೆ ಈಡಾಗುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಂತರ ಸುಂಡಹಳ್ಳಿ ಸೋಮಶೇಖರ್‌ ಬಿ ಫಾರಂ ತಂದರು. ಅವರು ಕಾರ್ಯಕರ್ತರನ್ನೂ ಮಾತನಾಡಿಸಲೇ ಇಲ್ಲ. ಯಾರೇ ಅಭ್ಯರ್ಥಿಯಾಗಲಿ ಚುನಾವಣೆಯಲ್ಲಿ ಸೋಲು, ಗೆಲುವಾದರೂ ಚುನಾವಣೆ ಮುಗಿದ ನಂತರವೂ ಕಾರ್ಯಕರ್ತರ ಜತೆಗೆ ಇರಬೇಕು. ಸುಮ್ಮನೇ ಪಕ್ಷಕ್ಕೆ ಬಂದು ಹೊರ ಹೋಗುವಂತಹರಿಗೆ ಮಣೆ ಹಾಕಬಾರದು ಎಂದರು.

ಉಸಿರಿರುವರೆಗೆ ಬಿಜೆಪಿ ಇರುವ ನಾನು ಕೂಡ ಆಕಾಂಕ್ಷಿತನಾಗಿದ್ದೇನೆ. ಎಂಪಿ, ಎಂಎಲ…ಎ ಯಾವ ಚುನಾವಣೆಗೆ ಕಾರ್ಯಕರ್ತರು ನಿಲ್ಲಿ ಎಂದರೂ ನಾನು ಸಿದ್ದನಿದ್ದೇನೆ. ಜತೆಗೆ ಯಾರನ್ನಾಗಲಿ ಎಂಎಲ…ಎ ಮಾಡಿಕೊಂಡು ಬರುವ ಶಕ್ತಿ ಇದೆ. ಕಾಯಕರ್ತರನ್ನು ಮಾತಾಡಿಸದೇ ಅಭ್ಯರ್ಥಿ ಮಾಡಬಾರದು ಎಂದರು.

ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ, ಮುಖಂಡರಾದ ಎಚ್‌.ಕೆ.ದೊರೆಸ್ವಾಮಿ, ಕಾಡೇನಹಳ್ಳಿ ಮರಿಸ್ವಾಮಿಗೌಡ, ಪ.ಮ.ರಮೇಶ್‌, ಆರ್‌.ಚನ್ನಕೇಶವ, ಹಿರೇಮರಳಿ ರವಿಕುಮಾರ್‌, ಚಿಕ್ಕಾಡೆ ತಿಮ್ಮೇಗೌಡ, ಮನು, ಶ್ರೀನಿವಾಸನಾಯಕ, ಕೃಷ್ಣಪ್ಪ, ಶಂಭೂನಹಳ್ಳಿ ಮಹದೇವು, ಸೋಮಾಚಾರಿ, ಎನ್‌.ಭಾಸ್ಕರ್‌ ಇತರರಿದ್ದರು.

20ಕೆಎಂಎನ್‌ ಡಿ20

ಪಾಂಡವಪುರದಲ್ಲಿ ನಡೆದ ಮೂಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ಬಿಜೆಪಿ ಮುಖಂಡ, ಕಿಯೋನಿP್ಸ… ನಿರ್ದೇಶಕ ಎಚ್‌.ಎನ್‌.ಮಂಜುನಾಥ್‌ ಮಾತನಾಡಿದರು.

Latest Videos
Follow Us:
Download App:
  • android
  • ios