Asianet Suvarna News Asianet Suvarna News

ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಮೂರು ನಿಗೂಢ ಅಸ್ಥಿಪಂಜರ ಪತ್ತೆ

ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್‌ನಲ್ಲಿ ಕಬೀರಾನಂದ ಸಮುದಾಯ ಭವನದ ಎದುರಿಗೆ ಇರುವ ಪಾಳು ಮನೆಯಲ್ಲಿ ಶವ ಪತ್ತೆಯಾಗಿದ್ದು, ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ. ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆ. ಕಳೆದ 8-10 ವರ್ಷಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 

Three Skeletons Found in Dilapidated house in Chitradurga grg
Author
First Published Dec 29, 2023, 9:03 AM IST

ಚಿತ್ರದುರ್ಗ(ಡಿ.29):  ಚಿತ್ರದುರ್ಗ ನಗರ ಹೊರವಲಯ ಪಾಳು ಬಿದ್ದ ಮನೆಯೊಂದರಲ್ಲಿ ಮೂರು ನಿಗೂಢ ಶವಗಳು ಪತ್ತೆಯಾಗಿದ್ದು ಅಸ್ಥಿಪಂಜರ ರೂಪದಲ್ಲಿ ಗೋಚರಿಸಿವೆ. ಶವಗಳ ಕಂಡು ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.

ನಗರದ ಚಳ್ಳಕೆರೆ ಟೋಲ್ ಗೇಟ್‌ನಲ್ಲಿ ಕಬೀರಾನಂದ ಸಮುದಾಯ ಭವನದ ಎದುರಿಗೆ ಇರುವ ಪಾಳು ಮನೆಯಲ್ಲಿ ಶವ ಪತ್ತೆಯಾಗಿದ್ದು, ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ. ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆ. ಕಳೆದ 8-10 ವರ್ಷಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 

ಚಿತ್ರದುರ್ಗ ಮುರುಘಾ ಮಠದ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ ತುಮಕೂರು ಪಿಡಬ್ಲ್ಯುಡಿ ಇಲಖೆಯಲ್ಲಿ ಇಇ ಆಗಿ ಕೆಲಸ ಮಾಡಿದ್ದರು. ನಿವೃತ್ತಿ ಬಳಿಕ ಚಿತ್ರದುರ್ಗದಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ,ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.

Follow Us:
Download App:
  • android
  • ios