ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ ಚಿರತೆ ಮಗುವಿನ ಪ್ರಾಣವನ್ನೇ ಬಲಿ ಪಡೆದಿದೆ.
ಬಳ್ಳಾರಿ[ಡಿ.11] ಮನೆಮುಂದೆ ಆಟವಾಡುತ್ತಿದ್ದ ಮಗು ಚಿರತೆ ದಾಳಿಗೆ ಬಲಿಯಾಗಿದೆ. ಕಂಪ್ಲಿ ತಾಲೂಕಿನ ಸೋಮಲಾಪುರದಲ್ಲಿ ನಡೆದಿರುವ ಪ್ರಕರಣ ಕರುಳು ಹಿಂಡುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿರತೆ ದಾಳಿಗೆ ಬಲಿಯಾಗಿರುವ ಬಾಲಕ ನಾಡೋಜ ದಿ. ಬುರ್ರಕಥಾ ಈರಮ್ಮ ಅವರ ಮೊಮ್ಮಗ. ದರೋಜಿ ಕರಡಿ ಧಾಮದ ಬಳಿಯ ಗ್ರಾಮದ ವೆಂಕಟರಾಜು (3 ) ಎಂಬ ಪುಟ್ಟ ಮಗುವನ್ನು ಚಿರತೆ ನೋಡುನೋಡುತ್ತಿದ್ದಂತೆ ಹೊತ್ತೊಯ್ದಿದೆ.
ಮನೆಯವರೆಲ್ಲ ನೋಡನೋಡುತ್ತಿದ್ದಂತೆ ಮಗುವನ್ನು ಚಿರತೆ ಎಳೆದೊಯ್ದಿದೆ. ರಕ್ತ ಹೀರಿ ಸಾಯಿಸಿದ ಚಿರತೆ ಮಗುವಿನ ಶವವನನ್ನು ಊರ ಹಿಂಭಾಗದ ಪೊದೆಯಲ್ಲಿ ಹಾಕಿದ್ದು ಊರವರು ಹುಡುಕಾಟ ನಡೆಸಿದಾಗ ಪತ್ತೆಯಾಗಿದೆ.
